ಸಲಿಂಗ ವಿವಾಹ ಬೆಂಬಲಿಸಿದ ತಮಿಳು ನಿರ್ದೇಶಕ ವೆಟ್ರಿಮಾರನ್

ವಿಶ್ವ ಲೈಂಗಿಕ ಆರೋಗ್ಯ ದಿನ ಸಂದರ್ಭದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರು ಸಲಿಂಗ ವಿವಾಹ ಬೆಂಬಲಿಸಿ ಮಾತನಾಡಿದ್ದಾರೆ.
ವೆಟ್ರಿಮಾರನ್
ವೆಟ್ರಿಮಾರನ್
Updated on

ಚೆನ್ನೈ: ವಿಶ್ವ ಲೈಂಗಿಕ ಆರೋಗ್ಯ ದಿನ ಸಂದರ್ಭದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರು ಸಲಿಂಗ ವಿವಾಹ ಬೆಂಬಲಿಸಿ ಮಾತನಾಡಿದ್ದಾರೆ.

ಮಾನವ ಸರಪಳಿ ರಚನೆ ಒಳಗೊಂಡ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ವಿಶ್ವ ಲೈಂಗಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ಸಲಿಂಗ ವಿವಾಹವನ್ನು ಉಲ್ಲೇಖಿಸಿದರು. ಬಾಂಗ್ಲಾದೇಶದ ಮಹಿಳೆ ಮತ್ತು ತಮಿಳುನಾಡಿನ ಮಹಿಳೆಯ ನಡುವೆ ನಡೆದ ಮದುವೆ ಪ್ರಸ್ತಾಪಿಸಿ ಇಂಥ ವಿವಾಹಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.

LGBTQ ಗೆ ಸಂಬಂಧಿಸಿದಂತೆ ಭಾರತದಲ್ಲಿ ತಮಿಳುನಾಡು ಅತ್ಯಂತ ಮುಕ್ತ ರಾಜ್ಯಗಳಲ್ಲಿ ಒಂದಾಗಿದೆ ತಮಿಳುನಾಡಿನ ಸುಭಿಕ್ಷಾ ಸುಬ್ರಮಣಿ ಅವರು ತಮ್ಮ ಪ್ರೀತಿಯ ಟೀನಾ ದಾಸ್ ಅವರನ್ನು ಸಾಂಪ್ರದಾಯಿಕ ತಮಿಳು ವಿವಾಹಶೈಲಿಯಲ್ಲಿ ವಿವಾಹವಾದರು. ಟೀನಾ ಬಾಂಗ್ಲಾದೇಶದ ಸಂಪ್ರದಾಯವಾದಿ ಹಿಂದೂ ಕುಟುಂಬದಿಂದ ಬಂದವರು ಮತ್ತು ಸುಬಿಕ್ಷಾ ಕೆನಡಾದಲ್ಲಿ ನೆಲೆಸಿರುವ ತಮಿಳು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಇಬ್ಬರೂ ಕೆನಡಾದ ಕ್ಯಾಲ್ಗರಿಯಲ್ಲಿ ನೆಲೆಸಿದ್ದಾರೆ. ಮದುವೆ ಅದ್ಧೂರಿಯಾಗಿ ನೆರವೇರಿರುವುದು ಸಂತಸ ತಂದಿದೆ ಎಂದು ವೆಟ್ರಿಮಾರನ್ ಹೇಳಿದ್ದಾರೆ

ಇವುಗಳನ್ನು ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ. ಇಂಥವರನ್ನು ಹಾಗೂ ತೃತೀಯ ಲಿಂಗದ ವ್ಯಕ್ತಿಗಳನ್ನು ಗೌರವದಿಂದ ಕಾಣಬೇಕು ಪ್ರತಿಯೊಬ್ಬರೂ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಜ್ಞೆ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ  ಡಾ.ಕೆ.ಎಸ್.ಜಯರಾಣಿ  ಅವರು ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ದೌರ್ಜನ್ಯ ತಡೆಗಟ್ಟಬೇಕು. ಇಂಥ ಸಾಮಾಜಿಕ ಪಿಡುಗನ್ನು ಕೊನೆಗಾಣಿಸಲು ಜಾಗೃತಿ ಮೂಡಿಸಬೇಕು ಎಂದರು.

ಶಾಲಾ ಪಠ್ಯಕ್ರಮದ ಭಾಗವಾಗಿ ಲೈಂಗಿಕ ಶಿಕ್ಷಣವನ್ನು ಸೇರ್ಪಡೆ ಮಾಡುವುದರ ಸಂಬಂಧ ಕೇರಳ ಹೈಕೋರ್ಟ್ ಅಭಿಪ್ರಾಯವನ್ನು ಸ್ವಾಗತಿಸಿದ ಅವರು ಇದನ್ನು ತಮಿಳುನಾಡಿನಲ್ಲಿಯೂ ಜಾರಿಗೊಳಿಸಬೇಕು ಎಂದು ಹೇಳಿದರು.

ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಆಯೋಗದ ಪೂರ್ಣ ಸಮಯದ ಸದಸ್ಯ ನ್ಯಾಯಮೂರ್ತಿ ಎಸ್.ವಿಮಲಾ ಮತ್ತು ಚಲನಚಿತ್ರ ನಟ ಮತ್ತು ನಿರ್ದೇಶಕ ಪಾಂಡ್ಯರಾಜನ್ ಸಮಾರಂಭದಲ್ಲಿ  ಭಾಗವಹಿಸಿದ್ದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com