ಟಿ.ಎನ್ ಸೀತಾರಾಂ, ನಾಗೇಂದ್ರ ಶಾ, ಮತ್ತು ಪಿ.ಶೇಷಾದ್ರಿ
ಟಿ.ಎನ್ ಸೀತಾರಾಂ, ನಾಗೇಂದ್ರ ಶಾ, ಮತ್ತು ಪಿ.ಶೇಷಾದ್ರಿ

'ಮತ್ತೆ ಮಾಯಾಮೃಗ' ಮೂಲಕ ಕಿರುತೆರೆಗೆ ಮರಳಿದ ನಿರ್ದೇಶಕ ಟಿ.ಎನ್. ಸೀತಾರಾಮ್; ಸಿರಿಕನ್ನಡ ಚಾನೆಲ್ ನಲ್ಲಿ ಪ್ರಸಾರ

25 ವರ್ಷಗಳ ಹಿಂದೆ ಅಪಾರ ಜನಪ್ರಿಯತೆ ಪಡೆದ ಧಾರಾವಾಹಿ 'ಮಾಯಾಮೃಗ'. ಟಿ.ಎನ್. ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯ ಮುಂದುವರೆದ ಭಾಗ 'ಮತ್ತೆ ಮಾಯಾಮೃಗ' ಈಗ ಶುರುವಾಗುತ್ತಿದೆ.
Published on

25 ವರ್ಷಗಳ ಹಿಂದೆ ಅಪಾರ ಜನಪ್ರಿಯತೆ ಪಡೆದ ಧಾರಾವಾಹಿ 'ಮಾಯಾಮೃಗ'. ಟಿ.ಎನ್. ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯ ಮುಂದುವರೆದ ಭಾಗ 'ಮತ್ತೆ ಮಾಯಾಮೃಗ' ಈಗ ಶುರುವಾಗುತ್ತಿದೆ.

ಅದೇ ತಂಡದ ಈ ಹೊಸ ಪ್ರಯತ್ನದಲ್ಲಿ ಅನೇಕರು ಭಾಗಿಯಾಗಿದ್ದಾರೆ. ಈ ಬಾರಿ ಸಿರಿ ಕನ್ನಡ ವಾಹಿನಿಯಲ್ಲಿ 'ಮತ್ತೆ ಮಾಯಾಮೃಗ' ಧಾರಾವಾಹಿ ಪ್ರಸಾರವಾಗಲಿದೆ. ಸಿರಿ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 3ನೇ ವಾರದಿಂದ ಈ ಧಾರಾವಾಹಿ ಪ್ರಸಾರವಾಗಲಿದೆ' ಟಿಎನ್ ಸೀತಾರಾಮ್, ಪಿ ಶೇಷಾದ್ರಿ ಮತ್ತು ನಾಗೇಂದ್ರ ಶಾ ಧಾರಾವಾಹಿಯ ನಿರ್ದೇಶಕರಾಗಿದ್ದಾರೆ.

ಆ ಕಾಲದಲ್ಲೇ ಆಗಿದ್ದರೆ ಅವರದ್ದೇ ಎರಡನೇ ಕಥೆ ಮಾಡಬಹುದಿತ್ತು. ಈಗ ಅವರ ಮುಂದಿನ ಜನರೇಷನ್ ಕಥೆ ಹೇಳಬೇಕು. ಈಗ ಅತೀ ವೇಗದಲ್ಲಿ ಜಗತ್ತು ಸಾಗುತ್ತಿದೆ. ಸಂಬಂಧಗಳ ಮೌಲ್ಯ ಕಡಿಮೆ ಆಗಿದೆ. ಹಣದ ವಿಚಾರದಲ್ಲೂ ನಾವು ಬದಲಾಗಿದ್ದೇವೆ. ಬ್ಯಾಂಕ್ಗೆ ಹೋಗುವ ಕೆಲಸವೇ ಇಲ್ಲ. ಮೊಬೈಲ್ನಲ್ಲೇ ಎಲ್ಲವನ್ನು ಮಾಡಬಹುದು. ಹಿಂದಿನ ಬಾರಿ ಶಾಸ್ತ್ರಿಗಳ ಕಥೆ ಹೇಳಿದ್ದೆವು. ಈಗ ನಾವು ಹಳೆಯ ತಂಡವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಶಾಸ್ತ್ರಿಗಳು ಇವತ್ತಿನ ವೇಗದ ಜಗತ್ತಿಗೆ ಹೇಗೆ ಹೊಂದಿಕೊಂಡಿದ್ದಾರೆ, ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಕಥೆ ಸಾಗಲಿದೆ' ಎಂದು ಟಿ.ಎನ್. ಸೀತಾರಾಮ್ ಹೇಳಿದರು.

ಮಾಯಾಮೃಗ, ಮುಕ್ತ ಮನ್ವಂತರ, ಮುಕ್ತ ಮುಕ್ತ, ಮಹಾಪರ್ವ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಸೀತಾರಾಮ್ ಅವರು ಕೊನೆಯದಾಗಿ ಮಗಳು ಜಾನಕಿ ಧಾರಾವಾಹಿ ನಿರ್ದೇಶಿಸಿದ್ದರು. ಮಾಯಾಮೃಗ ಧಾರಾವಾಹಿಯಲ್ಲಿ ಅವಿನಾಶ್, ಮಾಳವಿಕಾ ಅವಿನಾಶ್‌, ರಾಜೇಶ್ ನಟರಂಗ, ವೀಣಾ ಸುಂದರ್ ಮೊದಲಾದವರು ನಟಿಸಿದ್ದರು. ಅವರು ಈ ಧಾರಾವಾಹಿಯಲ್ಲೂ ಅಭಿನಯಿಸಲಿದ್ದಾರೆ. ಇದರ ಜತೆಗೆ ಯುವಪೀಳಿಗೆ ಕಥೆ ಹೇಳಲು ಸಾಕಷ್ಟು ಹೊಸ ಪಾತ್ರಗಳು ಸೇರ್ಪಡೆ ಆಗಿದೆ. 'ಮತ್ತೆ ಮಾಯಾಮೃಗ' ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com