68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಸೂರ್ಯ, ಅಜಯ್ ದೇವಗನ್

ಸೂರರೈ ಪೊಟ್ರು ಮತ್ತು ತನ್ಹಾಜಿ: ದಿ ಅನ್‌ಸಂಗ್ ವಾರಿಯರ್‌ ಚಿತ್ರದ ಅಭಿನಯಕ್ಕಾಗಿ ನಟ ಸೂರ್ಯ ಮತ್ತು ಅಜಯ್ ದೇವಗನ್ ಅವರು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಗಳನ್ನು ಹಂಚಿಕೊಂಡಿದ್ದಾರೆ. 
ಅಜಯ್ ದೇವಗನ್ ಮತ್ತು ಸೂರ್ಯ
ಅಜಯ್ ದೇವಗನ್ ಮತ್ತು ಸೂರ್ಯ

ನವದೆಹಲಿ: ಸೂರರೈ ಪೊಟ್ರು ಮತ್ತು ತನ್ಹಾಜಿ: ದಿ ಅನ್‌ಸಂಗ್ ವಾರಿಯರ್‌ ಚಿತ್ರದ ಅಭಿನಯಕ್ಕಾಗಿ ನಟ ಸೂರ್ಯ ಮತ್ತು ಅಜಯ್ ದೇವಗನ್ ಅವರು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಗಳನ್ನು ಹಂಚಿಕೊಂಡಿದ್ದಾರೆ. 

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಈ ವೇಳೆ ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಅಜಯ್ ದೇವಗನ್ ಅವರಿಗೆ ಇದು ಮೂರನೇ ಅತ್ಯುತ್ತಮ ನಟ ಪ್ರಶಸ್ತಿಯಾಗಿದೆ. ಅವರು ಈ ಹಿಂದೆ 1998 ರ ಚಲನಚಿತ್ರ ಝಖ್ಮ್ ಮತ್ತು ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.

ಸೂರರೈ ಪೊಟ್ರು ಚಿತ್ರಕ್ಕಾಗಿ ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಸೂರರೈ ಪೊಟ್ರು ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತ ಮತ್ತು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದೆ.

ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ: (ಫೀಚರ್ ಫಿಲ್ಮ್ಸ್ )
ಅತ್ಯುತ್ತಮ ಚಲನಚಿತ್ರ: ಸೂರರೈ ಪೊಟ್ರು
ಅತ್ಯುತ್ತಮ ನಿರ್ದೇಶನ: ಸಚಿ, ಅಯ್ಯಪ್ಪನಂ ಕೊಶಿಯುಮ್
ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ, ಸೂರರೈ ಪೊಟ್ರು
ಅತ್ಯುತ್ತಮ ನಟ: ಅಜಯ್ ದೇವಗನ್ (ತಾನ್ಹಾಜಿ) ಸೂರ್ಯ (ಸೂರರೈ ಪೊಟ್ರು)
ಅತ್ಯುತ್ತಮ ಪೋಷಕ ನಟಿ: ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಶಿವರಂಜನಿಯುಂ ಇನ್ನುಮ್ ಸಿಲಾ ಪೆಂಗಲುಮ್
ಅತ್ಯುತ್ತಮ ಪೋಷಕ ನಟ: ಬಿಜು ಮೆನನ್, ಎಕೆ ಅಯ್ಯಪ್ಪನಂ ಕೋಶಿಯುಮ್
ಅತ್ಯುತ್ತಮ ತೆಲುಗು ಚಿತ್ರ: ಕಲರ್ ಫೋಟೋ
ಅತ್ಯುತ್ತಮ ತಮಿಳು ಚಿತ್ರ: ಶಿವರಂಜನಿಯುಂ ಇನ್ನುಮ್ ಸಿಲಾ ಪೆಂಗಲ್ಲುಮ್
ಅತ್ಯುತ್ತಮ ಮಲಯಾಳಂ ಚಿತ್ರ: ತಿಂಕಲಜ್ಚ ನಿಶ್ಚಯಂ
ಅತ್ಯುತ್ತಮ ಮರಾಠಿ ಚಿತ್ರ: ಗೋಷ್ಟ ಏಕ ಪೈತಾನಿಚಿ
ಅತ್ಯುತ್ತಮ ಕನ್ನಡ ಚಿತ್ರ: ಡೊಳ್ಳು
ಅತ್ಯುತ್ತಮ ಹಿಂದಿ ಚಿತ್ರ: ಟೂಲ್‌ಸಿದಾಸ್ ಜೂನಿಯರ್
ಅತ್ಯುತ್ತಮ ಬೆಂಗಾಲಿ ಚಿತ್ರ: ಅವಿಜಾಟ್ರಿಕ್
ಅತ್ಯುತ್ತಮ ಅಸ್ಸಾಮಿ ಚಿತ್ರ: ಬ್ರಿಡ್ಜ್
ವಿಶೇಷ ಉಲ್ಲೇಖ: ವಾಂಕು (ಮಲಯಾಳಂ), ಜೂನ್ (ಮರಾಠಿ), ಅವ್ವಾಂಚಿತ್ (ಮರಾಠಿ), ಗೊಡಕಾತ್ (ಮರಾಠಿ), ಟೂಲ್ಸಿದಾಸ್ ಜೂನಿಯರ್ (ಹಿಂದಿ)
ಅತ್ಯುತ್ತಮ ತುಳು ಚಿತ್ರ: ಜೀತಿಗೆ
ಅತ್ಯುತ್ತಮ ಹರ್ಯಾನ್ವಿ ಚಿತ್ರ: ದಾದಾ ಲಕ್ಷ್ಮಿ
ಅತ್ಯುತ್ತಮ ದಿಮಾಸಾ ಚಿತ್ರ: ಸೆಂಖೋರ್
ಅತ್ಯುತ್ತಮ ಸಾಹಸ ನಿರ್ದೇಶನ: ಎಕೆ ಅಯ್ಯಪ್ಪನಂ ಕೊಶಿಯುಮ್
ಅತ್ಯುತ್ತಮ ನೃತ್ಯ ಸಂಯೋಜನೆ: ನಾಟ್ಯಂ (ತೆಲುಗು)
ಅತ್ಯುತ್ತಮ ಸಾಹಿತ್ಯ: ಸೈನಾ
ಅತ್ಯುತ್ತಮ ಸಂಗೀತ ನಿರ್ದೇಶನ: ಅಲಾ ವೈಕುಂಠಪುರಮುಲೋ (ಹಾಡುಗಳು): ಥಮನ್ ಎಸ್
(ಹಿನ್ನೆಲೆ): ಸೂರರೈ ಪೊಟ್ರು
ಅತ್ಯುತ್ತಮ ಮೇಕಪ್: ನಾಟ್ಯಂ
ಅತ್ಯುತ್ತಮ ನಿರ್ಮಾಣ ವಿನ್ಯಾಸ: ಕಪ್ಪೆಲಾ
ಅತ್ಯುತ್ತಮ ಸಂಕಲನ: ಶಿವರಂಜನಿಯುಂ ಇನ್ನುಂ ಸಿಲಾ ಪೆಂಗಲ್ಲುಂ
ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು
ಅತ್ಯುತ್ತಮ ಚಿತ್ರಕಥೆ: ಸೂರರೈ ಪೊಟ್ರು
ಅತ್ಯುತ್ತಮ ಸಂಭಾಷಣೆ ಲೇಖಕ: ಮಂಡೇಲಾ
ಅತ್ಯುತ್ತಮ ಛಾಯಾಗ್ರಹಣ: ಅವಿಜಾತ್ರಿಕ್ (ದಿ ವಾಂಡರ್ಲಸ್ಟ್ ಆಫ್ ಅಪು)
ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂಚಮ್ಮ, ಎಕೆ ಅಯ್ಯಪ್ಪನಂ ಕೋಶಿಯುಮ್
ಅತ್ಯುತ್ತಮ ಹಿನ್ನೆಲೆ ಗಾಯಕ: ರಾಹುಲ್ ದೇಶಪಾಂಡೆ, ಮಿ ವಸಂತರಾವ್
ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಲನಚಿತ್ರ: ಮನಃ ಅರು ಮನುಹ್ (ಅಸ್ಸಾಂ)
ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯ: ಮಧ್ಯಪ್ರದೇಶ

ನಾನ್-ಫೀಚರ್ ಚಲನಚಿತ್ರಗಳು
ಅತ್ಯುತ್ತಮ ನಿರೂಪಣೆ: ರಾಪ್ಸೋಡಿ ಆಫ್ ರೈನ್ಸ್ – ಮಾನ್ಸೂನ್ಸ್ ಆಫ್ ಕೇರಳ
ಅತ್ಯುತ್ತಮ ಸಂಕಲನ: ಬಾರ್ಡರ್‌ಲ್ಯಾಂಡ್ಸ್
ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು
ಅತ್ಯುತ್ತಮ ಆನ್-ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್: ಮ್ಯಾಜಿಕಲ್ ಫಾರೆಸ್ಟ್
ಅತ್ಯುತ್ತಮ ಛಾಯಾಗ್ರಹಣ: ಶಬ್ದಿಕ್ಕುನ್ನ ಕಾಳಪ್ಪ
ಅತ್ಯುತ್ತಮ ನಿರ್ದೇಶನ: ಓ ದಟ್ಸ್ ಭಾನು
ಕೌಟುಂಬಿಕ ಮೌಲ್ಯಗಳ ಮೇಲಿನ ಅತ್ಯುತ್ತಮ ಚಿತ್ರ: ಕುಂಕುಮಾರ್ಚನ್
ಅತ್ಯುತ್ತಮ ಕಿರು ಕಾಲ್ಪನಿಕ ಚಿತ್ರ: ಕಚಿಚಿನಿತು
ಅತ್ಯುತ್ತಮ ತನಿಖಾ ಚಿತ್ರ: ದಿ ಸೇವಿಯರ್: ಬ್ರಿಗ್. ಪ್ರೀತಮ್ ಸಿಂಗ್
ಅತ್ಯುತ್ತಮ ಪರಿಶೋಧನಾ ಚಿತ್ರ: ವೀಲಿಂಗ್ ದಿ ಬಾಲ್
ಅತ್ಯುತ್ತಮ ಶಿಕ್ಷಣ ಚಿತ್ರ: ಡ್ರೀಮಿಂಗ್ ಆಫ್ ವರ್ಡ್ಸ್
ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ: ಜಸ್ಟೀಸ್ ಡಿಲೇಯ್ಡ್ ಬಟ್ ಡೆಲಿವರ್ಡ್ಡ್
ಅತ್ಯುತ್ತಮ ಪರಿಸರ ಚಿತ್ರ: ಮನಃ ಅರು ಮನುಹ್
ಅತ್ಯುತ್ತಮ ಪ್ರಚಾರ ಚಿತ್ರ: ಸರೌಂಟಿಂಗ್ ಚಾಲೆಂಜಸ್
ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರ: ನಾದದ ನವನೀತ ಡಿಆರ್ ಪಿಟಿ ವೆಂಕಟೇಶಕುಮಾರ್
ಅತ್ಯುತ್ತಮ ಜೀವನಚರಿತ್ರೆ ಚಿತ್ರ: ಪಬುಂಗ್ ಶ್ಯಾಮ್

ಅತ್ಯುತ್ತಮ ಜನಾಂಗೀಯ ಚಿತ್ರ: ಮಂಡಲ್ ಕೆ ಬೋಲ್
ಅತ್ಯುತ್ತಮ ನಾನ್-ಫೀಚರ್ ಫಿಲ್ಮ್: ಟೆಸ್ಟಿಮನಿ ಆಫ್ ಅನಾ
ನಿರ್ದೇಶಕರ ಅತ್ಯುತ್ತಮ ಚೊಚ್ಚಲ ನಾನ್-ಫೀಚರ್ ಚಿತ್ರ: ಪರಿಯಾ
ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ: ದಿ ಲಾಂಗೆಸ್ಟ್ ಕಿಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com