ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾದ ‘ಸಿಂಗಾರ ಸಿರಿಯೆ’ ಸಾಂಗ್ ರಿಲೀಸ್: 'ನಾಗ'ನ ಜಾನಪದ ರಾಗಗಳೇ ಹಾಡಿಗೆ ಸ್ಫೂರ್ತಿ!

ಸೆಪ್ಟಂಬರ್ 30 ರಂದು ಸಿನಿಮಾ ರಿಲೀಸ್ ಆಗಲಿದ್ದು, ಇತ್ತೀಚೆಗೆ ರಿಲೀಸ್ ಆಗಿದ್ದ ಸಿನಿಮಾದ ಟ್ರೇಲರ್ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಈಗ ಚಿತ್ರದ ಹೊಸ ಸಾಂಗ್ ರಿಲೀಸ್ ಆಗಿದೆ.
ಕಾಂತಾರ ಸಿನಿಮಾ ಸ್ಟಿಲ್
ಕಾಂತಾರ ಸಿನಿಮಾ ಸ್ಟಿಲ್

ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ  "ಕಾಂತಾರ" ಚಿತ್ರದ "ಸಿಂಗಾರ ಸಿರಿಯೆ" ಎಂಬ ಅದ್ಭುತ ಹಾಡು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದು, ನಾಯಕ ನಟನಾಗಿ ಕೂಡಾ ಅವರೇ ಕಾಣಿಸಿಕೊಳ್ಳಲಿದ್ದಾರೆ.  

ಸೆಪ್ಟಂಬರ್ 30 ರಂದು ಸಿನಿಮಾ ರಿಲೀಸ್ ಆಗಲಿದ್ದು, ಇತ್ತೀಚೆಗೆ ರಿಲೀಸ್ ಆಗಿದ್ದ ಸಿನಿಮಾದ ಟ್ರೇಲರ್ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಈಗ ಚಿತ್ರದ ಹೊಸ ಸಾಂಗ್ ರಿಲೀಸ್ ಆಗಿದೆ. ‘ಸಿಂಗಾರ ಸಿರಿಯೇ' ಹೆಸರಿನ ಹಾಡು ಬಿಡುಗಡೆ ಆಗಿದ್ದು, ಪ್ರೇಕ್ಷಕರು ಈ ಹಾಡಿಗೆ ತಲೆದೂಗಿದ್ದಾರೆ. ಈ ಸಾಂಗ್ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಳ್ಳುತ್ತಿದೆ.

ಅಜನೀಶ್ ಲೋಕನಾಥ್ ಸಂಗೀತ ನೀಡಿ, ಪ್ರಮೋದ್ ಮರವಂತೆ ಬರೆದಿರುವ "ಸಿಂಗಾರ ಸಿರಿಯೆ" ಹಾಡಿನಲ್ಲಿ ಕರುನಾಡ ಸಂಸ್ಕ್ರತಿಯ ಭವ್ಯ ಪರಂಪರೆಯನ್ನು ಮನಮುಟ್ಟುವಂತೆ ತೋರಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಹಲವು ಜನಪದ ನೃತ್ಯಗಳ ಹಿನ್ನೆಲೆಯಲ್ಲಿ ನಾಯಕ, ನಾಯಕಿಗೆ ಪ್ರೇಮದ ವಿಷಯ ತಿಳಿಸುವ ರೀತಿ ಈ ಹಾಡಿನಲ್ಲಿ ಸೊಗಸಾಗಿ ಮೂಡಿಬಂದಿದೆ.   ವಿಜಯ್ ಪ್ರಕಾಶ್, ಅನನ್ಯಾ ಭಟ್ ಹಾಗೂ ಪನ್ನಾರ್ ವಲ್ಟುರ್​ ಗಾಯನ ಹಾಡಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ.

ತಮ್ಮ ಹುಟ್ಟೂರಾದ ಕೆರಾಡಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಿರುವ ನಿರ್ದೇಶಕ ರಿಷಬ್, ಈ ಹಾಡು ತನ್ನ ತವರೂರಿನ ನೆನಪುಗಳಿಗೆ ಹತ್ತಿರವಾಗಿದೆ ಎಂದು ಹೇಳುತ್ತಾರೆ. ಹಾಡಿನ ಆರಂಭಿಕ ದೃಶ್ಯದಲ್ಲಿ ಹಿರಿಯ ಯಕ್ಷಗಾನ ಕಲಾವಿದ ನಾಗರಾಜ ಪಾಣಾರ್ ವಾಲ್ತೂರ್ ಮತ್ತು ಅವರ ಮಕ್ಕಳು ಇದ್ದಾರೆ. ನಾಗ ಎಂದೇ ಪ್ರಸಿದ್ದವಾಗಿರುವ ಇವರು ಯಕ್ಷಗಾನ ಮತ್ತು ಕಂಬಳ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ಪರಿಚಿತರು ಮತ್ತು ನಮ್ಮ ಮನೆಯವರು ಎರಡು ತಲೆಮಾರುಗಳಿಂದ ಪರಿಚಿತರು. ಅವರು ಕುಂದಾಪುರದ ಜಾನಪದ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ.

ನಾನು ಯಾವಾಗಲೂ ಇದನ್ನು ಮುಂದಿನ ಪೀಳಿಗೆಗಾಗಿ ಸಂಗ್ರಹಿಸಿಲು ಬಯಸಿದ್ದೆ. ಕಾಂತಾರದಲ್ಲಿ ನನಗೆ ಅವಕಾಶ ಸಿಕ್ಕಿತು. ನಾಗನಿಗೆ ಹಾಡು ಹಾಡಲು ಹೇಳಿ ಆ ಟ್ಯೂನ್ ಅನ್ನು ಅಜನೀಶ್ ಅವರಿಗೆ ಕಳುಹಿಸಿದ್ದೆ. ಅದು ಅಂತಿಮವಾಗಿ ಸಿಂಗಾರ ಸಿರಿಯೇ ಹಾಡಿನೊಂದಿಗೆ ಹೊರಬಂದಿದೆ.  ಹಾಡಿನ ಚಿತ್ರೀಕರಣ ನನ್ನ ಊರಿನ ರಸ್ತೆಗಳಲ್ಲಿ ನಡೆದಿದೆ. ನಾನು ಪ್ರತಿ ರಸ್ತೆಯೊಂದಿಗಿನ ಸಂಪರ್ಕ, ಬಹಳಷ್ಟು ನೆನಪುಗಳಿವೆ ಎಂದು ತಿಳಿಸಿದ್ದಾರೆ. ಇದೆಲ್ಲವನ್ನೂ ಲವ್ ಟ್ರ್ಯಾಕ್‌ನಲ್ಲಿ ಹೊರತರಲಾಗಿದೆ ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com