ಜೊತೆ ಜೊತೆಯಲಿ ಸೀರಿಯಲ್ ಸೆಟ್ ನಲ್ಲಿ 'ಆರ್ಯವರ್ಧನ್' ಕಿರಿಕ್: ಕಿರುತೆರೆಯಿಂದಲೇ ನಟ ಅನಿರುದ್ಧ್ಗೆ ಗೇಟ್ ಪಾಸ್?
ಜೀ ಕನ್ನಡದಲ್ಲಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಸೆಟ್ನಲ್ಲಿ ನಡೆದ ಫೈಟಿಂಗ್ ಕಥೆಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ನಟ ಅನಿರುದ್ಧ್ಗೆ ಧಾರಾವಾಹಿಯಿಂದಲೇ ಗೇಟ್ ಪಾಸ್ ನೀಡಿದ್ದಾರೆ ಎನ್ನಲಾಗುತ್ತಿದೆ.
Published: 20th August 2022 11:13 AM | Last Updated: 20th August 2022 11:13 AM | A+A A-

ಅನಿರುದ್ಧ್
ಜೊತೆ ಜೊತೆಯಲ್ಲಿ ಸೆಟ್ನಲ್ಲಿ ಅನಿರುದ್ಧ್ ಮಾಡ್ತಿದ್ದ ಕಿರಿಕಿರಿಯಿಂದ ಇಡೀ ತಂಡವೇ ಬೇಸತ್ತು ಹೋಗಿತ್ತು. ಹೀಗಾಗಿ ಅನಿರುದ್ಧ್ ವಿರುದ್ಧ ದೂರಿನ ಮಳೆಯಾಗಿದೆ. ಈ ಕುರಿತು ಸಭೆ ಕೂಡ ನಡೆದಿದ್ದು, ಸಭೆಯ ನಿರ್ಧಾರದಂತೆ ಅನಿರುದ್ಧ್ರನ್ನು ಸೀರಿಯಲ್ನಿಂದ ಮಾತ್ರವಲ್ಲ ಕಿರುತೆರೆಯಿಂದಲೇ ಬ್ಯಾನ್ ಮಾಡಲಾಗಿದೆಯಂತೆ.
ಜೀ ಕನ್ನಡದಲ್ಲಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಸೆಟ್ನಲ್ಲಿ ನಡೆದ ಫೈಟಿಂಗ್ ಕಥೆಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ನಟ ಅನಿರುದ್ಧ್ಗೆ ಧಾರಾವಾಹಿಯಿಂದಲೇ ಗೇಟ್ ಪಾಸ್ ನೀಡಿದ್ದಾರೆ ಎನ್ನಲಾಗುತ್ತಿದೆ.
ನಟ ಅನಿರುದ್ಧ್ ವಿರುದ್ಧ ದಾಖಲಾದ ದೂರಿನ ಹಿನ್ನೆಲೆ ಅನಿರುದ್ಧ್ರನ್ನು ಕೇವಲ ಧಾರಾವಾಹಿಯಿಂದ ಮಾತ್ರವಲ್ಲ, ಕಿರುತೆರೆಯಿಂದಲೇ ಅವರನ್ನು ಬ್ಯಾನ್ ಮಾಡಲಾಗಿದೆ ಎಂದು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ, ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಜೊತೆ ಜೊತೆಯಲಿ ಧಾರಾವಾಹಿ ಬಹಳ ಕಾಲ ಟಿಆರ್‌ಪಿಯಲ್ಲಿ ನಂಬರ್ ಒನ್ ಸ್ಥಾನದಲ್ಲೇ ಇತ್ತು. ಅದಾದ ಬಳಿಕವೂ ಇದರ ಟಿಆರ್‌ಪಿ ಚೆನ್ನಾಗಿಯೇ ಇತ್ತು. ಇದರೊಂದಿಗೆ ಈ ಧಾರಾವಾಹಿ ನಟ ಅನಿರುದ್ದ್ ಅವರಿಗೂ ಮರು ಜನ್ಮ ನೀಡಿತ್ತು.
150 ಸಂಚಿಕೆಗಳು ಪೂರ್ಣಗೊಂಡ ಬಳಿಕ ಈ ರೀತಿ ವರ್ತನೆ ಮರುಕಳಿಸಲು ಶುರುವಾಯಿತು. ಅದರ ನಡುವೆಯೂ ಸೀರಿಯಲ್ ಕೆಲಸಗಳು ಮುಂದುವರಿಯುತ್ತಿದ್ದವು. ಆದರೆ ಈಗ ಎಲ್ಲವೂ ಮಿತಿ ಮೀರಿದ್ದರಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಅನಿರುದ್ಧ್ ಅವರನ್ನು ಬ್ಯಾನ್ ಮಾಡುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ ಎಂದು ಕೆಲವೆಡೆ ಸುದ್ದಿ ಪ್ರಕಟ ಆಗಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಹಾಗೂ ಕಿರುತೆರೆ ನಿರ್ಮಾಪಕರ ಸಂಘ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.