ಅದೃಷ್ಟ ದೇವತೆ ಬಗ್ಗೆ 'ದಾಸ' ಸಾಹಿತ್ಯ: 'ಫಿಲ್ಟರ್' ಇಲ್ಲದೆ ಮಾತನಾಡಿ ವಿವಾದ ಹೊತ್ತಿಸಿದ ನಟ ದರ್ಶನ್; ಹಿಗ್ಗಮುಗ್ಗಾ ಟ್ರೋಲ್ ಆದ್ರು ಚಾಲೆಂಜಿಂಗ್ ಸ್ಟಾರ್!
ನಟ ದರ್ಶನ್ ತಮ್ಮ ಮಾತಿನ ಮೂಲಕ ಸದಾ ಒಂದಲ್ಲ ಒಂದು ವಿವಾದ ಸುಳಿಯಲ್ಲಿ ಸಿಲುಕುತ್ತಿರುತ್ತಾರೆ. ಈ ಹಿಂದೆ ಮಾಧ್ಯಮಗಳ ವಿರುದ್ಧ ಕೆಟ್ಟದ್ದಾಗಿ ಮಾತನಾಡಿದ್ದ ನಟ ದರ್ಶನ್ ಈ ಬಾರಿ ತಮ್ಮ ಫಿಲ್ಟರ್ ಇಲ್ಲದ ಮಾತಿನ ಮೂಲಕ ಹಿಗ್ಗಾ ಮುಗ್ಗಾ ಟ್ರೋಲ್ ಆಗಿದ್ದಾರೆ.
Published: 09th December 2022 02:11 PM | Last Updated: 09th December 2022 02:13 PM | A+A A-

ದರ್ಶನ್
ಬೆಂಗಳೂರು: ನಟ ದರ್ಶನ್ ತಮ್ಮ ಮಾತಿನ ಮೂಲಕ ಸದಾ ಒಂದಲ್ಲ ಒಂದು ವಿವಾದ ಸುಳಿಯಲ್ಲಿ ಸಿಲುಕುತ್ತಿರುತ್ತಾರೆ. ಈ ಹಿಂದೆ ಮಾಧ್ಯಮಗಳ ವಿರುದ್ಧ ಕೆಟ್ಟದ್ದಾಗಿ ಮಾತನಾಡಿದ್ದ ನಟ ದರ್ಶನ್ ಈ ಬಾರಿ ತಮ್ಮ ಫಿಲ್ಟರ್ ಇಲ್ಲದ ಮಾತಿನ ಮೂಲಕ ಹಿಗ್ಗಾ ಮುಗ್ಗಾ ಟ್ರೋಲ್ ಆಗಿ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದ್ದಾರೆ.
ಇತ್ತೀಚೆಗೆ ತಮ್ಮ ಕ್ರಾಂತಿ ಸಿನಿಮಾ ಬಗ್ಗೆ ನೀಡಿದ ಸಂದರ್ಶನದಲ್ಲಿ ಅದೃಷ್ಟ ದೇವತೆಯ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. 'ಅದೃಷ್ಟ ದೇವತೆ ಯಾವಾಗಲೂ ಬಾಗಿಲು ತಟ್ಟುವುದಿಲ್ಲ, ಯಾವಾಗ ಆಕೆ ಬಾಗಿಲು ತಟ್ಟುತ್ತಾಳೋ ಆವಾಗ, ಅವಳನ್ನು ಹಿಡಿದು ತಂದು ಬಟ್ಟೆ ಬಿಚ್ಚಿ ಬೆಡ್ ರೂಮ್ ನಲ್ಲಿ ಕೂರಿಸಬೇಕು, ಬಟ್ಟೆ ಕೊಟ್ಟರೆ ಆಕೆ ಇನ್ನೊಬ್ಬರ ಮನೆಗೆ ಹೋಗುತ್ತಾಳೆ' ಎಂದು ಹೇಳಿದ್ದಾರೆ.
ದರ್ಶನ್ ಮಾತನಾಡಿರುವ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕಾಂಟ್ರವರ್ಸಿ ಕಿಂಗ್ ದಾಸ. ಮಾತಿನ ಮೇಲೆ ನಿಗಾ ಇರಲಿ ಎಂದಿದ್ದಾರೆ.
No filter pic.twitter.com/tliTlJ87Or
— ಟ್ರೋಲ್ ಹೈಕ್ಳು (@TrollHaiklu) December 8, 2022
Disagreed. Worst https://t.co/yf5S3CdekP
— Vinay (@TrophyHeist) December 9, 2022
Controversy ki C/O address Heee Dasa @dasadarshan keep your word's in Mind & talk it Brother !!!!
— RRRAJESH #NTR30 Vasthunaa (@RAJeshraaaaJ) December 9, 2022
Back to Back controversy. https://t.co/j4kwxJviJj