'ವೇದ' ನಿಮ್ಮೊಳಗಿನ ಧ್ವನಿ, ನಿಮಗೆ ನಿರಂತರವಾಗಿ ಶಕ್ತಿ ನೀಡುತ್ತೆ: ಅದಿತಿ ಸಾಗರ್

ಶಿವರಾಜಕುಮಾರ್ ಅವರ 125 ನೇ ಚಿತ್ರವಾದ ವೇದ ಮೂಲಕ ನಟನೆಗೆ ಅದಿತಿ ಪಾದಾರ್ಪಣೆ ಮಾಡಿದರು. "ಸೃಜನಶೀಲ ಕುಟುಂಬದಿಂದ ಬಂದಿರುವ ಅದಿತಿಗೆ ಚೊಚ್ಚಲ  ಸಿನಿಮಾ ಬಗ್ಗೆ ಕುತೂಹಲದ ಜೊತೆ ಹೆಚ್ಚು ರೋಮಾಂಚನಗೊಳಿಸುತ್ತಿದೆ.
ಅದಿತಿ ಸಾಗರ್
ಅದಿತಿ ಸಾಗರ್

ನಟ ಮತ್ತು ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್, 'ರಾಂಬೋ 2' ಚಿತ್ರದ ದಮ್ ಮಾರೋ ದಮ್ ಮೂಲಕ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದರು. ಮೊದಲ ಹಾಡಿನಲ್ಲಿಯೇ ಅದಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತು. ಈ ಚಿತ್ರದ ಹಾಡಿನ್ನು ಕೇಳಿದವರು ಅದಿತಿ ಧ್ವನಿಗೆ ಅಭಿಮಾನಿಗಳಾಗಿದ್ದಾರೆ.

ಶಿವರಾಜಕುಮಾರ್ ಅವರ 125 ನೇ ಚಿತ್ರವಾದ ವೇದ ಮೂಲಕ ನಟನೆಗೆ ಅದಿತಿ ಪಾದಾರ್ಪಣೆ ಮಾಡಿದರು. "ಸೃಜನಶೀಲ ಕುಟುಂಬದಿಂದ ಬಂದಿರುವ ಅದಿತಿಗೆ ಚೊಚ್ಚಲ  ಸಿನಿಮಾ ಬಗ್ಗೆ ಕುತೂಹಲದ ಜೊತೆ ಹೆಚ್ಚು ರೋಮಾಂಚನಗೊಳಿಸುತ್ತಿದೆ ಎಂದಿದ್ದಾರೆ.  ನಾನು ಮಿಶ್ರ ಭಾವನೆಗಳು ಮತ್ತು ಭಾವನೆಗಳನ್ನು ಅನುಭವಿಸುತ್ತೇನೆ. ನಾನು ಅವುಗಳನ್ನು ಪದಗಳಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಾನು ಬೆಳ್ಳಿತೆರೆಯಲ್ಲಿ ನನ್ನನ್ನು  ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ. ಹರ್ಷ ನಿರ್ದೇಶನದ ವೇದ ಸಿನಿಮಾ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ.

ವೇದ ಸಿನಿಮಾದಲ್ಲಿ ಯುವ ಪ್ರತಿಭೆ ಕನಕ ಪಾತ್ರವನ್ನು ನಿರ್ವಹಿಸುತ್ತಾಳೆ,  "ನಾನು ಚಲನಚಿತ್ರದ ಭಾಗವಾಗಲು ಎದುರು ನೋಡುತ್ತಿದ್ದೆ, ಏಕೆಂದರೆ ನಾನು ಯಾವಾಗಲೂ ಚಲನಚಿತ್ರ ನಿರ್ಮಾಣದ ಪ್ರಕ್ರಿಯೆ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದೇನೆ. ಆರಂಭದಲ್ಲಿ, ನಾನು ಪಾತ್ರದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದಾಗ ನಾನು ಹೆಚ್ಚಿನ ವಿವರಗಳನ್ನು ಪಡೆಯಲಿಲ್ಲ ಎಂದು ತಿಳಿಸಿದ್ದಾರೆ.

ಅದಾದ ನಂತರ ನನ್ನ ತಂದೆ ನನಗೆ ಕೆಲವು ಸಲಹೆಗಳನ್ನು ನೀಡಿದರು, ಪಾತ್ರದೊಂದಿಗೆ ಹೇಗೆ ಹೋಗಬೇಕು ಮತ್ತು ದಿನನಿತ್ಯದ ಸಂದರ್ಭಗಳಲ್ಲಿ  ಹೇಗೆ ನಿರ್ವಹಿಸಿಬೇಕು ಎಂದು ಸಲಹೆ ನೀಡಿದರು. ನಾನು ಅದನ್ನುಕಟ್ಟು ನಿಟ್ಟಾಗಿ ಅನುಸರಿಸಿದೆ. ಇದರ ಹೊರತಾಗಿ, ತೂಕ ಇಳಿಸಿಕೊಳ್ಳಲು ಆರಂಭಿಸಿದೆ. ಸಾಹಸ ಕಲಿಯಲು ಸೂಚಿಸಲಾಯಿತು. ಅಂತಿಮವಾಗಿ  ನನ್ನ ಪಾತ್ರವನ್ನು ನಿರ್ವಹಿಸಲು ನನಗೆ ಸಹಾಯ ಮಾಡಿದವು ಎಂದು ಅದಿತಿ ಸಾಗರ್ ಹೇಳಿದ್ದಾರೆ.

 ಗೀತಾ ಪಿಕ್ಚರ್ಸ್ ಮತ್ತು ಜೀ ಸ್ಟುಡಿಯೋಸ್ ಅಡಿಯಲ್ಲಿ ತಯಾರಾದ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಜೆ ಸ್ವಾಮಿ ಅವರ ಛಾಯಾಗ್ರಹಣವಿದೆ. ಅದಿತಿ ಸಾಗರ್, ಮತ್ತು ಗಾನವಿ ಲಕ್ಷ್ಮಣ್ ಅವರನ್ನು ಹೊರತುಪಡಿಸಿ, ಹಿರಿಯ ನಟರಾದ ಉಮಾಶ್ರೀ, ಶ್ವೇತಾ ಚೆಂಗಪ್ಪ ಮತ್ತು ವೀಣಾ ಪೊನ್ನಪ್ಪ ನಟಿಸಿದ್ದಾರೆ.

ವೇದ 'ಒಂದು ಶಕ್ತಿ ಮತ್ತು ಬೆಂಬಲ ವ್ಯವಸ್ಥೆ' ಎಂದು ಅದಿತಿ ಕರೆಯುತ್ತಾರೆ. "ವೇದ ನಿಮ್ಮೊಳಗಿನ ಧ್ವನಿಯಾಗಿದ್ದು ಅದು ನಿಮಗೆ ನಿರಂತರವಾಗಿ ಶಕ್ತಿಯನ್ನು ನೀಡುತ್ತದೆ, ನೀವು ಕುಗ್ಗಿದಾಗ ನಿಮಗೆ  ಸಲಹೆ ನೀಡತ್ತದೆ. ಅದು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ನಿಮ್ಮ ಬಗ್ಗೆ  ಅದಕ್ಕೆ ಎಲ್ಲ ತಿಳಿದಿದೆ. ಅದು ವೇದದ ಶಕ್ತಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com