'ಸಿನಿಮಾ ನನಗೆ ದೇವರಿದ್ದಂತೆ, ಅದನ್ನು ಆರಾಧಿಸುತ್ತೇನೆ, ಕಾಯಕವೇ ಕೈಲಾಸ': ರಿಷಬ್ ಶೆಟ್ಟಿ

2022ರ ಅಕ್ಟೋಬರ್ ಅಂತ್ಯಕ್ಕೆ ತೆರೆಕಂಡ ಅಪ್ಪಟ ಕನ್ನಡದ ಚಿತ್ರ ಕಾಂತಾರದ ಅದ್ಭುತ ಯಶಸ್ಸು ತನ್ನನ್ನು ಬದಲಿಸಿದೆ. ಯಾವ ಮಟ್ಟಿಗೆ ಎಂದರೆ ಮುಕ್ತ ಜಾಗದಲ್ಲಿ ಚರ್ಚೆಗೆ ಕುಳಿತುಕೊಳ್ಳಲು ಸಮಯ ಮತ್ತು ಸ್ಥಳದ ಕೊರತೆ ಮಾತ್ರ ಕಾಣುತ್ತಿದೆ ಎನ್ನುತ್ತಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ.
ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ

2022ರ ಅಕ್ಟೋಬರ್ ಅಂತ್ಯಕ್ಕೆ ತೆರೆಕಂಡ ಅಪ್ಪಟ ಕನ್ನಡದ ಚಿತ್ರ ಕಾಂತಾರದ ಅದ್ಭುತ ಯಶಸ್ಸು ತನ್ನನ್ನು ಬದಲಿಸಿದೆ. ಯಾವ ಮಟ್ಟಿಗೆ ಎಂದರೆ ಮುಕ್ತ ಜಾಗದಲ್ಲಿ ಚರ್ಚೆಗೆ ಕುಳಿತುಕೊಳ್ಳಲು ಸಮಯ ಮತ್ತು ಸ್ಥಳದ ಕೊರತೆ ಮಾತ್ರ ಕಾಣುತ್ತಿದೆ ಎನ್ನುತ್ತಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ನನ್ನನ್ನು ಜನ ಗುರುತಿಸುತ್ತಿರುವುದರಿಂದ ಮುಚ್ಚಿದ ಬಾಗಿಲುಗಳ ಒಳಗೆ ಕುಳಿತು ನಾನಿಂದು ಮಾತನಾಡಬೇಕಾಗಿದೆ, ಅದು ಬಿಟ್ಟರೆ ನಾನು ಏನೂ ಬದಲಾಗಿಲ್ಲ, ಹಿಂದಿನ ರಿಷಬ್ ಶೆಟ್ಟಿಯೇ ಎನ್ನುತ್ತಾರೆ. 

2022ರಲ್ಲಿ ಕಾಂತಾರ ಯಶಸ್ಸು ತಂದುಕೊಟ್ಟ ಚಿತ್ರವಾದರೂ ಚಲನಚಿತ್ರಗಳ ಬಗ್ಗೆ ನನ್ನ ದೃಷ್ಟಿಕೋನ ಬದಲಾಗಿಲ್ಲ ಎನ್ನುತ್ತಾರೆ. “ಸ.ಹಿ.ಪ್ರಾ. ಶಾಲೆಗೆ ಹಾಕಿದ್ದ ಪ್ರಯತ್ನ ರೀತಿಯಲ್ಲಿಯೇ ಕಾಂತಾರಕ್ಕೂ ನಾನು ಹಾಕಿದೆ. ವಾಸ್ತವವಾಗಿ, ನಾನು ಭಾಗವಾಗಿರುವ ಯಾವುದೇ ಚಲನಚಿತ್ರಕ್ಕೂ ಇದೇ ರೀತಿ ಪ್ರಯತ್ನ ಹಾಕುತ್ತೇನೆ. ಕಾಂತಾರ ಚಿತ್ರದಲ್ಲಿ ನಟನೆ, ನಿರ್ದೇಶನ ಎರಡೂ ಇದ್ದುದರಿಂದ ಸವಾಲುಗಳು ಇನ್ನಷ್ಟು ಹೆಚ್ಚಿದ್ದವು. ಹೊಂಬಾಳೆ ಫಿಲಂಸ್‌ನ ನಿರ್ಮಾಣ, ನನ್ನ ನಟನೆ ಮತ್ತು ನಿರ್ದೇಶನವು ದೊಡ್ಡ ಜವಾಬ್ದಾರಿಯಾಗಿತ್ತು. ಹೀಗೆ ಹೇಳಿದ ಮೇಲೆ ಕೆಲವು ಚಿತ್ರಗಳು ಮಾಂತ್ರಿಕವಾಗಿ ಕಾಂತಾರ ಒಂದು ರೀತಿಯಲ್ಲಿ ಮ್ಯಾಜಿಕ್ ಮಾಡಿದ ಚಿತ್ರ. ನೀವು ಅದನ್ನು ಪವಾಡ ಅಥವಾ ದೇವರ ಆಶೀರ್ವಾದ ಎಂದು ಕರೆಯಬಹುದು ಎನ್ನುತ್ತಾರೆ ರಿಷಬ್.

ಕಾಂತಾರ ಇನ್ನೂ ದೇಶಾದ್ಯಂತ ಸಾಕಷ್ಟು ಕ್ರೇಜ್ ಹೊಂದಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಒತ್ತಡವಿಲ್ಲದೆ ವರ್ಷವನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ ರಿಷಬ್. "ನಾನು ನನ್ನ ಮುಂದಿನ ಚಿತ್ರವನ್ನು ತಾಜಾ ಮನಸ್ಸಿನಿಂದ ಪ್ರಾರಂಭಿಸಲು ಬಯಸುತ್ತೇನೆ. ಸಹಜವಾಗಿ, ಕಾಂತಾರ ಒಂದು ಉತ್ತಮ ಅನುಭವವಾಗಿತ್ತು, ಅದರ ಯಶಸ್ಸು ನನಗೆ ವಿಭಿನ್ನವಾಗಿ ಯೋಚಿಸಲು ಮತ್ತು ಅನನ್ಯ ವಿಷಯಗಳನ್ನು ಹುಡುಕಲು ಜಾಗವನ್ನು ನೀಡಿದೆ ಎನ್ನುತ್ತಾರೆ. 

ನಾನು ನನ್ನ ಹೃದಯದ ಮಾತುಗಳನ್ನು ಕೇಳುತ್ತೇನೆ. ನನ್ನ ಹೃದಯ ಬಯಸದ್ದನ್ನು ಮಾಡುವುದಿಲ್ಲ. ನಾನು ಬಯಸಿದರೆ, ನಾನು ನನ್ನ ಮುಂದಿನ ಯೋಜನೆಯನ್ನು 2 ತಿಂಗಳ ಹಿಂದೆ ಪ್ರಾರಂಭಿಸುತ್ತಿದ್ದೆ. ನನಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಉದ್ಯಮಗಳಿಂದ ದೊಡ್ಡ ನಿರ್ಮಾಣ ಸಂಸ್ಥೆಗಳೊಂದಿಗೆ ಅವಕಾಶಗಳು ಬಂದಿವೆ. ಆದರೆ ನಾನು ನನ್ನ ಮೂಲ ಯೋಜನೆಗಳಿಗೆ ಬದ್ಧನಾಗಿದ್ದೇನೆ. ನನ್ನ ಮುಂದಿನ ಪ್ರಾಜೆಕ್ಟ್ ಹೊಂಬಾಳೆ ಫಿಲ್ಮ್ಸ್‌ನೊಂದಿಗೆ. ಅದು ಬೆಲ್ ಬಾಟಮ್ 2 ಮೂಲಕ. ಸಿನಿಮಾ ಯಾರಿಗಾಗಿಯೂ ಕಾಯಬಾರದು ಎಂದು ನಾನು ನಂಬಿರುವ ಕಾರಣ ನನ್ನನ್ನು ಸಂಪರ್ಕಿಸಿದವರಿಗೆ ಕಾಯಬೇಡಿ ಎಂದು ಕೇಳಿಕೊಂಡಿದ್ದೇನೆ ಎಂದರು. 

ಅವರ ಮುಂದಿನ ಚಿತ್ರವು ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಆಗಿರುತ್ತದೆಯೇ ಅಥವಾ ಕೇವಲ ಕನ್ನಡ ಚಿತ್ರವೇ ಎಂದು ಕೇಳಿದ್ದಕ್ಕೆ, ಭಾರತದಾದ್ಯಂತ ಪ್ರೇಕ್ಷಕರು ಕಾಂತಾರವನ್ನು ಇಷ್ಟಪಟ್ಟಿದ್ದಾರೆ. ಅದೇ ಸಮಯದಲ್ಲಿ ಕಾಂತಾರ ಕೇವಲ ಕನ್ನಡ ಚಿತ್ರವಾಗಿದ್ದು, ಆ ಭಾಷೆಯ ಗಡಿಯನ್ನು ಒಡೆದು ಭಾರತೀಯ ಚಿತ್ರವನ್ನಾಗಿಸಿದವರು ಪ್ರೇಕ್ಷಕರು. ಹಾಗಾಗಿ ಸಾರ್ವತ್ರಿಕ ಮನವಿಯೊಂದಿಗೆ ವಿಷಯವನ್ನು ತರಲು ನಾನು ನೋಡುತ್ತಿದ್ದೇನೆ. ಹಾಗೆಂದು ನಾನು ಪ್ಯಾನ್ ಇಂಡಿಯಾ ಮಾಡಲು ಇಷ್ಟಪಡುವುದಿಲ್ಲ. ಇದು ಕನ್ನಡ ಸಿನಿಮಾ ಆದರೆ ಎಲ್ಲಾ ರೀತಿಯ ಪ್ರೇಕ್ಷಕರನ್ನು ತಲುಪುವಂತಿದ್ದರೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಮಾಡಲು ಯೋಚಿಸುತ್ತೇವೆ ಎಂದರು. 

ಕಾಂತಾರ ಪಯಣ, ಚಿತ್ರದ ಮೇಕಿಂಗ್‌ನಿಂದ ರಿಲೀಸ್‌ವರೆಗೆ ರಾಷ್ಟ್ರಮಟ್ಟದವರೆಗೆ ರಿಷಬ್‌ಗೆ ಏನು ಕಲಿಸಿತು ಎಂದು ಕೇಳಿಗಾದ "ಯಶಸ್ಸಿಗಿಂತ, ಕೆಲಸ ಮತ್ತು ಅದರ ಫಲಿತಾಂಶ ಹೆಚ್ಚು ಮುಖ್ಯವಾದುದು. ಇದು ನಿಮಗೆ ಅವಕಾಶಗಳನ್ನು ತರುತ್ತದೆ. ನಾನು ಕಾಂತಾರ ಜೊತೆ ಭಾರತದಾದ್ಯಂತ ಪ್ರಯಾಣಿಸದಿದ್ದರೆ, ಅದು ಮತ್ತೊಂದು ಡಬ್ಬಿಂಗ್ ಚಿತ್ರವಾಗುತ್ತಿತ್ತು. ನಾನು ಉತ್ತರ ಭಾರತದ ಪ್ರೇಕ್ಷಕರಿಗೆ ಅತಿಥಿಯಾಗಿದ್ದೆ, ಇಂದು ಅವರು ನನ್ನನ್ನು ಪೂರ್ಣ ಹೃದಯದಿಂದ ಸ್ವೀಕರಿಸಿದ್ದಾರೆ. ದೊಡ್ಡ ಸ್ಟಾರ್‌ಗಳಿಂದ ಸಿಕ್ಕಿರುವ ಮೆಚ್ಚುಗೆ, ಗೌರವ ನನಗೆ ತುಂಬ ಶಕ್ತಿ ನೀಡಿದೆ.

ಬೆಂಗಳೂರಿನಿಂದ 500 ಕಿ.ಮೀ ದೂರದಲ್ಲಿರುವ ಕೆರಾಡಿಯಲ್ಲಿರುವ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ನನಗೆ ಸಿನಿಮಾದತ್ತ ಒಲವು ಮೂಡಿಸಿತು. ನಾನು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಮುಂಬೈ ಮೂಲದ ಪ್ರೊಡಕ್ಷನ್ ಹೌಸ್‌ನಲ್ಲಿ ಆಫೀಸ್ ಬಾಯ್ ಮತ್ತು ಡ್ರೈವರ್ ಆಗಿ ಕೆಲಸ ಮಾಡಿದ್ದೇನೆ. ಅಂದಿನಿಂದ ನನ್ನ ವೃತ್ತಿಜೀವನದ ಈ ಹಂತದವರೆಗೆ, ನಾನು ಇಲ್ಲಿಯವರೆಗೆ ಮಾಡಿದ ಎಲ್ಲಾ ಪ್ರಯತ್ನಗಳ ಫಲಿತಾಂಶವೆಂದು ನಾನು ನೋಡುತ್ತೇನೆ. ಸಿನಿಮಾ ನನಗೆ ದೇವರಿದ್ದಂತೆ, ಅದನ್ನು ಆರಾಧಿಸುತ್ತೇನೆ. ಕಾಯಕವೇ ಕೈಲಾಸ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com