ತುಟಿಗೆ ಮುತ್ತಿಕ್ಕಿ ರೊಮ್ಯಾಂಟಿಕ್ ಆಗಿ ಸದ್ಯದಲ್ಲಿಯೇ ಮದುವೆಯಾಗುತ್ತಿದ್ದೇವೆ ಎಂದು ಪ್ರಕಟಿಸಿದ ನರೇಶ್-ಪವಿತ್ರಾ ಲೋಕೇಶ್
ಮೂಲತಃ ಕನ್ನಡತಿಯಾಗಿರುವ ಟಾಲಿವುಡ್ ನಲ್ಲಿ ಪೋಷಕ ನಟಿಯಾಗಿ ಹೆಸರು ಮಾಡಿರುವ ಪವಿತ್ರಾ ಲೋಕೇಶ್ 2023ರ ಹೊಸ ವರ್ಷದ ಹೊಸ್ತಿಲಿನಲ್ಲಿ ತಮ್ಮ ಮದುವೆಯ ವಿಚಾರವನ್ನು ವಿಶಿಷ್ಟವಾಗಿ ರೊಮ್ಯಾಂಟಿಕ್ ಆಗಿ ಬಹಿರಂಗಪಡಿಸಿದ್ದಾರೆ.
Published: 31st December 2022 01:26 PM | Last Updated: 31st December 2022 02:11 PM | A+A A-

ಪವಿತ್ರಾ ಲೋಕೇಶ್-ನರೇಶ್(ಸಂಗ್ರಹ ಚಿತ್ರ)
ಮೂಲತಃ ಕನ್ನಡತಿಯಾಗಿರುವ ಟಾಲಿವುಡ್ ನಲ್ಲಿ ಪೋಷಕ ನಟಿಯಾಗಿ ಹೆಸರು ಮಾಡಿರುವ ಪವಿತ್ರಾ ಲೋಕೇಶ್ 2023ರ ಹೊಸ ವರ್ಷದ ಹೊಸ್ತಿಲಿನಲ್ಲಿ ತಮ್ಮ ಮದುವೆಯ ವಿಚಾರವನ್ನು ವಿಶಿಷ್ಟವಾಗಿ ರೊಮ್ಯಾಂಟಿಕ್ ಆಗಿ ಬಹಿರಂಗಪಡಿಸಿದ್ದಾರೆ.
ಟಾಲಿವುಡ್ ನ ಖ್ಯಾತ ಪೋಷಕ ನಟ ನರೇಶ್(Naresh Tollywood) ಜೊತೆಗಿನ ಪವಿತ್ರಾ ಲೋಕೇಶ್(Pavitra Lokesh) ಸಂಬಂಧ ಕೆಲ ತಿಂಗಳ ಹಿಂದೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ನರೇಶ್ ಅವರ ಪತ್ನಿ ರಮ್ಯಾ ಇಬ್ಬರ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮೈಸೂರಿನ ಹೊಟೇಲ್ ರೂಂನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಉಳಿದುಕೊಂಡಿದ್ದ ವೇಳೆ ರಮ್ಯಾ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿ ಆ ಸುದ್ದಿ ಅಲ್ಲಿಗೇ ತಣ್ಣಗಾಗಿತ್ತು.
ಇದೀಗ ಪವಿತ್ರ ಲೋಕೇಶ್ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯೊತ್ತಿದ್ದಾರೆ. ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು ಅದರಲ್ಲಿ ನರೇಶ್ ಮತ್ತು ಪವಿತ್ರಾ ಕ್ಯಾಂಡಲ್ ಲೈಟ್ ಉರಿಸಿ ಕೇಕ್ ಕತ್ತರಿಸಿ ಇಬ್ಬರೂ ಒಬ್ಬರಿಗೊಬ್ಬರು ತಿನ್ನಿಸಿ ನರೇಶ್ ಪವಿತ್ರಾ ಅವರ ತುಟಿಗೆ ರೊಮ್ಯಾಂಟಿಕ್ ಆಗಿ ಮುತ್ತಿಡುತ್ತಿದ್ದಾರೆ. 2023ರ ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಾ ಹೊಸ ವರ್ಷ, ಹೊಸ ಆರಂಭ ನಿಮ್ಮೆಲ್ಲರ ಶುಭಹಾರೈಕೆ ಬೇಕು, ನಾನು ಮತ್ತು ಪವಿತ್ರಾ ನರೇಶ್ ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ ಎಂದು ಪ್ರಕಟಿಸಿದ್ದಾರೆ.
New Year
— H.E Dr Naresh VK actor (@ItsActorNaresh) December 31, 2022
New Beginnings
Need all your blessings
From us to all of you #HappyNewYear
- Mee #PavitraNaresh pic.twitter.com/JiEbWY4qTQ
ತೆಲುಗಿನ ಖ್ಯಾತ ಹಿರಿಯ ನಟ ದಿವಂಗತ ಕೃಷ್ಣ ಅವರ ಪುತ್ರ, ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ಮಲ ಸಹೋದರ ನರೇಶ್ ಅವರಿಗೆ ಇದು ನಾಲ್ಕನೇ ಮದುವೆಯಾದರೆ ಪವಿತ್ರಾ ಲೋಕೇಶ್ ಅವರಿಗೆ ಮೂರನೇ ಮದುವೆಯಾಗಿದೆ.