ಪ್ರಜ್ವಲ್ ದೇವರಾಜ್ 35ನೇ ಹುಟ್ಟುಹಬ್ಬ: ಮಾಫಿಯಾ ಪೋಸ್ಟರ್ ರಿಲೀಸ್
ನಟ ಪ್ರಜ್ವಲ್ ದೇವರಾಜ್ ಇಂದು ಜುಲೈ 4 ರಂದು 35ನೇ ವರ್ಷಕ್ಕೆ ಕಾಲಿಡಲಿದ್ದಾರೆ, ಹುಟ್ಟುಹಬ್ಬ ಸಂಭ್ರಮದಲ್ಲಿರುವ ಪ್ರಜ್ವಲ್ ಅಭಿನಯಿಸುತ್ತಿರುವ ‘ಮಾಫಿಯಾ’ ಚಿತ್ರದ ಪೋಸ್ಟರ್‌ಗಳು ಬಿಡುಗಡೆಯಾಗಿವೆ.
Published: 04th July 2022 12:21 PM | Last Updated: 04th July 2022 02:31 PM | A+A A-

ಮಾಫಿಯಾ ಸಿನಿಮಾ ಪೋಸ್ಟರ್
ನಟ ಪ್ರಜ್ವಲ್ ದೇವರಾಜ್ ಇಂದು ಜುಲೈ 4 ರಂದು 35ನೇ ವರ್ಷಕ್ಕೆ ಕಾಲಿಡಲಿದ್ದಾರೆ, ಹುಟ್ಟುಹಬ್ಬ ಸಂಭ್ರಮದಲ್ಲಿರುವ ಪ್ರಜ್ವಲ್ ಅಭಿನಯಿಸುತ್ತಿರುವ ‘ಮಾಫಿಯಾ’ ಚಿತ್ರದ ಪೋಸ್ಟರ್‌ಗಳು ಬಿಡುಗಡೆಯಾಗಿವೆ.
ಪ್ರಜ್ವಲ್ ದೇವರಾಜ್ ಅಭಿನಯದ ಲೋಹಿತ್ ಹೆಚ್ ನಿರ್ದೇಶನದ ಮಾಫಿಯಾ, ಕಾಪ್ ಥ್ರಿಲ್ಲರ್ ಸಿನಿಮಾವಾಗಿದೆ, ಅದರ ಶೂಟಿಂಗ್ ಪ್ರಕ್ರಿಯೆಯ ಕೊನೆಯ ಹಂತದಲ್ಲಿದೆ. ತಂಡವು ಇತ್ತೀಚೆಗೆ ಜನಪ್ರಿಯ ಫೈಟ್ ಮಾಸ್ಟರ್‌ಗಳಾದ ರಿಯಲ್ ಸತೀಶ್ (ಪುಷ್ಪಾ, ಐಸ್ಮಾರ್ಟ್ ಶಂಕರ್) ಮತ್ತು ಜಾಲಿ ಬಾಸ್ಟಿನ್ ಪ್ರಮುಖ ಆಕ್ಷನ್ ಸ್ಟಂಟ್‌ಗಳ ಶೂಟಿಂಗ್ ಮುಗಿಸಿದೆ.
ಜುಲೈ ಅಂತ್ಯದ ವೇಳೆಗೆ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿಸಲು ಚಿತ್ರತಂಡ ಮುಂದಾಗಿದೆ. ಅದರ ಜೊತೆಗೆ, ಪ್ರಜ್ವಲ್ ಜೊತೆಗಿನ ಒಂದು ಹಾಡಿನ ಸೀಕ್ವೆನ್ಸ್ ಅನ್ನು ನಿಗದಿಪಡಿಸಲಾಗಿದೆ, ಅದನ್ನು ಭೂಷಣ್ ನೃತ್ಯ ಸಂಯೋಜನೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 'ಮಾಫಿಯಾ" ಚಿತ್ರದಲ್ಲಿ ಪೊಲೀಸ್ ಆಗಿ ಶೈನ್ ಶೆಟ್ಟಿ ಎಂಟ್ರಿ!
ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಮಾಫಿಯಾ ಚಿತ್ರ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಲೋಹಿತ್ ಎಚ್. ನಿರ್ದೇಶನ ಮಾಡುತ್ತಿರುವ ಈ ಸಿನಿಮಾಗೆ ಎಸ್.ಪಾಂಡಿಕುಮಾರ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತವಿದೆ.
ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಶೈನ್ ಶೆಟ್ಟಿ, ದೇವರಾಜ್, ವಿಜಯ್ ಚೆಂಡೂರ್, ವಾಸುಕಿ ವೈಭವ್, ಸಾಧುಕೋಕಿಲ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.