100 ದಿನ ಪೂರೈಸಿದ ಕೆಜಿಎಫ್-2: ಇದು ಕೇವಲ ಆರಂಭ ಎಂದು ನಿರ್ಮಾಪಕ!
ಭಾರತೀಯ ಸಿನಿಮಾ ಮಾರುಕಟ್ಟೆಯಲ್ಲಿ ಎಲ್ಲಾ ದಾಖಲೆ, ನೀರಿಕ್ಷೆಗಳನ್ನು ಮೀರಿ ಯಶಸ್ಸು ಕಂಡಿದ್ದ ಸಿನಿಮಾ ಎಂದರೆ ಕೆಜಿಎಫ್ 2. ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ನೂರು ದಿನ ಪೂರೈಸಿದೆ.
Published: 23rd July 2022 01:18 PM | Last Updated: 23rd July 2022 01:32 PM | A+A A-

ಕೆಜಿಎಫ್ 100 ದಿನದ ಸಂಭ್ರಮ
ಭಾರತೀಯ ಸಿನಿಮಾ ಮಾರುಕಟ್ಟೆಯಲ್ಲಿ ಎಲ್ಲಾ ದಾಖಲೆ, ನೀರಿಕ್ಷೆಗಳನ್ನು ಮೀರಿ ಯಶಸ್ಸು ಕಂಡಿದ್ದ ಸಿನಿಮಾ ಎಂದರೆ ಕೆಜಿಎಫ್ 2. ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ನೂರು ದಿನ ಪೂರೈಸಿದೆ.
ಈ ಖುಷಿಯನ್ನು ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ಸಂಭ್ರಮಿಸಿದೆ. ಇಷ್ಟು ದೊಡ್ಡ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಲಾಗಿದೆ. ‘ಕೆಜಿಎಫ್ 2’ ಚಿತ್ರದ ಪ್ರಮುಖ ತುಣುಕುಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ 100 ದಿನಗಳ ಯಶಸ್ವಿ ಪ್ರಯಾಣವನ್ನು ಸಂಭ್ರಮಿಸಲಾಗಿದೆ. ಇಂಥ ಅಭೂತಪೂರ್ವ ಗೆಲುವಿಗೆ ಕಾರಣರಾದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್ ಮಾಡಿ, ಅಭಿಮಾನಿಗಳ ಜೊತೆ ತಾವು ಎಷ್ಟು ಹೆಮ್ಮೆಪಡುತ್ತಿದ್ದೇವೆಂದು ಎಂದು ಹಂಚಿಕೊಂಡಿದ್ದು, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.“ನಮಗಾಗಿ ಈ ಅದ್ಭುತ ಪ್ರಯಾಣವನ್ನು ಸ್ಕ್ರಿಪ್ಟ್ ಮಾಡಿದ್ದಕ್ಕೆ ಧನ್ಯವಾದಗಳು. ನಾವು ಇನ್ನೂ ಇದೇ ರೀತಿಯ ಅದ್ಬುತ ಪ್ರಾಜೆಕ್ಟ್ಗಳನ್ನು ನೀಡಲು ಸಿದ್ದರಿದ್ದೇವೆ ಎಂದು ಭರವಸೆ ನೀಡುತ್ತೇವೆ ಎಂದು ಬರೆದುಕೊಂಡಿದೆ.
ಇದನ್ನೂ ಓದಿ: 'ಕೆಜಿಎಫ್-3 ಬಗ್ಗೆ ದೊಡ್ಡದಾಗಿ ಮಾಹಿತಿ ನೀಡುತ್ತೇವೆ': ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ
ಕೆಜಿಎಫ್ ಚಾಪ್ಟರ್ 2’ ಸಿನಿಮಾ ಬಿಡುಗಡೆ ಆಯಿತು. ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ಎಲ್ಲ ರಾಜ್ಯದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಈ ವರ್ಷ ಬಹುದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ್ದಾಗಿತ್ತು.