'ಮಾದೇವ' ಚಿತ್ರದಲ್ಲಿ ಒಂದಾದ 'ರಾಬರ್ಟ್' ಜೋಡಿ ವಿನೋದ್ ಪ್ರಭಾಕರ್, ಸೋನಾಲ್ ಮೊಂಟೇರೊ
ರಾಬರ್ಟ್ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನಾಲ್ ಮೊಂಟೇರೊ ಹಾಗೂ ವಿನೋದ್ ಪ್ರಭಾಕರ್ ಈಗ ಮತ್ತೊಂದು ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.
Published: 26th July 2022 03:14 PM | Last Updated: 26th July 2022 03:55 PM | A+A A-

ಸೋನಾಲ್ ಮೊಂಟೇರೊ
ರಾಬರ್ಟ್ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನಾಲ್ ಮೊಂಟೇರೊ ಹಾಗೂ ವಿನೋದ್ ಪ್ರಭಾಕರ್ ಈಗ ಮತ್ತೊಂದು ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.
ನವೀನ್ ರೆಡ್ಡಿ ಅವರ ಮಾದೇವ ಚಿತ್ರದ ಮೂಲಕ ಇಬ್ಬರೂ ಮತ್ತೊಮ್ಮೆ ಒಟ್ಟಿಗೆ ನಟಿಸುತ್ತಿದ್ದು, ಕಮರ್ಷಿಯಲ್ ಮನರಂಜನ ಚಿತ್ರದ ಚಿತ್ರೀಕರಣ ಸೋಮವಾರದಿಂದ ಪ್ರಾರಂಭವಾಗಿದೆ. ಸೋನಾಲ್ ತಮ್ಮ ಮುಂದಿನ ಬಹುಭಾಷಾ ಚಿತ್ರ ಬನಾರಸ್ ಬಿಡುಗಡೆಗಾಗಿ ಎದುರುನೋಡುತ್ತಿದ್ದು, ಈ ನಡುವೆ ಯೋಗರಾಜ್ ಭಟ್ ಅವರ ಗರಡಿ ಸಿನಿಮಾ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದು, ಸರೋಜಿನಿ ನಾಯ್ಡು ಅವರ ಜೀವನ ಚರಿತ್ರೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಮಾದೇವ 1965, 1980, 1999ರ ಕಾಲಘಟ್ಟದ ಸ್ಪೂರ್ತಿದಾಯಕ ಕಥೆ ಹೊಂದಿರುವ ಸಿನಿಮಾ ಆಗಿದ್ದು. ತೀಕ್ಷ್ಣ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾವನ್ನು ಗಾಯತ್ರಿ ಆರ್ ಹಳಲೆ ನಿರ್ಮಾಣ ಮಾಡುತ್ತಿದ್ದು, ಶೃತಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.
ಇದನ್ನೂ ಓದಿ: 'ಗರಡಿ'ಯಲ್ಲೂ ಟಿಕ್ ಟಾಕ್ ಬಿಡದ ನಟಿ ಸೋನಲ್ ಮಾಂಟೇರೋ
ಸಿನಿಮಾದ ಚಿತ್ರೀಕರಣ ಶಿವಮೊಗ್ಗ, ಧಾರವಾಡ, ಹೈದರಾಬಾದ್ ಗಳಲ್ಲಿ ನಡೆಯಲಿದ್ದು, ಬಾಲಕೃಷ್ಣ ಥೋಟ ಅವರ ಸಿನಿಮೆಟೋಗ್ರಾಫಿ ಇದ್ದು, ಪ್ರದ್ಯೋತ್ಥನ್ ಸಂಗೀತ ನೀಡಿದ್ದಾರೆ.