ಸಿದ್ದರಾಮಯ್ಯ ಭೇಟಿ ಮಾಡಿದ ನಟ ನೀನಾಸಂ ಸತೀಶ್; 'ಡಿಯರ್ ವಿಕ್ರಮ್' ವೀಕ್ಷಿಸಲು ಆಹ್ವಾನ
ನಟ ನಿನಾಸಂ ಸತೀಶ್ ಅಭಿನಯಿಸಿರುವ ಡಿಯರ್ ವಿಕ್ರಮ್ ಚಿತ್ರ ಇದೇ ಗುರುವಾರದಂದು ತೆರೆ ಕಾಣಲಿದೆ. ಪ್ರಚಾರದಲ್ಲಿ ಬ್ಯುಸಿಯಾಗಿರುವ ನಿನಾಸಂ ಸತೀಶ್ ಅವರು ಸೋಮವಾರ ವಿರೋಧ ಪಕ್ಷದ ನಾಯಕರಾಗಿರುವ...
Published: 27th June 2022 10:06 PM | Last Updated: 28th June 2022 01:07 PM | A+A A-

ಸಿದ್ದರಾಮಯ್ಯರನ್ನು ಭೇಟಿ ಮಾಡಿದ ನಟ ನೀನಾಸಂ ಸತೀಶ್
ಬೆಂಗಳೂರು: ನಟ ನಿನಾಸಂ ಸತೀಶ್ ಅಭಿನಯಿಸಿರುವ ಡಿಯರ್ ವಿಕ್ರಮ್ ಚಿತ್ರ ಇದೇ ಗುರುವಾರದಂದು ತೆರೆ ಕಾಣಲಿದೆ. ಪ್ರಚಾರದಲ್ಲಿ ಬ್ಯುಸಿಯಾಗಿರುವ ನಿನಾಸಂ ಸತೀಶ್ ಅವರು ಸೋಮವಾರ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಈ ವೇಳೆ ನಿನಾಸಂ ಸತೀಶ್ ಜೂನ್ 30 ರಂದು ತೆರೆ ಕಾಣಲಿರುವ, ತಾವೇ ನಾಯಕ ನಟರಾಗಿ ಅಭಿನಯಿಸಿರುವ ಡಿಯರ್ ವಿಕ್ರಮ್ ಸಿನಿಮಾ ವೀಕ್ಷಿಸಲು ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.
ಇದನ್ನು ಓದಿ: ನೀನಾಸಂ ಸತೀಶ್ ನಟಿಸಿರುವ 'ಡಿಯರ್ ವಿಕ್ರಮ್' ವೂಟ್ ಸೆಲೆಕ್ಟ್ ನಲ್ಲಿ ರಿಲೀಸ್!
ಕೆ.ಎಸ್. ನಂದೀಶ್ ನಿರ್ದೇಶನದ ಈ ಸಿನಿಮಾ ನಾಯಕತ್ವದ ಪ್ರಗತಿಪರ ಆಶಯಗಳನ್ನು ಒಳಗೊಂಡಿದೆ ಎಂದು ನಿನಾಸಂ ಸತೀಶ್ ಅವರು ವಿವರಿಸಿದರು.
ಡಿಯರ್ ವಿಕ್ರಮ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲೆಂದು ಹಾರೈಸಿದ ಸಿದ್ದರಾಮಯ್ಯ ಅವರು, ಇಡೀ ಚಿತ್ರ ತಂಡಕ್ಕೆ ಶುಭ ಕೋರಿದರು. ಈ ವೇಳೆ ಸಾಹಿತಿ ನಟರಾಜ್ ಹುಳಿಯಾರ್ ಸಹ ಹಾಜರಿದ್ದರು.