'ಕೆಡಿ' ಸಿನಿಮಾದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಮಾಲಾಶ್ರೀ ಪುತ್ರಿ ನಾಯಕಿ?
ಕನ್ನಡ ಚಿತ್ರರಂಗದಲ್ಲಿ ಟೀಸರ್ ಮೂಲಕವೇ ಕೆಡಿ ಸಿನಿಮಾ ಸದ್ದು ಮಾಡಿದೆ. ಸಿನಿಮಾದ ಚಿತ್ರೀಕರಣದ ಕೆಲಸ ಇನ್ನೂ ಶುರು ಆಗಿಲ್ಲ. ಆದರೆ ಈ ಸಿನಿಮಾದ ಸುತ್ತ ಹತ್ತು ಹಲವು ಸುದ್ದಿಗಳು ಹರಿದಾಡುತ್ತಲೇ ಇವೆ.
Published: 15th November 2022 01:51 PM | Last Updated: 15th November 2022 02:15 PM | A+A A-

ರಾಧನಾ ರಾಮ್
ಕನ್ನಡ ಚಿತ್ರರಂಗದಲ್ಲಿ ಟೀಸರ್ ಮೂಲಕವೇ ಕೆಡಿ ಸಿನಿಮಾ ಸದ್ದು ಮಾಡಿದೆ. ಸಿನಿಮಾದ ಚಿತ್ರೀಕರಣದ ಕೆಲಸ ಇನ್ನೂ ಶುರು ಆಗಿಲ್ಲ. ಆದರೆ ಈ ಸಿನಿಮಾದ ಸುತ್ತ ಹತ್ತು ಹಲವು ಸುದ್ದಿಗಳು ಹರಿದಾಡುತ್ತಲೇ ಇವೆ.
ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ಕೆಡಿ ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಇದೆ. ಇದುವೇ ಈಗೀನ ಟಾಕ್ ಆಫ್ ದಿ ಟೌನ್ ಕೂಡ ಆಗಿದೆ. ರಾಧನಾ ರಾಮ್ ಈಗಾಗಲೇ ಒಂದು ಬಿಗ್ ಸಿನಿಮಾ ಒಪ್ಪಿ ಆಗಿದೆ. ಆ ಮೂಲಕ ಕನ್ನಡ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ಅದರ ಹೊರತಾಗಿ ಈಗ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಕೆಡಿ ಚಿತ್ರದಲ್ಲಿ ಅಭಿನಯಿಸ್ತಾರೆ ಅನ್ನೋ ನ್ಯೂಸ್ ದಿನೇ ದಿನೇ ವೈರಲ್ ಆಗುತ್ತಿದೆ.
ಈಗಾಗಲೇ ಜೋಗಿ ಪ್ರೇಮ್ ಮತ್ತು ತಂಡ ರಾಧನಾ ಪಾತ್ರ ಮತ್ತು ಅವರ ಲುಕ್ ಟೆಸ್ಟ್ ಕೂಡ ನಡೆದಿದೆ ಎನ್ನುವ ಮಾಹಿತಿ ಇದೆ. ಆದರೆ, ಅಧಿಕೃತವಾಗಿ ಸಿನಿಮಾ ಟೀಮ್ ಆಗಲಿ, ರಾಧನಾ ಆಗಲಿ ಈ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಇದನ್ನೂ ಓದಿ: 'ನನಗಿನ್ನೂ ನಂಬೋಕೆ ಆಗ್ತಿಲ್ಲ': ದರ್ಶನ್ ಜೊತೆ ಸಿನಿಮಾ ಬಗ್ಗೆ ರಾಧನಾ ರಾಮ್ ಮಾತು!
ಜೋಗಿ ಪ್ರೇಮ್ ಟೀಮ್ ನಿಂದಲೇ ಹರಿದಾಡುತ್ತಿರುವ ಮಾಹಿತಿ ಪ್ರಕಾರ ‘ಕೆಡಿ’ ಸಿನಿಮಾದಲ್ಲಿ ರಾಧನಾ ನಟಿಸುವುದು ಪಕ್ಕಾ ಎನ್ನಲಾಗುತ್ತಿದೆ. ಈ ಕುರಿತು ಒಂದು ಹಂತದ ಮಾತುಕತೆ ಕೂಡ ಆಗಿದೆಯಂತೆ. ಈ ಸಿನಿಮಾದಲ್ಲಿ ತಮ್ಮ ಮಗಳು ನಟಿಸಲು ಮಾಲಾಶ್ರೀ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ಸಧ್ಯದಲ್ಲೇ ನಿರ್ದೇಶಕ ಪ್ರೇಮ್ ಈ ಗುಟ್ಟನ್ನು ರಿವೀಲ್ ಮಾಡಲಿದ್ದಾರೆ. 1980ರ ದಶಕದ ಸ್ಟೋರಿ ಇದಾಗಿದ್ದು, ಸಿನಿಮಾದಲ್ಲಿ ಸಂಜಯ್ ದತ್ ಸೇರಿದಂತೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಸ್ ಅಭಿನಯಿಸುತ್ತಿದ್ದಾರೆ.