'ವಿಜಯಾನಂದ' ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ‌

ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಪಿಕ್ 'ವಿಜಯಾನಂದ' ಸಿನಿಮಾವು ಡಿ.9ರಂದು ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ರಿಷಿಕಾ ಶರ್ಮಾ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಅನಂದ್ ಸಂಕೇಶ್ವರ ಅವರು ನಿರ್ಮಾಣ ಮಾಡಿದ್ದಾರೆ.
ವಿಜಯಾನಂದ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮ
ವಿಜಯಾನಂದ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮ

ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಪಿಕ್ 'ವಿಜಯಾನಂದ' ಸಿನಿಮಾವು ಡಿ.9ರಂದು ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ರಿಷಿಕಾ ಶರ್ಮಾ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಅನಂದ್ ಸಂಕೇಶ್ವರ ಅವರು ನಿರ್ಮಾಣ ಮಾಡಿದ್ದಾರೆ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಿಹಾಲ್ ಕಾಣಿಸಿಕೊಂಡಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜಯ್ ಸಂಕೇಶ್ವರ್ ಅವರು ಉನ್ನತ ಸ್ಥಾನಕ್ಕೆ ಏರಲು ನಡೆಸಿದ ಹೋರಾಟ, ಅಧಿಕಾರಶಾಹಿಯ ವಿರುದ್ಧ ಹೋರಾಡುವುದು ಈ ಸಿನಿಮಾ ಕಥೆಯಾಗಿದೆ.  ತಂದೆಯಿಂದ ಕಲಿತಿದ್ದುದನ್ನು ನಾನು ಪಾಲಿಸಿದೆ. ನನ್ನ ಮಗ ಕೂಡ ಅದೇ ಕಲಿಕೆ ಪಾಲಿಸುತ್ತಿದ್ದಾನೆ. ಅವನ ವಯಸ್ಸಲ್ಲಿ ನಾನು ಅವನಿಗೆ ತರಬೇತಿ ಕೊಡಲು ಶುರು ಮಾಡಿದ್ದೆ. ಈಗಿನ ಪೋಷಕರಿಗೆ ಅದನ್ನೇ ಹೇಳುತ್ತೇನೆ. ಪೋಷಕರು ಬದುಕಿನ ಎಲ್ಲ ಆಯಾಮಗಳನ್ನು ಮಕ್ಕಳಿಗೆ 4-5ನೇ ವಯಸ್ಸಿಗೆ ಕಲಿಸಬೇಕು. ಸಣ್ಣ ಸಣ್ಣ ಕೆಲಸಗಳನ್ನು ಮಾಡಿಸಬೇಕು. 10-15ನೇ ವಯಸ್ಸಲ್ಲಿ ಬ್ಯುಸಿನೆಸ್‌ ಶುರು ಮಾಡಿಸಬೇಕು. ಮಕ್ಕಳನ್ನು ಬ್ಯುಸಿ ಆಗಿ ಇಡಬೇಕು. ಒಂದು ನಿಮಿಷದ ಮತ್ತು ಒಂದು ರೂಪಾಯಿ ಮಹತ್ವ ಅವರಿಗೆ ಗೊತ್ತಿರಬೇಕು.

ಉದ್ಯಮ ಆರಂಭಿಸಿದಾಗ ಸಾಕಷ್ಟುಟೀಕೆ ಬಂತು. ಅದೇ ಟಾನಿಕ್‌ ಥರ ಭಾವಿಸಿ ಮುಂದೆ ಬಂದೇ. ಅದೇ ಥರ ಸವಾಲು ಎದುರಿಸಲು ಮಕ್ಕಳಿಗೆ ಕಲಿಸಬೇಕು. ಒಂದು ನಿಮಿಷವೂ ವ್ಯರ್ಥ ಮಾಡಬಾರದು. ನಾನಂತೂ ಬದುಕಿನ ಕೊನೆಯ ಕ್ಷಣದವರೆಗೂ ನಿವೃತ್ತನಾಗುವುದಿಲ್ಲ.

ನಾನು ಬದುಕಲ್ಲಿ ಸಿಕ್ಕಾಪಟ್ಟೆಜನರನ್ನು ನೋಡಿದ್ದೇನೆ. ಪಾಠ ಕಲಿತಿದ್ದೇನೆ. ಹಾಗಾಗಿ ಜನರನ್ನು ಬಹಳ ಬೇಗ ಅರ್ಥ ಮಾಡಿ ಕೊಳ್ಳುತ್ತೇನೆ. ರಿಷಿಕಾ ಶರ್ಮಾ ಬಯೋಪಿಕ್‌ ಮಾಡುತ್ತೇನೆ ಎಂದು ಬಂದಾಗ ಅವರ ಜೊತೆ ಮಾತನಾಡಿದೆ. ಈ ಹುಡುಗಿ ಬುದ್ಧಿವಂತೆ, ಶ್ರಮ ಪಡುತ್ತಾಳೆ ಅಂತ ಗೊತ್ತಾಯಿತು. ಹಾಗಾಗಿ ಒಂದು ಅವಕಾಶ ಕೊಡೋಣ ಅಂತ ಅಂದುಕೊಂಡೆ. ನಾವು ಹಿರಿಯರು ಕಿರಿಯರನ್ನು ಪ್ರೋತ್ಸಾಹಿಸುವ, ಆಶೀರ್ವದಿಸುವ ಕೆಲಸ ಮಾಡಬೇಕು ಎಂದರು.

ವಿಜಯ ಸಂಕೇಶ್ವರ ಅವರು ಯಾವಾಗಲೂ ಅಡ್ವೆಂಚರ್ ಮಾಡುತ್ತಾರೆ. ಇಡೀ ಜಗತ್ತು ಎಲ್ಲಿ ಹೋಗಬೇಡ ಅಂತ ಹೇಳುತ್ತದೆಯೋ ಅಲ್ಲಿಗೆ ಅವರು ಹೋಗುತ್ತಾರೆ. ಯಾವುದು ಮಾಡಬೇಡ ಅನ್ನುತ್ತಾರೋ ಅದನ್ನೇ ಮಾಡುತ್ತಾರೆ. ಅವರು ನೋ ಎನ್ನುವುದು ಸ್ಪಷ್ಟವಾಗಿ ಹೇಳುತ್ತಾರೆ. ನೋ ಎಂದು ಹೇಳಲು ಎಲ್ಲರಿಗೂ ಆಗುವುದಿಲ್ಲ. ಅವರು ಯಶಸ್ವಿ ಆಗಿರುವುದು ಸರಿ ತಪ್ಪು ಹೇಳಿದ್ದರಿಂದ ಮತ್ತು ಸಮಯ ಪ್ರಜ್ಞೆಯಿಂದ.. ಸತ್ಯವನ್ನೇ ಹೇಳಿದರೂ, ಜನ ಬೆಂಬಲಿಸಿ ಮೂರು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದರು. ಅವರಿಗೆ ಬಹಳ ಜನ ಪತ್ರಿಕೆ ತೆರೆಯಬೇಡ ಅಂತ ಹೇಳಿದ್ದರು.

ಆದರೂ ಅವರು ಅದನ್ನು ಆರಂಭಿಸಿ ಯಶಸ್ವಿಯಾದರು. ಅವರು ಪತ್ರಿಕೆಯನ್ನು ಒಂದು ರೂಪಾಯಿಗೆ ಮಾರಾಟ ಮಾಡಿದರು. ಅದರಲ್ಲಿ ನಷ್ಟ ಅನುಭವಿಸಿದರೂ ಅವರು ಅದನ್ನು ಹೇಗೆ ಯಶಸ್ವಿ ಮಾಡಬೇಕೆಂಬ ಸತ್ಯ ಗೊತ್ತಿತ್ತು.. ಲಾಜಿಸ್ಟಿಕ್ಸ್‌ನಲ್ಲಿಯೂ ಯಶಸ್ವಿಯಾಗಿದ್ದಾರೆ. ನಮ್ಮ‌ ಕಡೆ ಒಂದು ಗಾದೆ ಮಾತು ಇದೆ. ಯಾರನ್ನಾದರೂ ಮುಗಿಸಬೇಕು ಎಂದರೆ ಹಳೇ ಲಾರಿ ಕೊಟ್ಟು ನೋಡಿ ಅಂತ..' ಎಂದು ಬಸವರಾಜ ಬೊಮ್ಮಾಯಿ‌ ಹೇಳಿದರು.

ವಿಜಯ ಸಂಕೇಶ್ವರ ಅವರ ಜೀವನ ಚರಿತ್ರೆ ಆಧರಿಸಿದ ‘ವಿಜಯಾನಂದ’ ಚಿತ್ರದ ಟ್ರೇಲರ್‌ ಬಿಡುಗಡೆ ವೇಳೆ ಈ ಮಾತು ಹೇಳಿದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ ಸುಮಾರು 40 ಲಕ್ಷ ವೀಕ್ಷಣೆ ಕಂಡಿದೆ. ಡಿ.9ರಂದು ಐದು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ರಿಲೀಸ್‌ ಆಗಿರುವ ಟ್ರೇಲರ್ ಎಲ್ಲರ ಗಮನಸೆಳೆದಿದೆ. ವಿಜಯ ಸಂಕೇಶ್ವರ ಅವರು ಸಾಗಿ ಬಂದ ಹಾದಿಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾಕ್ಕೆ ಮಲಯಾಳಂನ ಗೋಪಿ ಸುಂದರ್ ಸಂಗೀತ ನೀಡಿರುವುದು ವಿಶೇಷ. ಕೀರ್ತನ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ. ಅನಂತ್ ನಾಗ್, ರವಿಚಂದ್ರನ್,‌ ವಿನಯಾಪ್ರಸಾದ್, ಸಿರಿ ಪ್ರಹ್ಲಾದ್, ಭರತ್ ಬೋಪಣ್ಣ, ನಟರಾಜ್, ಶೈನ್ ಶೆಟ್ಟಿ, ದಯಾಳ್ ಪದ್ಮಾನಾಭನ್ ಮುಂತಾದವರು ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com