ಕೈ ಸನ್ನೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್; ರಿಷಬ್ ಶೆಟ್ಟಿ ಏನಂದ್ರು?
ಕನ್ನಡದಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ಬಂಡವಾಳ ಹಾಕಿ ನಾಯಕ ನಟನಾಗಿ ನಟಿಸಿದ 'ಕಿರಿಕ್ ಪಾರ್ಟಿ' ಮೂಲಕ ನಾಯಕಿಯಾಗಿ ಸಿನಿಲೋಕಕ್ಕೆ ಎಂಟ್ರಿ ಕೊಟ್ಟವರು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ನಂತರ ಅವರು ಹಿಂತಿರುಗಿ ನೋಡಲಿಲ್ಲ. ತೆಲುಗಿಗೆ ಹೋಗಿ ಅಲ್ಲಿ ವಿಜಯ್ ದೇವರಕೊಂಡ ಜತೆ ನಟಿಸಿದ ಚಿತ್ರ ಹಿಟ್ ಆಯಿತು.
Published: 23rd November 2022 09:19 AM | Last Updated: 23rd November 2022 03:28 PM | A+A A-

ರಿಷಬ್ ಶೆಟ್ಟಿ, ರಶ್ಮಿಕಾ ಮಂದಣ್ಣ
ಕನ್ನಡದಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ಬಂಡವಾಳ ಹಾಕಿ ನಾಯಕ ನಟನಾಗಿ ನಟಿಸಿದ 'ಕಿರಿಕ್ ಪಾರ್ಟಿ' ಮೂಲಕ ನಾಯಕಿಯಾಗಿ ಸಿನಿಲೋಕಕ್ಕೆ ಎಂಟ್ರಿ ಕೊಟ್ಟವರು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ನಂತರ ಅವರು ಹಿಂತಿರುಗಿ ನೋಡಲಿಲ್ಲ. ತೆಲುಗಿಗೆ ಹೋಗಿ ಅಲ್ಲಿ ವಿಜಯ್ ದೇವರಕೊಂಡ ಜತೆ ನಟಿಸಿದ ಚಿತ್ರ ಹಿಟ್ ಆಯಿತು. ಅಲ್ಲಿಂದಾಚೆಗೆ ಬಾಲಿವುಡ್ ನಲ್ಲಿಯೂ ಅವಕಾಶ ಸಿಕ್ಕಿತು.ಕೈಯಲ್ಲಿ ನಟನೆಗೆ ಸಾಕಷ್ಟು ಚಿತ್ರಗಳಿವೆ. ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಮೆಂಟ್ ಬ್ರೇಕಪ್ ಆದಲ್ಲಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದ ರಶ್ಮಿಕಾರನ್ನು ತೆಗಳುವವರು, ಬೈಯುವವರ ಸಂಖ್ಯೆಗೇನು ಕಡಿಮೆಯಿಲ್ಲ.
ಈ ಬಗ್ಗೆ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ನೊಂದು ರಶ್ಮಿಕಾ ಪತ್ರ ಬರೆದಿದ್ದರು. ತಿಂಗಳ ಹಿಂದೆ ಬಿಡುಗಡೆಯಾದ ರಿಷಬ್ ಶೆಟ್ಟಿಯವರ ನಿರ್ದೇಶನ, ನಟನೆಯ ಕಾಂತಾರ ಚಿತ್ರ ದೇಶ ಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಗಳಿಸಿ ಬಾಕ್ಸ್ ಆಫೀಸ್ ನ್ನು ಕೊಳ್ಳೆ ಹೊಡೆದಿದೆ. ಭಾರತೀಯ ಸಿನಿರಂಗದ ದಿಗ್ಗಜರೇ ಚಿತ್ರವನ್ನು ವೀಕ್ಷಿಸಿ ಹಾಡಿಹೊಗಳಿರುವಾಗ ಪತ್ರಕರ್ತರು ರಶ್ಮಿಕಾರಲ್ಲಿ ಚಿತ್ರವನ್ನು ನೋಡಿಲ್ಲವೇ ಎಂದು ಕೇಳಿದಾಗ ಇನ್ನೂ ನೋಡಿಲ್ಲ ಎಂಬ ಉತ್ತರ ಬಂದಿತ್ತು.
ಆ ವಿಷಯಕ್ಕೆ ಟ್ರೋಲ್ ಆಗಿದ್ದ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಾ, ತಮ್ಮ ಜರ್ನಿ ಬಗ್ಗೆ ವಿವರಿಸಿದ್ದರು. ಮಾಡೆಲ್ ಆಗಿ ಬಣ್ಣದ ಬದುಕು ಆರಂಭಿಸಿದೆ, ಪೇಪರ್ನಲ್ಲಿ ಫೋಟೋ ಬಂತು ಎಂಬಿತ್ಯಾದಿ ವಿಚಾರಗಳನ್ನು ಹೇಳಿಕೊಂಡು ಬಳಿಕ ಮೊದಲ ಸಿನಿಮಾ ಆಫರ್ ಬಂದ ವಿಷಯ ಮಾತನಾಡುವಾಗ ಮೊದಲು ನಟಿಸಿದ ಚಿತ್ರ, ಯಾವ ನಿರ್ಮಾಣ ಸಂಸ್ಥೆ ಎಂದು ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡದೆ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದ್ದಾರೆ. ಈ ವಿಡಿಯೋಗೆ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ರೀತಿ ನಡೆದುಕೊಂಡಿದ್ದು ಅನೇಕರಿಗೆ ಇಷ್ಟವಾಗಿಲ್ಲ.
ಈ ವಿಡಿಯೋ ರಿಷಬ್ ಶೆಟ್ಟಿ ನೋಡಿದ್ದಾರೆ ಎನಿಸುತ್ತಿದೆ. ರಶ್ಮಿಕಾ ಮಂದಣ್ಣ ವರ್ತನೆಗೆ ತಿರುಗೇಟು ಎಂಬಂತೆ ರಿಷಬ್ ಮತ್ತೊಂದು ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಅದೇ ರೀತಿ ಸನ್ನೆ ಮಾಡಿ ಉತ್ತರಿಸಿದ್ದಾರೆ. ರಶ್ಮಿಕಾ, ಸಮಂತಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಇವರೆಲ್ಲರೂ ಒಳ್ಳೆಯ ಕಲಾವಿದರು. ಇವರಲ್ಲಿ ಯಾರ ಜತೆ ಕೆಲಸ ಮಾಡಲು ಇಷ್ಟಪಡುತ್ತೀರಿ’ ಎಂದು ಸಂದರ್ಶಕರು ರಿಷಬ್ಗೆ ಪ್ರಶ್ನೆ ಕೇಳಿದಾಗ, ಎಲ್ಲಿಯೂ ಕೂಡ ರಶ್ಮಿಕಾ ಹೆಸರನ್ನ ಪ್ರಸ್ತಾಪಿಸದೇ ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ಯೋಚಿಸುತ್ತೇನೆ. ಹೊಸ ಕಲಾವಿದರ ಜೊತೆ ನಟಿಸೋಕೆ ಇಷ್ಟಪಡ್ತೀನಿ. ನೀವು ಹೇಳಿದ ಹೆಸರುಗಳಲ್ಲಿ (ಕೋಟ್ ರೀತಿಯಲ್ಲಿ ಸನ್ನೆ ಮಾಡಿ) ನಟಿಯರು ನನಗೆ ಇಷ್ಟ ಇಲ್ಲ. ಸಮಂತಾ, ಸಾಯಿಪಲ್ಲವಿ ಅಭಿನಯ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಈ ಮೂಲಕ ರಶ್ಮಿಕಾ ಸ್ಟೈಲಿನಲ್ಲಿಯೇ ರಿಷಬ್ ಉತ್ತರ ಕೊಟ್ಟಿದ್ದಾರೆ.
The Journey of two "" pic.twitter.com/rbGrdli6K9
— MNV Gowda (@MNVGowda) November 21, 2022