ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ: ಮೊಮ್ಮಗನನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಶಿಷ್ಟ ಪಾತ್ರದಲ್ಲಿ ಅನಂತ್ ನಾಗ್!

ಲೆಜೆಂಡ್ ನಟ ಅನಂತ್ ನಾಗ್ ಸಂಜಯ್ ಶರ್ಮಾ ಚೊಚ್ಚಲ ನಿರ್ದೇಶನದ ಸಿನಿಮಾ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ದಲ್ಲಿ ನಟಿಸಿದ್ದು, ಕೊಡಗಿನ ಖಡಕ್ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
ಅನಂತ್ ನಾಗ್
ಅನಂತ್ ನಾಗ್
Updated on

ಲೆಜೆಂಡ್ ನಟ ಅನಂತ್ ನಾಗ್ ಸಂಜಯ್ ಶರ್ಮಾ ಚೊಚ್ಚಲ ನಿರ್ದೇಶನದ ಸಿನಿಮಾ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ದಲ್ಲಿ ನಟಿಸಿದ್ದು, ಕೊಡಗಿನ ಖಡಕ್ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ತಮ್ಮ ವಿಶಿಷ್ಟ ಪಾತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಂತ್ ನಾಗ್, ನಿರ್ದೇಶಕ ಸಂಜಯ್ ಶರ್ಮಾ ಈ ಸಿನಿಮಾ ಬಗ್ಗೆ ಕೇಳಿದಾಗ ಸ್ಕ್ರಿಪ್ಟ್ ಕಳಿಸುವುದಕ್ಕೆ ಕೇಳಿದ್ದೆ. ಚಿತ್ರಕಥೆಯನ್ನು ಓದಿ ಆನಂದಿಸಿದೆ. ಜಾಹಿರಾತು ನಿರ್ದೇಶಕನಿಂದ ಇಂತಹ ಕಥೆ ಮೂಡಿಬಂದಿರುವುದಕ್ಕೆ ಅಚ್ಚರಿಯಾಯಿತು. ಸಿನಿಮಾದಲ್ಲಿನ ಸೃಜನಶೀಲ ಪ್ರಕ್ರಿಯೆಯನ್ನು ನಿರ್ದೇಶಕ ಅರ್ಥ ಮಾಡಿಕೊಂಡಿರುವ ರೀತೆ ನನಗೆ ಇಷ್ಟವಾಯಿತು ಎನ್ನುತ್ತಾರೆ ಅನಂತ್ ನಾಗ್ 

ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಅಜ್ಜ ಹಾಗೂ ಮೊಮ್ಮಗನ ಬಾಂಧವ್ಯದ ಕುರಿತಾದ ಸಿನಿಮಾ ಆಗಿದ್ದು, ಅನಂತ್ ನಾಗ್ ಅವರದ್ದು ವಿಶಿಷ್ಟ, ಸಂಕೀರ್ಣವಾದ ಪಾತ್ರವಾಗಿದೆ. ಈ ಪಾತ್ರಕ್ಕೆ ನಕಾರಾತ್ಮಕ ಲಕ್ಷಣಗಳೂ ಇದ್ದು, ಆತ ಅಹಂಕಾರ ಮತ್ತು ಸ್ವಾರ್ಥಿಯಾಗಿರುತ್ತಾನೆ ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ ಅನಂತ್ ನಾಗ್ 

ಸಂಜಯ್ ಈ ಪಾತ್ರವನ್ನು ನಿರ್ವಹಿಸಿರುವುದು ನನನ್ನು ಆಕರ್ಷಿಸಿತು. ಈ ನಿರ್ದಿಷ್ಟ ಪಾತ್ರಕ್ಕೆ ಜನರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ನೋಡಲು ಕಾತುರದಿಂದ ಇದ್ದೆನೆ ಎನ್ನುವ ಅನಂತ್ ನಾಗ್, ಸಂಜಯ್ ಅವರ ಕಥೆಗೆ ಪೂರಕವಾಗಿ ಕೆಲಸ ಮಾಡಿರುವ ಕಲಾ ನಿರ್ದೇಶಕರಾದ ವಿನೀತ ಅವರ ಸೃಜನಶೀಲತೆಗೂ ಅನಂತ್ ನಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

<strong>ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದಲ್ಲಿ​ ಅನಂತ್ ನಾಗ್, ದಿಗಂತ್</strong>
ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದಲ್ಲಿ​ ಅನಂತ್ ನಾಗ್, ದಿಗಂತ್

ಅನಂತ್ ನಾಗ್ ಅವರ ತಿಮ್ಮಯ್ಯ ಪಾತ್ರ ಸಿನಿಮಾದಲ್ಲಿ ಶ್ರೀಮಂತನಾಗಿರುವುದಷ್ಟೇ ಅಲ್ಲದೇ ಉತ್ತಮವಾದ ತುತ್ತೂರಿ (ಕಹಳೆ) ವಾದಕನೂ ಆಗಿದ್ದು, ಇದೇ ಉಪಕರಣವನ್ನು ಹಿಂಸೆ, ಗದ್ದಲ ಉಂಟುಮಾಡುವುದಕ್ಕೂ ಬಳಸಿಕೊಳ್ಳುವುದು ಈ ಪಾತ್ರದ ವೈಶಿಷ್ಟ್ಯವಾಗಿದೆ.

ಅಷ್ಟೇ ಅಲ್ಲದೇ ಮೊಮ್ಮಗನನ್ನು ಯಾವಾಗಲೂ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವ ವ್ಯಕ್ತಿತ್ವ ಹೊಂದಿರುವ ತಿಮ್ಮಯ್ಯ, ಮೊಮ್ಮಗ ಯಾವಾಗಲೂ ತಮ್ಮ ಆದೇಶಗಳನ್ನು ಪಾಲಿಸಬೇಕೆಂಬ ಬಯಕೆ ಹೊಂದಿರುವ ಪಾತ್ರವಾಗಿದೆ. ಅನಂತ್ ನಾಗ್ ಈ ಸಿನಿಮಾಗಾಗಿ ಹೊಸ ಉಪಕರಣ ನುಡಿಸುವುದನ್ನು ಕಲಿತಿದ್ದಾಗಿ ತಿಳಿಸಿದ್ದಾರೆ.

ರಾಜೇಶ್ ಶರ್ಮಾ ನಿರ್ಮಾಣದ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದಲ್ಲಿ ದಿಗಂತ್, ಐಂದ್ರಿತಾ ರೇ ಮತ್ತು ಶುಭಾ ಅಯ್ಯಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com