ವಿಜಯ್ ಅಭಿನಯದ 'ವಾರಿಸು' ಚಿತ್ರ ನಿರ್ಮಾಣ ಸಂಸ್ಥೆಗೆ ಸಂಕಷ್ಟ: ಶೋಕಾಸ್ ನೋಟಿಸ್ ನೀಡಿದ ಎಡಬ್ಲ್ಯೂಬಿಐ

ವಿಜಯ್ ಅಭಿನಯದ ಮುಂಬರುವ ತಮಿಳು ಚಿತ್ರ 'ವಾರಿಸು' ನಿರ್ಮಿಸುತ್ತಿರುವ ಹೈದರಾಬಾದ್ ಮೂಲದ ವೆಂಕಟೇಶ್ವರ ಕ್ರಿಯೇಷನ್ಸ್‌ಗೆ ಸಂಕಷ್ಟ ಎದುರಾಗಿದ್ದು ಎಡಬ್ಲ್ಯೂಬಿಐ ಶೋಕಾಸ್ ನೋಟೀಸ್ ನೀಡಿದೆ.
ನಟ ವಿಜಯ್
ನಟ ವಿಜಯ್

ಚೆನ್ನೈ: ವಿಜಯ್ ಅಭಿನಯದ ಮುಂಬರುವ ತಮಿಳು ಚಿತ್ರ 'ವಾರಿಸು' ನಿರ್ಮಿಸುತ್ತಿರುವ ಹೈದರಾಬಾದ್ ಮೂಲದ ವೆಂಕಟೇಶ್ವರ ಕ್ರಿಯೇಷನ್ಸ್‌ಗೆ ಸಂಕಷ್ಟ ಎದುರಾಗಿದ್ದು ಎಡಬ್ಲ್ಯೂಬಿಐ ಶೋಕಾಸ್ ನೋಟೀಸ್ ನೀಡಿದೆ.

ಕಡ್ಡಾಯ ಪೂರ್ವ ಚಿತ್ರೀಕರಣ ಅನುಮತಿಯನ್ನು ಪಡೆಯದೆ ಐದು ಆನೆಗಳನ್ನು ಬಳಸಿದ್ದಕ್ಕಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ(ಎಡಬ್ಲ್ಯುಬಿಐ) ವೆಂಕಟೇಶ್ವರ ಕ್ರಿಯೇಷನ್ಸ್‌ಗೆ ಶೋಕಾಸ್ ನೋಟಿಸ್ ನೀಡಿದೆ.

AWBI ಕಾರ್ಯದರ್ಶಿ ಎಸ್‌ಕೆ ದತ್ತಾ ಅವರು ನೀಡಿರುವ ಶೋಕಾಸ್ ನೋಟಿಸ್ ನಲ್ಲಿ ಮಂಡಳಿಯಿಂದ ಪೂರ್ವ-ಚಿತ್ರೀಕರಣ ಅನುಮತಿಯಿಲ್ಲದೆ ಆನೆಗಳನ್ನು ಬಳಸುವುದು ಪ್ರದರ್ಶನ ಪ್ರಾಣಿಗಳ(ನೋಂದಣಿ) ನಿಯಮಗಳು, 2001ರ ಉಲ್ಲಂಘನೆಯಾಗಿದೆ ಎಂದು ತಿಳಿಸಲಾಗಿದೆ. ಖಾಸಗಿ ದೂರಿನ ಆಧಾರದ ಮೇಲೆ ಮಂಡಳಿ ನೋಟಿಸ್ ನೀಡಿದೆ.

ಆನೆಗಳ ಬಳಕೆ ಕುರಿತಂತೆ 'ವಾರಿಸು' ಚಿತ್ರ ನಿರ್ಮಾಣ ಸಂಸ್ಧೆ ವೆಂಕಟೇಶ್ವರ ಕ್ರಿಯೇಷನ್ಸ್‌ನಿಂದ ಕಡ್ಡಾಯ ಪೂರ್ವ ಚಿತ್ರೀಕರಣ ಅನುಮತಿ ಅರ್ಜಿಯನ್ನು ಮಂಡಳಿಯು ಇಲ್ಲಿಯವರೆಗೆ ಸ್ವೀಕರಿಸಿಲ್ಲ ಎಂದು ದತ್ತಾ ಖಚಿತಪಡಿಸಿದ್ದಾರೆ.

ಪ್ರದರ್ಶನ ಪ್ರಾಣಿಗಳ(ನೋಂದಣಿ) ನಿಯಮಗಳು, 2001ರ ನಿಯಮ 3(1)ರ ಪ್ರಕಾರ, ಪ್ರಾಣಿಗಳನ್ನು ಬಳಸಿಕೊಂಡರೆ ಅಥವಾ ತರಬೇತಿ ನೀಡುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಯು ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಮಂಡಳಿಯ ಅನುಮತಿಯಿಲ್ಲದೆ ಪ್ರಾಣಿಗಳನ್ನು ಬಳಸುವುದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, 1960ರ ಸೆಕ್ಷನ್ 26ರ ಅಡಿಯಲ್ಲಿ ಅಪರಾಧವಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ ಶೆಡ್ಯೂಲ್-1ರ ಅಡಿಯಲ್ಲಿ ಆನೆಗಳನ್ನು ಸಂರಕ್ಷಿಸಲಾಗಿದೆ. ಪ್ರದರ್ಶನ ಪ್ರಾಣಿಗಳ (ನೋಂದಣಿ) ನಿಯಮಗಳು, 2001ರ ನಿಯಮ 7(2)ರ ಪ್ರಕಾರ, ಚಲನಚಿತ್ರಗಳಲ್ಲಿ ಬಳಸಲು ಪೂರ್ವಾನುಮತಿ ಪಡೆಯುವುದು ಅವಶ್ಯಕ.

ಕಾಯ್ದೆ ಪ್ರಕಾರ, ಪ್ರಾಣಿಯ ವಯಸ್ಸು, ಪ್ರಾಣಿಗಳ ದೈಹಿಕ ಆರೋಗ್ಯ, ಪ್ರಾಣಿಯು ನಿರ್ವಹಿಸಬೇಕಾದ ಕಾರ್ಯಕ್ಷಮತೆಯ ಸ್ವರೂಪ, ಅಂತಹ ಪ್ರದರ್ಶನಕ್ಕಾಗಿ ಪ್ರಾಣಿಯನ್ನು ಯಾವ ಅವಧಿಯವರೆಗೆ ಬಳಸಬೇಕು ಎಂಬುದನ್ನು ನಿರ್ದಿಷ್ಟಪಡಿಸುವ ನಿಗದಿತ ಸ್ವರೂಪವನ್ನು ಅನುಸರಿಸಬೇಕು. ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ಅಡಿಯಲ್ಲಿ ಒಳಗೊಂಡಿರುವ ಪ್ರಾಣಿಗಳ ಸಂದರ್ಭದಲ್ಲಿ ಮಾಲೀಕತ್ವ ಪ್ರಮಾಣಪತ್ರದ ಜೊತೆಗೆ ಪ್ರಾಣಿಗಳ ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಪ್ರಮಾಣೀಕರಿಸುವ ಪಶುವೈದ್ಯರು ನೀಡಿದ ಫಿಟ್‌ನೆಸ್ ಪ್ರಮಾಣಪತ್ರದೊಂದಿಗೆ ಇದನ್ನು ಒದಗಿಸಬೇಕು.

ಏಳು ದಿನಗಳೊಳಗೆ ಉಲ್ಲಂಘನೆಗಳ ಸಂಪೂರ್ಣ ಮತ್ತು ಸಮಗ್ರ ವಿವರಣೆಯನ್ನು ಸಲ್ಲಿಸುವಂತೆ ಮಂಡಳಿಯು ವೆಂಕಟೇಶ್ವರ ಕ್ರಿಯೇಷನ್ಸ್‌ಗೆ ಸೂಚಿಸಿದೆ. ವಿಫಲವಾದರೆ ಮಂಡಳಿಯು ಪ್ರಾಣಿಗಳ ಕಲ್ಯಾಣಕ್ಕೆ ಸರಿಯಾದ ಮತ್ತು ಅಗತ್ಯವೆಂದು ಪರಿಗಣಿಸಬಹುದಾದ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com