ಬಿಗ್ ಬಾಸ್ ಮನೆಯಿಂದ ವಿನೋದ್ ಗೊಬ್ಬರಗಾಲ ಔಟ್! ನೆಟ್ಟಿಗರ ಆಕ್ರೋಶ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಬಿಗ್ ಬಾಸ್ 9ನೇ ಆವೃತ್ತಿಯ ಸ್ಪರ್ಧಿಗಳಲ್ಲಿ ವಿನೋದ್ ಗೊಬ್ಬರ ಗಾಲ ಈ ವಾರ ಮನೆಯಿಂದ ಔಟ್ ಆಗಿದ್ದಾರೆ. ಇದು ವೀಕ್ಷಕರಿಗೆ ಅಚ್ಚರಿ ಉಂಟು ಮಾಡುವುದರ ಜೊತೆಗೆ ಆಕ್ರೋಶಕ್ಕೂ ಕಾರಣವಾಗಿದೆ.
ವಿನೋದ್ ಗೊಬ್ಬರಗಾಲ
ವಿನೋದ್ ಗೊಬ್ಬರಗಾಲ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಬಿಗ್ ಬಾಸ್ 9ನೇ ಆವೃತ್ತಿಯ ಸ್ಪರ್ಧಿಗಳಲ್ಲಿ ವಿನೋದ್ ಗೊಬ್ಬರ ಗಾಲ ಈ ವಾರ ಮನೆಯಿಂದ ಔಟ್ ಆಗಿದ್ದಾರೆ. ಇದು ವೀಕ್ಷಕರಿಗೆ ಅಚ್ಚರಿ ಉಂಟು ಮಾಡುವುದರ ಜೊತೆಗೆ ಆಕ್ರೋಶಕ್ಕೂ ಕಾರಣವಾಗಿದೆ.

ಮಜಾಭಾರತ, ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಕಾಮಿಡಿ ಕಲಾವಿದ ವಿನೋದ್ ಗೊಬ್ಬರಗಾಲ ಮನೋರಂಜನೆ ಜೊತೆಗೆ ಟಾಸ್ಕ್ ನಲ್ಲೂ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದರು. ಎರಡೆರಡು ಬಾರಿ ಕಿಚ್ಚಳ ಚಪ್ಪಾಳೆ ಕೂಡಾ ಸಿಕ್ಕಿತ್ತು. ಮನೆಯ  ಕ್ಯಾಪ್ಟನ್ ಕೂಡಾ ಆಗಿದ್ದರೂ ಹೀಗಿದ್ದರೂ ಅವರನ್ನು ಈ ವಾರ ಮನೆಯಿಂದ ಎಲಿಮಿನೇಟ್ ಮಾಡಿರುವುದಕ್ಕೆ ವೀಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ನಾನಾ ರೀತಿಯಲ್ಲಿ ಟೀಕಿಸುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕಾರ್ಯಕ್ರಮಕ್ಕೆ ತನ್ನದೇ ಆದ ವೀಕ್ಷಕ ವರ್ಗವಿದೆ. ರಾತ್ರಿ ಒಂಬತ್ತು ಗಂಟೆ ಆಯಿತ್ತೆಂದರೆ ಸಾಕು ಬೇರೆ ಕೆಲಸವನೆಲ್ಲಾ ಬಿಟ್ಟು ಟಿ.ವಿ. ಮುಂದೆ ಕೂರುವ ಪ್ರೇಕ್ಷಕರಿದ್ದಾರೆ. ಕೆಲವರಂತೂ ಎರಡೆರಡೂ ಬಾರಿ ಇದನ್ನೇ ವೀಕ್ಷಿಸುವವರು ಇದ್ದಾರೆ. ಈ ಬಾರಿ 9 ಬಾರಿ ಪ್ರವೀಣರೂ ಮತ್ತು 9 ಮಂದಿ ನವೀನರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಅದರಲ್ಲಿ ಈಗಾಗಲೇ  6 ಮಂದಿ ಮನೆಯಿಂದ ಹೊರಗೆ ಬಂದಿದ್ದು, ಇದೀಗ ಏಳನೇಯವರಾಗಿ ವಿನೋದ್ ಗೊಬ್ಬರ ಗಾಲ ಮನೆಯಿಂದ ಹೊರಗೆ ಬಂದಿದ್ದಾರೆ.

ಬಿಬಿ ಎಲಿಮಿನೇಷನ್‌ ವಿಚಾರ ಟಿವಿ ಅಥವಾ ಓಟಿಟಿಯಲ್ಲಿ ಪ್ರಸಾರವಾಗುವ ಮುನ್ನವೇ ಟ್ರೋಲ್‌ ಪೇಜ್‌ಗಳಲ್ಲಿಈ ಬಗ್ಗೆ ಹರಿದಾಡುತ್ತಿದ್ದು, 'ಬಡವರ ಮನೆಯ ಹುಡಗರನ್ನು ಬೆಳೆಯಲು ಬಿಡ್ರೋ, 'ಕಳಪೆ ಬಿಗ್ ಬಾಸ್ ಮತ್ತಿತರ ಟೀಕೆಗಳನ್ನು ಮಾಡುತ್ತಾ ಟ್ವಿಟಿಗರು ಸಿಟ್ಟನ್ನು ಹೊರಹಾಕುತ್ತಿದ್ದಾರೆ. ವಿನೋದ್ ಗೊಬ್ಬರ ಗಾಲ ಅವರನ್ನು ಟಾಪ್ 3ರಲ್ಲಿ ನೋಡಲು ನಿರೀಕ್ಷಿಸಿದ್ದ ವೀಕ್ಷಕರಂತೂ ಇನ್ನೂ ಮುಂದೆ ಬಿಗ್ ಬಾಸ್ ಕಾರ್ಯಕ್ರಮವೇ ನೋಡಲ್ಲ ಅಂತಾ ಟ್ವಿಟ್ ಮಾಡುತ್ತಿದ್ದಾರೆ.

ಎಲ್ಲಾ ವಿಚಾರದಲ್ಲೂ ಉಳಿದ ಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತಾ ಬಂದಿದ್ದ ವಿನೋದ್ ಗೊಬ್ಬರ ಗಾಲ ಬಿಗ್ ಬಾಸ್ ನಿಂದ ಹೊರಗೆ ಬರುವ ವಿಚಾರ ತೀವ್ರ ಬೇಸರ ತರಿಸಿದೆ. ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಅನುಮಾನ ಮೂಡಿಸಿದೆ ಎಂದು ಕೆಲವರು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವಾರ ನೀಡಿದ ಕಾಡು ಟಾಸ್ಕ್  ನಲ್ಲಿ ಎಲ್ಲಾ ಇದ್ದು, ಅವರು ಮಾಡಿದ ಗೋಲ್ ಮಾಲ್ ಕಾರಣವಾಯ್ತಾ ಎನ್ನೋ ಪ್ರಶ್ನೆಗಳು ಎದ್ದಿವೆ. ಆದರೂ, ವಿನೋದ್ ಗಿಂತ ಕಳಪೆ ಸ್ಪರ್ಧಿಗಳು ಮನೆಯಲ್ಲಿ ಇರುವಾಗ ಅವರನ್ನು ಮನೆಯಿಂದ ಎಲಿಮಿನೇಟ್ ಮಾಡಬಾರದಿತ್ತು. ಇನ್ನು ಸ್ವಲ್ಪದಿನ ಬಿಗ್ ಬಾಸ್ ನಲ್ಲಿ ಇರಬೇಕಿತ್ತು ಎಂದು ನೆಟ್ಟಿಗರ ವಲಯದಲ್ಲಿ ಚರ್ಚೆ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com