ಶಿವರಾಜಕುಮಾರ್- ಉಪೇಂದ್ರ ಅಭಿನಯದ '45' ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ!

ಅರ್ಜುನ್  ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಈಗಾಗಲೇ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ನಟಿಸುತ್ತಿದ್ದಾರೆ. ಈಗ ಬಂದಿರುವ ಹೊಸ ಅಪ್ ಡೇಟ್ ಎಂದರೆ ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ನಟಿಸುತ್ತಿದ್ದಾರೆ.
ಶಿವರಾಜಕುಮಾರ್- ಉಪೇಂದ್ರ ಅಭಿನಯದ '45' ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ
ಶಿವರಾಜಕುಮಾರ್- ಉಪೇಂದ್ರ ಅಭಿನಯದ '45' ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ

ಅರ್ಜುನ್  ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಈಗಾಗಲೇ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ನಟಿಸುತ್ತಿದ್ದಾರೆ. ಈಗ ಬಂದಿರುವ ಹೊಸ ಅಪ್ ಡೇಟ್ ಎಂದರೆ ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ನಟಿಸುತ್ತಿದ್ದಾರೆ.

ಅರ್ಜುನ ಜನ್ಯ ಡೈರೆಕ್ಷನ್ ನ ನಿರ್ದೇಶಕ ನಟ ರಾಜ್ ಬಿ. ಶೆಟ್ಟಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಮೊದಲ ಸಿನಿಮಾದಲ್ಲಿ ಮೂವರು ನಾಯಕರಿಗೆ ಜನ್ಯ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಸ್ಟಾರ್ ಜೋಡಿಯ ಜೊತೆ ಇದೀಗ ಮಾಸ್ ಐಕಾನ್ ರಾಜ್ ಬಿ ಶೆಟ್ಟಿ ಅವರು ಜೊತೆಯಾಗಿರುವುದು ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ.   ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರಂತಹ ಅದ್ಭುತ ಕಲಾವಿದರ ಅಭಿನಯ ಹಾಗೂ ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರ ಆರಂಭದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಬಹು ನಿರೀಕ್ಷಿತ ಈ ಚಿತ್ರ  ಕಲಾರಸಿಕರಿಗೆ ಮನೋರಂಜನೆಯ ರಸದೌತಣ ನೀಡುವುದಂತೂ ಖಚಿತ.

ಸದ್ಯ ನಾನಿರುವ ಪರಿಸ್ಥಿತಿಯಲ್ಲಿ ಯಾವುದೇ ಸಿನಿಮಾ ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ, ಆದರೆ ಅರ್ಜುನ್ ಜನ್ಯ ಅವರನ್ನು ಭೇಟಿ ಮಾಡಿದ ಮೇಲೆ ನನ್ನ ನಿರ್ಧಾರ ಬದಲಿಸಿಕೊಂಡೆ, ಅರ್ಜುನ್ ಜನ್ಯ ಅವರಿಗೆ ಒಳ್ಳೆಯ ಸಿನಿಮಾ ಮಾಡುವ ಹಸಿವಿದೆ ಎಂದು ತಿಳಿಯಿತು.

ಅವರು ನಿರ್ದೇಶಕರಂತೆ ಯೋಚಿಸುತ್ತಿದ್ದಾರೆ, ಇದು ಒಂದು ಪ್ರಮುಖ ಗುಣವಾಗಿದೆ, ಮತ್ತು ನಾನು ಶಿವರಾಜ್‌ಕುಮಾರ್ ಮತ್ತು ಉಪೇಂದ್ರ ಅವರೊಂದಿಗೆ ಈ ಚಿತ್ರದಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

45 ,ಓಂ, ಪ್ರೀತ್ಸೆ ಮತ್ತು ಲವ ಕುಶ ನಂತರ ನಾಲ್ಕನೇ ಬಾರಿಗೆ ಶಿವಣ್ಣ ಮತ್ತು ಉಪೇಂದ್ರ ಅವರನ್ನು ಮತ್ತೆ ಒಂದಾಗುತ್ತಿದ್ದಾರೆ.  ಇದೇ ಮೊದಲ ಬಾರಿಗೆ ರಾಜ್, ಶಿವಣ್ಣ ಮತ್ತು ಉಪೇಂದ್ರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಈ ಚಿತ್ರವು ನಿರ್ದೇಶಕನಾಗಿ ನನ್ನ ಚೊಚ್ಚಲ ಪ್ರವೇಶವಾಗಿದೆ ಎಂಬುದನ್ನು ಬಿಟ್ಟರೆ, ಇದು ಮೂಲಭೂತವಾಗಿ  ನಟರಿಗಾಗಿ ಮಾಡಿರುವ ಸ್ಕ್ರಿಪ್ಟ್ ಆಗಿದೆ. ಮಾಸ್ ಎಂಟರ್‌ಟೈನರ್ ಆಗಿರುವ ಅರ್ಜುನ್, ಮೂವರಿಗೀ ಸಮಾನವಾದ ಪಾತ್ರ ನೀಡಲಿದ್ದಾರೆಯೇ ಎಂದು ಕಾದು ನೋಡಬೇಕಾಗಿದೆ.

ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ (ನಾತಿಚರಾಮಿ, ಗಾಳಿಪಟ 2)ನಿರ್ಮಿಸಿದ್ದಾರೆ, 45  ಸಿನಿಮಾಗೆ ಅರ್ಜುನ್ ಸಂಗೀತ ಸಂಯೋಜನೆ ಮತ್ತು ಕಥೆ ಮತ್ತು ಚಿತ್ರಕಥೆಯನ್ನು ಬರೆಯಲಿದ್ದಾರೆ. ಪ್ರಸ್ತುತ, ಪ್ರಿ-ಪ್ರೊಡಕ್ಷನ್ ಹಂತದಲ್ಲಿ, 45 ರ ತಯಾರಕರು ಇದನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡುವ ಮೂಲಕ ಬಹುಭಾಷಾ ಪ್ರಾಜೆಕ್ಟ್ ಮಾಡಲು ಯೋಜಿಸಿದ್ದಾರೆ. ರಾಜ್ ತಮ್ಮ ಮುಂದಿನ ನಿರ್ದೇಶನದ ಸ್ವಾತಿ ಮುತ್ತಿನ ಮಳೆ ಹನಿಗೆ ಸ್ಕ್ರಿಪ್ಟ್ ಬರೆಯುವಲ್ಲಿ ನಿರತರಾಗಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com