'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ'ಗೆ ಅಜಯ್ ರಾವ್ ನಾಯಕ!

ನಟ ಅಜಯ್ ರಾವ್ ರಂಗಿತರಂಗ ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರೊಂದಿಗೆ ಥ್ರಿಲ್ಲರ್ ಸಿನಿಮಾ ಯೋಜನೆಯೊಂದನ್ನು ಘೋಷಿಸಿದ್ದಾರೆ
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ
Updated on

ನಟ ಅಜಯ್ ರಾವ್ ರಂಗಿತರಂಗ ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರೊಂದಿಗೆ ಥ್ರಿಲ್ಲರ್ ಸಿನಿಮಾ ಯೋಜನೆಯೊಂದನ್ನು ಘೋಷಿಸಿದ್ದಾರೆ. ಸಿನಿಮಾಗೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಎಂಬ ಶೀರ್ಷಿಕೆ ನೀಡಲಾಗಿದ್ದು, ಸಿನಿಮಾದಲ್ಲಿ ಹಾಸ್ಯದ ಅಂಶಗಳೂ ಇರಲಿವೆ. 

ನಿರ್ದೇಶಕ ಸುನಿ ಅವರೊಂದಿಗೆ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅಭಿಷೇಕ್, ಈ ಯೋಜನೆಯ ಮೂಲಕ ಚೊಚ್ಚಲ ನಿರ್ದೇಶನ ಮಾಡುತ್ತಿದ್ದು, ಕುತೂಹಲಕಾರಿ ಪೋಸ್ಟರ್ ಮೂಲಕ ಈ ಯೋಜನೆಯ ಅಧಿಕೃತ ಘೋಷಣೆ ಮಾಡಲಾಯಿತು.
 
ಚೊಚ್ಚಲ ನಿರ್ದೇಶನ ಮಾಡುತ್ತಿರುವ ನಿರ್ದೇಶಕ ಈ ಕಥೆಯನ್ನು ಬ್ಯಾಂಕ್ ದರೋಡೆ ಘಟನೆಯ ಸುತ್ತ ಹೆಣೆದಿದ್ದು, 2023 ರ ಜನವರಿಯಿಂದ ಚಿತ್ರೀಕರಣ ಪ್ರಾರಂಭಿಸಲು ಯೋಜನೆ ಹೊಂದಿದ್ದಾರೆ.

ರಂಗಿತರಂಗ ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರ ಬ್ಯಾನರ್ ಶ್ರೀದೇವಿ ಎಂಟರ್ಟೈನರ್ಸ್ ಅಡಿಯಲ್ಲಿ   ಮೂಡಿಬರುತ್ತಿರುವ 5 ನೇ ಸಿನಿಮಾ ಇದಾಗಿದ್ದು, ಸಿನಿಮಾಗೆ ಜುದಾ ಸ್ಯಾಂಡಿ ಸಂಗೀತವಿದ್ದು, ಅಭಿಷೇಕ್ ಜಿ ಕಾಸರಗೋಡು ಅವರ ಸಿನಿಮಾಟೋಗ್ರಫಿ ಇದೆ. ತೇಜಸ್ ಆರ್ ಸಿನಿಮಾ ಸಂಕಲನದ ಜವಾಬ್ದಾರಿ ಹೊಂದಿದ್ದಾರೆ. ಕಲಾ ವಿಭಾಗದ ಮುಖ್ಯಸ್ಥರಾಗಿ ರಘು ಇರಲಿದ್ದಾರೆ.
 
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಯೋಜನೆಯ ಜೊತೆಗೆ ಅಜಯ್, ನಿರ್ದೇಶಕ ಮಂಜು ಸ್ವರಾಜ್ ಅವರೊಂದಿಗೂ ಸಿನಿಮ ಮಾಡುತ್ತಿದ್ದು, ನವೆಂಬರ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com