'ಅಪ್ಪು' ಸರ್ ಅವರನ್ನು ಭೇಟಿಯಾಗದಿರುವುದು ನನ್ನ ದುರಾದೃಷ್ಟ: ಸಂಗೀತಾ ಶೃಂಗೇರಿ

777 ಚಾರ್ಲಿ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಸಂಗೀತಾ ಶೃಂಗೇರಿ ಇದೀಗ ತಮ್ಮ ಮುಂದಿನ ಚಿತ್ರ ಲಕ್ಕಿ ಮ್ಯಾನ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.
ಸಂಗೀತಾ ಶೃಂಗೇರಿ
ಸಂಗೀತಾ ಶೃಂಗೇರಿ

777 ಚಾರ್ಲಿ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಸಂಗೀತಾ ಶೃಂಗೇರಿ ಇದೀಗ ತಮ್ಮ ಮುಂದಿನ ಚಿತ್ರ ಲಕ್ಕಿ ಮ್ಯಾನ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರನ್ನು ದೇವರಂತೆ ತೋರಿಸುವ ಈ ಚಿತ್ರಕ್ಕೆ ಭಾವನಾತ್ಮಕ ಸಂಬಂಧವಿದೆ ಎಂದು ಸಂಗೀತಾ ಹೇಳಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾಗದಿರುವುದು ದುರದೃಷ್ಟಕರ ಎಂದು ಭಾವಿಸುತ್ತೇನೆ ಎಂದು ಸಂಗೀತಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಚಿತ್ರದ ನೃತ್ಯದ ಚಿತ್ರೀಕರಣ ಸಮಯದಲ್ಲಿ ಅಪ್ಪು ಅವರನ್ನು ಭೇಟಿಯಾಗುತ್ತೇನೆ ಎಂದು ನಾನು ಭಾವಿಸಿದೆ, ಆದರೆ ದುರದೃಷ್ಟವಶಾತ್ ಕೊನೆಯ ಕ್ಷಣದಲ್ಲಿ ಬದಲಾವಣೆಗಳಾಗಿದ್ದವು.

<strong>ಸಂಗೀತಾ ಶೃಂಗೇರಿ</strong>
ಸಂಗೀತಾ ಶೃಂಗೇರಿ

ಅದಾದ ನಂತರ ಪತ್ರಿಕಾಗೋಷ್ಠಿಯ ಸಮಯದಲ್ಲಿ ನಾವು ಭೇಟಿಯಾಗಬಹುದೆಂದು  ಅಂದುಕೊಂಡಿದ್ದೆ, ಆದರೆ ವಿಧಿಯಾಟವೇ ಬೇರೆಯಾಗಿತ್ತು ಎಂದು  ಸಂಗೀತಾ ಹೇಳಿದ್ದಾರೆ, ಸೆಪ್ಟಂಬರ್ 9 ರಂದು ಲಕ್ಕಿಮ್ಯಾನ್ ರಿಲೀಸ್ ಆಗಲಿದೆ.  ನಟನೆ ಎಂಬುದು ಜವಾಬ್ದಾರಿಯುತ ಕೆಲಸ ಎಂಬ ನಂಬಿಕೆ ನನ್ನದು. ಹರ ಹರ ಹರ ಮಹಾದೇವ್ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಿಂದ ನಾನು ಇದನ್ನು ಕಲಿತಿದ್ದೇನೆ ಎಂದು ತಿಳಿಸಿದ್ದಾರೆ.

ನನ್ನನ್ನು ತಿಳಿದಿರುವ ಅಥವಾ ನನ್ನಿಂದ ಕೆಲವು ವಿಶಿಷ್ಟ ರೀತಿಯ ಕೆಲಸವನ್ನು ನಿರೀಕ್ಷಿಸುವ ಯಾರಾದರೂ ನಿರಾಶೆಗೊಳ್ಳಬಾರದು. ಅದು ಜವಾಬ್ದಾರಿಯಾಗಿದೆ ಏಕೆಂದರೆ ನಾನು 10 ವರ್ಷಗಳ ನಂತರ ನನ್ನ ವೃತ್ತಿಜೀವನವನ್ನು ಹಿಂತಿರುಗಿ ನೋಡಿದಾಗ, ನಾನು ಗುಣಮಟ್ಟದ ಕೆಲಸವನ್ನು ಮಾಡಿದ್ದೇನೆ ಎಂದು ತಿಳಿಯಲು ಬಯಸುತ್ತೇನೆ ಎಂದಿದ್ದಾರೆ.

ನಾನು ಚಾರ್ಲಿ ಸಿನಿಮಾ ಮಾಡಿದಾಗ, ಅದು ಯಶಸ್ವಿಯಾಗಲಿದೆ ಎಂದು ನನಗೆ ತಿಳಿದಿತ್ತು ಹಾಗಾಗಿ ಅದರಲ್ಲಿ ಕೆಲಸ ಮಾಡಿದೆ. ಲಕ್ಕಿ ಮ್ಯಾನ್‌ನ ವಿಷಯದಲ್ಲಿ, ಕಥೆ ಅದ್ಭುತವಾಗಿದೆ, ಮತ್ತು ನಾನು ಸರಿಯಾದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ" ಎಂದು ಸಂಗೀತಾ ವಿವರಿಸಿದ್ದಾರೆ.

ನಾನು  ಎಲ್ಲಾ ಇನ್‌ಪುಟ್‌ಗಳನ್ನು ತೆಗೆದುಕೊಂಡು ಪಾತ್ರಕ್ಕೆ ಬೇಕಾದುದನ್ನು ಹೊರತರುತ್ತಿದ್ದೆ. 777 ಚಾರ್ಲಿಯಲ್ಲಿ ದೇವಿಕಾ ಪಾತ್ರವು ಬಹಳಷ್ಟು ಹೃದಯಗಳನ್ನು ಗೆದ್ದಿದ್ದರೂ ಸೀಮಿತ ಸ್ಕ್ರೀನ್‌ಟೈಮ್ ಹೊಂದಿತ್ತು, ಆದರೆ ಅದು ಲಕ್ಕಿ ಮ್ಯಾನ್‌ನಲ್ಲಿ ಆ  ರೀತಿಯಿಲ್ಲ, ಈ ಪಾತ್ರವು ಬಾಲ್ಯದ ಸ್ನೇಹಿತರ ಸುತ್ತ ಸುತ್ತುತ್ತದೆ ಮತ್ತು ಚಿತ್ರದಲ್ಲಿ ನಾನು ದೊಡ್ಡ ಪಾತ್ರವನ್ನು ನಿರ್ವಹಿಸುತ್ತೇನೆ. ನನ್ನ ನೋಡುಗರಿಗೆ ರಸದೌತಣ ನೀಡಲಿದೆ ಎಂದು ವಿವರಿಸಿದ್ದಾರೆ.

ಈ ಪಾತ್ರವು ಬಹಳಷ್ಟು ವಿಭಿನ್ನತೆಯಿಂದ ಕೂಡಿದ್ದು, ನಾನು ಅನು ಪಾತ್ರವನ್ನು ಆನಂದಿಸಿದೆ. ಇದು ವಿದ್ಯಾರ್ಥಿಗಳು, ಯುವ ಜೋಡಿಗಳು ಮತ್ತು ಜಗತ್ತಿನಲ್ಲಿ ಪ್ರೀತಿಯೇ ಪ್ರಧಾನ ಎಂದು ನಂಬುವ ಇತರ ಜನರಿಗೆ ಸಾಕಷ್ಟು ವರದಾನವಾಗಿದೆ.

ಲಕ್ಕಿ ಮ್ಯಾನ್‌ಗಾಗಿ ನನ್ನನ್ನು ಸಂಪರ್ಕಿಸಿದಾಗ, ಇಬ್ಬರು ನಾಯಕಿಯರಿರುವ ಚಿತ್ರ ಮಾಡದಬಾರದೆಂದು ನಿರ್ಧರಿಸಿದ್ದೆ.  ನನ್ನ ಅಭಿನಯದ ಅರ್ಹತೆಯನ್ನು ಸಾಬೀತುಪಡಿಸಲು ನಾನು ಏಕೈಕ ನಾಯಕಿಯಾಗಿ ನಟಿಸಲು ಬಯಸುತ್ತೇನೆ. ಆದರೆ, ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಓ ಮೈ ಕಡವುಲೆ ನೋಡುವಂತೆ ಕೇಳಿಕೊಂಡಿದ್ದೆ. ನಾನು ಚಿತ್ರ ಮತ್ತು ಅನು ಜೊತೆ ಪ್ರೀತಿಯಲ್ಲಿ ಬಿದ್ದೆ ಮತ್ತು ಇದು ನಾನು ಕಾಯುತ್ತಿದ್ದ ಪಾತ್ರ ಎಂದು ನಾನು ಭಾವಿಸಿದೆ ಎಂದು ಸಂಗೀತ ಶೃಂಗೇರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com