ತೆರೆಯ ಮೇಲೆ ಬರಲಿದೆ 36 ಜನರನ್ನು ಬಲಿ ತೆಗೆದುಕೊಂಡ ಚಾಮರಾಜನಗರ ಆಕ್ಸಿಜನ್ ದುರಂತ!

2021ರ ಕೋವಿಡ್ ಎರಡನೇ ಅಲೆಯಲ್ಲಿ 36 ಜನರ ಸಾವಿಗೆ ಕಾರಣವಾದ ಚಾಮರಾಜನಗರ ಆಕ್ಸಿಜನ್ ದುರಂತ ಶೀಘ್ರವೇ ಸಿನಿಮಾವಾಗಿ ಬರಲಿದೆ.
ಲಾಕ್ ಡೌನ್ ಚಿತ್ರ ತಂಡ
ಲಾಕ್ ಡೌನ್ ಚಿತ್ರ ತಂಡ

ಮೈಸೂರು:  2021ರ ಕೋವಿಡ್ ಎರಡನೇ ಅಲೆಯಲ್ಲಿ 36 ಜನರ ಸಾವಿಗೆ ಕಾರಣವಾದ ಚಾಮರಾಜನಗರ ಆಕ್ಸಿಜನ್ ದುರಂತ ಶೀಘ್ರವೇ ಸಿನಿಮಾವಾಗಿ ಬರಲಿದೆ.

ಈ ದುರಂತವನ್ನು ಜೀವಂತವಾಗಿ ಬೆಳ್ಳಿತೆರೆ ಮೇಲೆ ತರಲು ಪ್ರಯತ್ನಿಸುತ್ತಿರುವ ಯುವ ನಿರ್ಮಾಪಕ ಅಜಯ್ ಕುಮಾರ್ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಸಂತ್ರಸ್ತರ ಕುಟುಂಬಗಳ ಸಂಕಟದ ಜೊತೆಗೆ ಸರ್ಕಾರ ಮತ್ತು ಅಧಿಕಾರಶಾಹಿಯ ಲೋಪದೋಷಗಳ ಮೇಲೆ ಚಿತ್ರ ಬೆಳಕು ಚೆಲ್ಲುವ ನಿರೀಕ್ಷೆಯಿದೆ.

ಈಗಾಗಲೇ ಚಾಮರಾಜನಗರ ಆಸ್ಪತ್ರೆಯಲ್ಲಿ ಶೇ.70ಕ್ಕೂ ಹೆಚ್ಚು ಚಿತ್ರೀಕರಣ ನಡೆಸಿರುವ ಚಿತ್ರತಂಡ ಸಂತ್ರಸ್ತರ ಕುಟುಂಬಗಳೊಂದಿಗೆ ಸಂವಾದ ನಡೆಸಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ನ ಒಂದು ಭಾಗವನ್ನು  ಈ ಕುಟುಂಬಗಳಿಗೆ ಸಹಾಯ ಹಸ್ತವಾಗಿ ನೀಡಲು ಚಿತ್ರತಂಡ  ನಿರ್ಧರಿಸಿದೆ.

ನಿರ್ದೇಶಕ ಅಜಯ್ ಕುಮಾರ್ ಚಿತ್ರಕ್ಕೆ ಲಾಕ್ ಡೌನ್ ಎಂಬ ಹೆಸರಿಟ್ಟಿದ್ದಾರೆ, "ರಾತ್ರಿ 9 ಗಂಟೆಗೆ ಆಸ್ಪತ್ರೆಯಲ್ಲಿದ್ದ ತನ್ನ ಪತಿ ವಿಡಿಯೋ ಕಾಲ್ ಮಾಡಿ ಆಕ್ಸಿಜನ್ ಪೂರೈಕೆ ಕಡಿಮೆಯಾಗುತ್ತಿರುವುದರಿಂದ ತನಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದರು. ಅವರು ಈ ವಿಷಯದ ಬಗ್ಗೆ ತನ್ನ ಜೊತೆ ಮಾತನಾಡುತ್ತಿರುವಾಗಲೇ ಆಸ್ಪತ್ರೆ ಸಿಬ್ಬಂದಿ ಅವರಿಂದ ಫೋನ್ ಕಸಿದುಕೊಂಡರು, ರೋಗಿಗಳು ಆಮ್ಲಜನಕ ಕೊರತೆಯ ವಿಷಯವನ್ನು ತಮ್ಮ ಕುಟುಂಬಸ್ಥರಿಗೆ ತಿಳಿಸಬಾರದು ಎಂಬ ಉದ್ದೇಶದಿಂದ ಫೋನ್ ಕಿತ್ತುಕೊಂಡಿದ್ದರು. ರಾಣಿ ತನ್ನ ಪತಿಯನ್ನು ಕಾಣಲು ಆಸ್ಪತ್ರೆಗೆ ತೆರಳಿದರು, ಆದರೆ ಬೆಳಗ್ಗೆ ಗಂಟೆ ವೇಳೆಗೆ ಆತ ಸಾವನ್ನಪ್ಪಿದ ಸುದ್ದಿ ತಿಳಿಯಿತು ಎಂದು ನರ್ಸ್ ರಾಣಿ ಎಂಬುವರು ನಡೆದ ಘಟನೆ ವಿವರಿಸಿದ್ದಾಗಿ ಅಜಯ್ ಕುಮಾರ್ ತಿಳಿಸಿದ್ದಾರೆ.

ಈ ದುರಂತದ ನಂತರ ಹಲವು ಕುಟುಂಬಗಳು ಛಿದ್ರವಾಗಿವೆ, ತಮ್ಮ ಕುಟುಂಬದ ಆಧಾರ ಸ್ಥಂಭಗಳನ್ನು ಕಳೆದುಕೊಂಡಿವೆ, ಹಾಗಾಗಿ ಚಿತ್ರದ ಲಾಭದ ಶೇ 30ರಷ್ಟನ್ನು 36 ಕುಟುಂಬಗಳಿಗೆ ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಲಾಕ್‌ಡೌನ್' ಪ್ರೋಮೋ ಈಗಾಗಲೇ ಎಲ್ಲರನ್ನೂ ಸೆಳೆಯುತ್ತಿದೆ. ಸಮಯಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಅಜಯ್ ಕುಮಾರ್ ಅವರು ಈ ಹಿಂದೆ ‘ಬೆಳಕಿನ ನಡೆಗೆ’ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದಾರೆ. "ನಾನು ದುರಂತವನ್ನು ವರದಿ ಮಾಡಿದ ಪತ್ರಕರ್ತರನ್ನು ಭೇಟಿ ಮಾಡಿ, ದುರಂತದ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಕಲೆ ಹಾಕಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com