ದಶಕದ ವಿರಾಮದ ನಂತರ ಮತ್ತೆ ನಟನೆಯತ್ತ ಸಂಗೀತ ನಿರ್ದೇಶಕ ಗುರುಕಿರಣ್!

ಖ್ಯಾತ ಸಂಗೀತ ಸಂಯೋಜಕ ಗುರುಕಿರಣ್ ಅವರು ನಟನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ, ವಿರಾಮದ ನಂತರ ಮತ್ತೆ ಕ್ಯಾಮೆರಾ ಎದುರಿಸಲು ಸಜ್ಜಾಗಿದ್ದಾರೆ. ವಿಷ್ಣುವರ್ಧನ್ ಅಭಿನಯದ ಏಕದಂತ (2007) ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಗುರುಕಿರಣ್

ಸದ್ಯ ಗುರುಕಿರಣ್ ಈಗ ಚೂ ಮಂತರ್‌ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ನಟ ಶರಣ್ ನಾಯಕರಾಗಿ ಅಭಿನಯಿಸಿದ್ದಾರೆ. ಗುರುಕಿರಣ್ ಅವರ ಪಾತ್ರವು ಚಿಕ್ಕದಾಗಿರಬಹುದು ಆದರೆ ಚೂ ಮಂತರ್‌ನಲ್ಲಿ ಮಹತ್ವದ ಪಾತ್ರವಾಗಿದೆ  ಎಂದು ನಿರ್ದೇಶಕ ನವನೀತ್ ಹೇಳಿದ್ದಾರೆ. ಛೂ ಮಂತರ್ ಹಾರರ್ ಸಿನಿಮಾವಾಗಿದ್ದು,  ಶರಣ್ ಒಬ್ಬ ಮಂತ್ರವಾದಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಚಿಕ್ಕಣ್ಣ, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಪ್ರಭು ಮುಂಡ್ಕೂರ್, ರಜಿನಿ ಭಾರದ್ವಾಜ್, ಧರ್ಮ ಮತ್ತು ಓಂ ಪ್ರಕಾಶ್ ರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ತರುಣ್ ಶಿವಪ್ಪ ನಿರ್ಮಾಣದ ಈ ಚಿತ್ರಕ್ಕೆ ಅವಿನಾಶ್ ಹಿನ್ನೆಲೆ ಸಂಗೀತ ನೀಡುತ್ತಿದ್ದು, ಎರಡು ಹಾಡುಗಳನ್ನು ರಾಪರ್ ಮತ್ತು ಗಾಯಕ ಚಂದನ್ ಶೆಟ್ಟಿ ಸಂಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com