ಹೆಚ್ಚೆಚ್ಚು ಸಂಖ್ಯೆ ಸಿನಿಮಾಗಳಲ್ಲಿ ನಟಿಸಲು ನನಗೆ ಆತುರವಿಲ್ಲ, ಗಮನಾರ್ಹ ಪಾತ್ರ ಮುಖ್ಯ: ಮಯೂರಿ ನಟರಾಜ್

ಚಿತ್ರದಲ್ಲಿ ಅವರ ಪಾತ್ರದ ಹೆಸರು ರಾಧೆ. ಚಿತ್ರತಂಡ ಮಯೂರಿ ಪಾತ್ರ ಪರಿಚಯಿಸುವ ಪೋಸ್ಟರ್‌ ಅನ್ನು ಬಿಡುಗಡೆಗೊಳಿಸಿದೆ. ಚಂದ್ರಜಿತ್ ಬೆಳ್ಳಿಯಪ್ಪ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.
ಮಯೂರಿ ನಟರಾಜ್
ಮಯೂರಿ ನಟರಾಜ್

ಇತ್ತೀಚೆಗಷ್ಟೇ ಬಿಡುಗಡೆಗೊಂಡ ಧನಂಜಯ್ ಅಭಿನಯದ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ‘ಭೂಮಿ’ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು ಮಯೂರಿ ನಟರಾಜ್. ಈಗ ನಟ ರಕ್ಷಿತ್‌ ಶೆಟ್ಟಿಯವರ ಪರಂವಾ ಸ್ಟುಡಿಯೋಸ್‌ ನಿರ್ಮಾಣದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಎರಡನೆಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಚಿತ್ರದಲ್ಲಿ ಅವರ ಪಾತ್ರದ ಹೆಸರು ರಾಧೆ. ಚಿತ್ರತಂಡ ಮಯೂರಿ ಪಾತ್ರ ಪರಿಚಯಿಸುವ ಪೋಸ್ಟರ್‌ ಅನ್ನು ಬಿಡುಗಡೆಗೊಳಿಸಿದೆ. ಚಂದ್ರಜಿತ್ ಬೆಳ್ಳಿಯಪ್ಪ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರವು ಇದೀಗ ಮುಕ್ತಾಯ ಹಂತದಲ್ಲಿದೆ.

ಈಗಾಗಲೇ ಮಯೂರಿ ನಟರಾಜ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ’ಎಂದು ಚಿತ್ರತಂಡ ಹೇಳಿದೆ.  ಚಿತ್ರದಲ್ಲಿ ರಾಧಾ ಪಾತ್ರದಲ್ಲಿ ನನ್ನ ಪಾತ್ರವು ಕಥಾವಸ್ತುವಿಗೆ ಆಸಕ್ತಿದಾಯಕ ತಿರುವನ್ನು ನೀಡುತ್ತದೆ. ನಾನು ನನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. "ಕಥೆಯಲ್ಲಿ ಮಹತ್ವ  ನೀಡುವ ಪಾತ್ರಗಳನ್ನು ನಾನು ಇಷ್ಟಪಡುತ್ತೇನೆ ಎಂದು ಬಯೋ ಟೆಕ್ನಾಲಜಿ ವಿದ್ಯಾರ್ಥಿನಿಯಾಗಿರುವ ಮಯೂರಿ ಹೇಳುತ್ತಾಳೆ, ಚಲನಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದಾಗ ಕೆಲಸಕ್ಕೆ ವಿರಾಮ ಹೇಳಿದ್ದಾರೆ.

9ರಿಂದ 5 ಗಂಟೆವರೆಗೆ ಕಚೇರಿಯಲ್ಲಿ ಕುಳಿತು ಮಾಡುವ ಕೆಲಸವನ್ನು ಎಂಜಾಯ್ ಮಾಡಿದ್ದೇನೆ, ಈಗ ಕ್ಯಾಮೆರಾ ಮುಂದೆ ನಟಿಸುವುದನ್ನು ಎಂಜಾಯ್ ಮಾಡುತ್ತಿದ್ದೇನೆ, ಹೆಚ್ಚಿನ ಸಿನಿಮಾಗಳಲ್ಲಿ ನಟಿಸಬೇಕೆಂಬ ಆತುರ ನನಗಿಲ್ಲ, ಆದರೆ ಗುಣಮಟ್ಟದ ಕಥೆಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಆಸಕ್ತಿಯಿದೆ ಎಂದಿದ್ದಾರೆ.

ಮಯೂರಿ ಇದಕ್ಕೂ ಮೊದಲು ‘ಮ್ಯಾನ್ ಆಫ್ ದಿ ಮ್ಯಾಚ್’, ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರಗಳಲ್ಲಿ ನಟಿಸಿದ್ದರು. ‘ಇಬ್ಬನಿ ತಬ್ಬಿದ ಇಳೆಯಲಿ’ ಮೂರು ವಿಭಿನ್ನ ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿದೆ. ವಿಹಾನ್ ಮತ್ತು ಅಂಕಿತಾ ಅಮರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಮತ್ತು ಶ್ರೀವತ್ಸನ್ ಸೆಲ್ವರಾಜನ್ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com