ಆ್ಯಕ್ಷನ್ ಸಿನಿಮಾಗಾಗಿ ಜೊತೆಯಾಗುತ್ತಿದ್ದಾರೆ ಲವ್ಲಿ ಸ್ಟಾರ್ ಪ್ರೇಮ್ ಮತ್ತು ನಿರ್ದೇಶಕ ಕೀರ್ತಿ!

ಪ್ರೇಮ ಪೂಜ್ಯಂ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪ್ರೇಮ್, ಅಥರ್ವ್ ಆರ್ಯ ಅವರ ಕೌಟುಂಬಿಕ ಸಿನಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.
ಪ್ರೇಮ್ ಮತ್ತು ಕೀರ್ತಿ
ಪ್ರೇಮ್ ಮತ್ತು ಕೀರ್ತಿ

ಪ್ರೇಮ ಪೂಜ್ಯಂ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪ್ರೇಮ್, ಅಥರ್ವ್ ಆರ್ಯ ಅವರ ಕೌಟುಂಬಿಕ ಸಿನಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.

ಸದ್ಯ ನಟ ಪ್ರೇಮ್ ಮುಂದಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ. ವಿನಯ್ ರಾಜ್‌ಕುಮಾರ್ ಮತ್ತು ಅದಿತಿ ಪ್ರಭುದೇವ ಅಭಿನಯದ ಇನ್ನೂ ಬಿಡುಗಡೆಯಾಗಬೇಕಿರುವ ಅಂದೊಂಡಿತ್ತು ಕಾಲ ನಂತರ ನಿರ್ದೇಶಕ ಕೀರ್ತಿ ಅವರ ಎರಡನೇ ವರ್ಷದ ಪ್ರಾಜೆಕ್ಟ್ ನಲ್ಲಿ ಪ್ರೇಮ್ ನಟಿಸಲಿದ್ದಾರೆ

ಇಂದು ಪ್ರೇಮ್ ಹುಟ್ಟುಹಬ್ಬವಿದ್ದು ಅಧಿಕೃತ ಘೋಷಣೆ ಮಾಡಲಾಗುವುದು.  ಕನ್ನಡದಲ್ಲಿ 'ಲವ್ಲಿ ಸ್ಟಾರ್' ಎಂದು ಕರೆಯಲ್ಪಡುವ ಪ್ರೇಮ್, ನಿರ್ದೇಶಕ ಕೀರ್ತಿ ಅವರ ಔಟ್-ಅಂಡ್-ಔಟ್ ಆಕ್ಷನ್‌ನಲ್ಲಿ ಮಾಸ್ ಹೀರೋ ಆಗಿ ನಟಿಸಲು ಸಿದ್ಧರಾಗಿದ್ದಾರೆ.

ಶರಣ್ ಅಲಮೇಲ್ ಬರೆದಿರುವ ಈ ಚಿತ್ರಕ್ಕೆ ಸಂತೋಷ್ ಮುಂದಿನಮನೆ ಸಂಭಾಷಣೆ ಬರೆಯಲಿದ್ದಾರೆ.

ಚಿತ್ರದಲ್ಲಿ ಇಬ್ಬರು ನಾಯಕರಿದ್ದು ,  ಮತ್ತೊಬ್ಬ ನಟನಿಗಾಗಿ ನಿರ್ದೇಶಕರು  ಹುಡುಕಾಟದಲ್ಲಿದ್ದಾರೆ. ಮಧುಚಂದ್ರ ಅವರ ಗೌತಮ್ ಸಿನಿಮಾಸ್ ಬೆಂಬಲದೊಂದಿಗೆ, ಚಿತ್ರವು ಜೂನ್‌ನಲ್ಲಿ ತೆರೆಗೆ ಬರಲಿದ್ದು, ಬಹುತೇಕ ಉತ್ತರಕರ್ನಾಟಕದಲ್ಲಿ ಚಿತ್ರೀಕರಣ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com