'ಮಚ್ ಲಕ್ಷ್ಮಿ' ಬರ್ತ್ತಿದ್ದಾಳೆ ದಾರಿ ಬಿಡಿ: 'ಕೆಡಿ' ಧ್ರುವ ಸರ್ಜಾಗೆ ರೀಷ್ಮಾ ನಾಣಯ್ಯ ನಾಯಕಿ!

ಧ್ರುವ ಸರ್ಜಾ ನಟಿಸುತ್ತಿರುವ, ಪ್ರೇಮ್ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’. 1970ರ ದಶಕದ ಅಂಡರ್​ವರ್ಲ್ಡ್ ಸುತ್ತ ಚಿತ್ರದ ಕಥೆ ಸುತ್ತಲಿದೆ. ಕೆವಿಎನ್ ಪ್ರೊಡಕ್ಷನ್‌ ನಿರ್ಮಾಣದ ಈ ಚಿತ್ರದಲ್ಲಿ ರೀಷ್ಮಾ ಮಚ್ ಲಕ್ಷ್ಮಿ ಪಾತ್ರ ನಿರ್ವಹಿಸಲಿದ್ದಾರೆ.
ಕೆ ಡಿ ಸಿನಿಮಾ ಸ್ಟಿಲ್
ಕೆ ಡಿ ಸಿನಿಮಾ ಸ್ಟಿಲ್
Updated on

ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆಗೆ ರೀಷ್ಮಾ ನಾಣಯ್ಯ ನಟಿಸಲಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ರೀಷ್ಮಾ ಹುಟ್ಟುಹಬ್ಬದಂದು ಕೆಡಿ ಸಿನಿಮಾದ ರೀಷ್ಮಾ ಫಸ್ಟ್ ಲುಕ್ ರಿಲೀಸ್ ಮಾಡುವ ಜೊತೆಗೆ ರೀಷ್ಮಾ ಎಂಟ್ರಿ ಬಗ್ಗೆ ನಿರ್ದೇಶಕರು ಖಚಿತ ಪಡಿಸಿದ್ದಾರೆ.

ಧ್ರುವ ಸರ್ಜಾ ನಟಿಸುತ್ತಿರುವ, ಪ್ರೇಮ್ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’. 1970ರ ದಶಕದ ಅಂಡರ್​ವರ್ಲ್ಡ್ ಸುತ್ತ ಚಿತ್ರದ ಕಥೆ ಸುತ್ತಲಿದೆ. ಕೆವಿಎನ್ ಪ್ರೊಡಕ್ಷನ್‌ ನಿರ್ಮಾಣದ ಈ ಚಿತ್ರದಲ್ಲಿ ರೀಷ್ಮಾ  ಮಚ್ ಲಕ್ಷ್ಮಿ ಪಾತ್ರ ನಿರ್ವಹಿಸಲಿದ್ದಾರೆ.

ಏಕ್ ಲವ್ ಯಾ ಸಿನಿಮಾ ನಂತರ ನಿರ್ದೇಶಕ ಪ್ರೇಮ್ ಜೊತೆ ರೀಷ್ಮಾ ಎರಡನೇ ಬಾರಿ ಕೆಲಸ ಮಾಡುತ್ತಿದ್ದಾರೆ. ಪೋಸ್ಟರ್ ನೋಡಿದವರು ಇದೊಂದು ಯೂನಿಕ್ ಮತ್ತು ಮಾಸ್ ಸಿನಿಮಾ ಎಂದು ಹೇಳುತ್ತಿದ್ದಾರೆ. ಇದು ನನ್ನ ನಟನಾ ಕೌಶಲ್ಯಕ್ಕೆ ಸವಾಲಿನ ಪಾತ್ರವಾಗಿದೆ, ಪಾತ್ರದ ಬಗ್ಗೆ ನಾನು ಹೆಚ್ಚು ಹೇಳಲು ಸಾಧ್ಯವಿಲ್ಲವಾದರೂ, ಇದು ಇಲ್ಲಿಯವರೆಗಿನ ನನ್ನ ಅತ್ಯಂತ ಕಷ್ಟಕರವಾದ ಪಾತ್ರಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ರೀಷ್ಮಾ ತಿಳಿಸಿದ್ದಾರೆ.

ಈಗಾಗಲೇ ಅವರ ಪಾಲಿನ ಚಿತ್ರೀಕರಣ ಪ್ರಾರಂಭವಾಗಿದ್ದು, 15 ದಿನಗಳ ಶೂಟಿಂಗ್ ಮುಗಿಸಿದ್ದಾರೆ, ಹಲವಾರು ಸ್ಕ್ರೀನ್ ಟೆಸ್ಟ್‌ಗಳು ಇದ್ದವು ಹೀಗಾಗಿ ಸೆಟ್ ಗೆ ಬಂದ ನಂತರವೇ ನಾನು ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂಬುದು ಖಚಿತವಾಯಿತು ಎಂದು ರೀಷ್ಮಾ ತಿಳಿಸಿದ್ದಾರೆ, ತನ್ನ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಉತ್ತಮ ಪಾತ್ರಗ ಪಡೆದಿದ್ದಕ್ಕಾಗಿ ರೀಷ್ಮಾ ಕೃತಜ್ಞತೆ ಸಲ್ಲಿಸಿದ್ದಾರೆ. ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಲು ಪಾತ್ರ ಸಹಾಯ ಮಾಡಲಿದೆ ಎಂದು ಪ್ರೇಮ್ ಸರ್ ಹೇಳಿದ್ದಾರೆ ಎಂದು ರೀಷ್ಮಾ ತಿಳಿಸಿದ್ದಾರೆ

ಕೆಡಿ ಅಲಿಯಾಸ್ ಕಾಳಿದಾಸನಾಗಿ ಧ್ರುವ ಸರ್ಜಾ, ಅಣ್ಣಯ್ಯಪ್ಪ ಪಾತ್ರದಲ್ಲಿ ರವಿಚಂದ್ರನ್, ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಹಾಗೂ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಅಧೀರ ಖ್ಯಾತಿಯ ಬಾಲಿವುಡ್ ನಟ ಸಂಜಯ್ ದತ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಚಿತ್ರದ ತಾರಾಗಣವೇ ಕುತೂಹಲ ಮೂಡಿಸುವಂತಿದೆ. ಅದರ ಬೆನ್ನಲ್ಲೇ ಇದೀಗ ನಾಯಕಿಯ ಎಂಟ್ರಿಯಾಗಿದೆ.

ಒಂದು ತಿಂಗಳ ಕಾಲ ವರ್ಕ್​ಶಾಪ್ ಮಾಡಿದ್ದೇನೆ. ಲುಕ್ ಫಿಕ್ಸ್ ಆಗೋಕೇ ತುಂಬ ಬದಲಾವಣೆಗಳನ್ನು ಮಾಡಬೇಕಾಯಿತು. ಇದುವರೆಗೂ ಮಾಡಿರದ ವಿಭಿನ್ನ ಪಾತ್ರ. ಒಬ್ಬ ಕಲಾವಿದೆಯಾಗಿ ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಲು ಈ ಸಿನಿಮಾ, ಪಾತ್ರ ಒಂದೊಳ್ಳೆ ಅವಕಾಶ’ ಎಂದು ಹೇಳಿಕೊಳ್ಳುತ್ತಾರೆ ರೀಷ್ಮಾ.

‘ಕೆಡಿ’ ಜತೆ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘ಯುಐ’, ಗಣೇಶ್ ನಾಯಕನಾಗಿರುವ, ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ‘ಬಾನದಾರಿಯಲ್ಲಿ’ ಹಾಗೂ ಧನ್​ವೀರ್ ಗೌಡಗೆ ನಾಯಕಿಯಾಗಿ ‘ವಾಮನ’ ಚಿತ್ರಗಳಲ್ಲಿ ರೀಷ್ಮಾ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com