ಹಿರಿಯ ನಿರ್ದೇಶಕ ಎಸ್ ನಾರಾಯಣ್ ಮುಂದಿನ ಚಿತ್ರಕ್ಕೆ ಶ್ರೇಯಸ್ ಮಂಜು  ಹೀರೋ!

ಆದಿತ್ಯ ಅಭಿನಯದ 5G ಸಿನಿಮಾ ಚಿತ್ರೀಕರಣ ಮುಗಿಸಿರುವ ಹಿರಿಯ ಚಲನಚಿತ್ರ ನಿರ್ದೇಶಕ ಎಸ್ ನಾರಾಯಣ್, ಇದೇ ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ.
ಎಸ್ ನಾರಾಯಣ್ ಮತ್ತು ಶ್ರೇಯಸ್ ಮಂಜು
ಎಸ್ ನಾರಾಯಣ್ ಮತ್ತು ಶ್ರೇಯಸ್ ಮಂಜು
Updated on

ಆದಿತ್ಯ ಅಭಿನಯದ 5G ಸಿನಿಮಾ ಚಿತ್ರೀಕರಣ ಮುಗಿಸಿರುವ ಹಿರಿಯ ಚಲನಚಿತ್ರ ನಿರ್ದೇಶಕ ಎಸ್ ನಾರಾಯಣ್, ಇದೇ ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ.

ಕರ್ನಾಟಕ ಚುನಾವಣೆಯ ಕಾರಣದಿಂದ ತಾತ್ಕಾಲಿಕವಾಗಿ ತಮ್ಮ ಕೆಲಸಕ್ಕೆ ವಿರಾಮ ನೀಡಿದ್ದ ನಿರ್ದೇಶಕರು ಹೊಸ ಪ್ರಾಜೆಕ್ಟ್ ನೊಂದಿಗೆ ಮರಳಿದ್ದಾರೆ. ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಎಸ್ ನಾರಾಯಣ್ ಜೊತೆ ಶ್ರೇಯಸ್ ಮಂಜು ಸಿನಿಮಾ ಮಾಡುತ್ತಿದ್ದಾರೆ. ಈ ಸಂಬಂಧ ಎಸ್ ನಾರಾಯಣ್ ಸಿನಿಮಾ ಎಕ್ಸ್ ಪ್ರೆಸ್ ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಸಿನಿಮಾ ಸಂಬಂಧ ಆರಂಬಿಕ ಚರ್ಚೆಗಳು ನಡೆದಿವೆ ಎಂದು ತಿಳಿಸಿದ್ದಾರೆ.

ಸಮಕಾಲೀನ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾದ ಕಂಟೆಂಟ್‌ನೊಂದಿಗೆ ಚಿತ್ರವು ಕಮರ್ಷಿಯಲ್ ಎಂಟರ್‌ಟೈನರ್ ಆಗಿ ಮೂಡಿಬರಲಿದೆ ಎಂದು ನಾರಾಯಣ್ ಹೇಳಿದ್ದಾರೆ.  ಪೋಷಕರು ಮತ್ತು ಮಕ್ಕಳಿಬ್ಬರಿಗೂ ಸಮಾನವಾದ ಕಥೆ ಇದೆ. ಚಲನಚಿತ್ರ ನಿರ್ದೇಶಕರು ಪ್ರಾಜೆಕ್ಟ್ ನ ಪಾತ್ರವರ್ಗ ಮತ್ತು ಸಿಬ್ಬಂದಿ ಬಗ್ಗೆ  ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

ಶ್ರೇಯಸ್ ಮಂಜು ವಿ ಕೆ ಪ್ರಕಾಶ್ ಅವರ ನಿರ್ದೇಶನದ ವಿಷ್ಣುಪ್ರಿಯಾ ರೊಮ್ಯಾಂಟಿಕ್ ಸಿನಿಮಾ ಡ್ರಾಮಾ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ವಿಷ್ಣುಪ್ರಿಯಾ, ಸಿನಿಮಾವನ್ನು ಕೆ ಮಂಜು ನಿರ್ಮಿಸಿದ್ದಾರೆ.

ಗೋಪಿ ಸುಂದರ್ ಸಂಗೀತ ಸಂಯೋಜನೆಯಿದೆ, ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದೇ ವೇಳೆ ಶ್ರೇಯಸ್, ಮಧು ಗೌಡ ಗಂಗೂರ್ ನಿರ್ದೇಶನದ ಚೊಚ್ಚಲ ನಿರ್ದೇಶನದ ದಿಲ್ದಾರ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ . ಈ ಸಿನಿಮಾದಲ್ಲಿ ಪ್ರಿಯಾಂಕಾ ಕುಮಾರ್ ಕೂಡ ನಟಿಸಿದ್ದಾರೆ.

ಹೆಚ್ಚುವರಿಯಾಗಿ, ಶ್ರೇಯಸ್ ಮತ್ತೊಂದು ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದಾರೆ, ಇದನ್ನು ಚೆನ್ನೈ ಮೂಲದ ನಾಗ ಬರೆದಿದ್ದಾರೆ ಮತ್ತು ಇದು ರೊಮ್ಯಾಂಟಿಕ್ ಚಿತ್ರ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯ ನಿರ್ದೇಶಕರು ಇನ್ನೂ ಅಂತಿಮಗೊಂಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com