ಮಹತ್ವದ ತಿರುವಿಗಾಗಿ ಕಾಯುತ್ತಿದ್ದೇನೆ; ಸಂಗೀತ ಸಂಯೋಜನೆಯಿಂದ ನಟನೆಯತ್ತ ಹೊರಳಿದ ಋತ್ವಿಕ್ ಮುರಳೀಧರ್ 

ಬಾಲ್ಯದಲ್ಲೇ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಋತ್ವಿಕ್ ಮುರಳೀಧರ್, ಸಂಗೀತ ಸಂಯೋಜನೆ, ಶಾರ್ಟ್ ಫಿಲ್ಮ್ ಸೇರಿದಂತೆ ಹಲವು ವಿಭಾಗಳಲ್ಲಿ ಕೆಲಸ ಮಾಡಿ ಈಗ ನಟನೆಯತ್ತ ಹೊರಳಿದ್ದಾರೆ.
ಋತ್ವಿಕ್ ಮುರಳೀಧರ್
ಋತ್ವಿಕ್ ಮುರಳೀಧರ್

ಬಾಲ್ಯದಲ್ಲೇ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಋತ್ವಿಕ್ ಮುರಳೀಧರ್, ಸಂಗೀತ ಸಂಯೋಜನೆ, ಶಾರ್ಟ್ ಫಿಲ್ಮ್ ಸೇರಿದಂತೆ ಹಲವು ವಿಭಾಗಳಲ್ಲಿ ಕೆಲಸ ಮಾಡಿ ಈಗ ನಟನೆಯತ್ತ ಹೊರಳಿದ್ದಾರೆ.

ಸಿನಿಮಾ ಸಂಗೀತದಲ್ಲಿ ಋತ್ವಿಕ್ ಪಯಣ ಆರಂಭವಾಗಿದ್ದು ಸಂಕಷ್ಟಕರ ಗಣಪತಿ ಚಿತ್ರದ ಮೂಲಕ. ಇದಾದ 5 ವರ್ಷಗಳಲ್ಲಿ ಅವರು 8 ಯೋಜನೆಗಳಲ್ಲಿ ಕೆಲಸ ಮಾಡಿದ್ದು, ಅವು ಪ್ರೊಡಕ್ಷನ್ ನ ಹಲವು ಹಂತಗಳಲ್ಲಿವೆ. ಹಲವಾರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿರುವ ಋತ್ವಿಕ್ ಅವರ ಪ್ರತಿಭೆಗೆ ಮನ್ನಣೆ, ಪ್ರಶಂಸೆ ವ್ಯಕ್ತವಾಗುತ್ತಿದೆ.
 
ತಾವು ನಡೆದುಬಂದ ಹಾದಿಯ ಬಗ್ಗೆ ಮಾತನಾಡಿರುವ ಋತ್ವಿಕ್, ನಾನು ಕೆಲಸ ಮಾಡಿದ್ದ ಸಿನಿಮಾಗಳು ಬಿಡುಗಡೆಯಾದಾಗ ಸಂಗೀತ ವಿಭಾಗದ ವಿಮರ್ಶೆಗಳು ಸಕಾರಾತ್ಮಕವಾಗಿತ್ತು. ಸಿನಿಮಾಗಳು ಸಂಪೂರ್ಣವಾಗಿ ನಿರೀಕ್ಷೆಗೆ ತಕ್ಕಂತೆ ಇಲ್ಲದೇ ಇದ್ದರೂ, ನನ್ನ ಕೆಲಸಗಳಿಗೆ ಪ್ರಶಂಸೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಈ ದೃಷ್ಟಿಯಿಂದ ನಾನು ಈಗಲೂ ಮಹತ್ವದ ತಿರುವಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. 

ಈಗ ಶ್ರೀ ಗಣೇಶ್ ಪರಶುರಾಮ್ ಅವರ ಬ್ಯಾಂಗ್ ಸಿನಿಮಾದಲ್ಲಿ ತಮ್ಮ ಸಂಗೀತ ಅನುಭವವನ್ನು ಹಂಚಿಕೊಂಡಿರುವ ಋತ್ವಿಕ್, ನಾನು ಹಿನ್ನೆಲೆ ಸಂಗೀತ ಹಾಗೂ ಹಾಡು ಎರಡನ್ನೂ ಸಂಯೋಜಿಸಿರುವ ಮೂರು ಸಿನಿಮಾಗಳ ಪೈಕಿ ಇದೂ ಒಂದಾಗಿದ್ದು, ಪ್ರಯೋಗಗಳಿಗೆ ಈ ಸಿನಿಮಾದಲ್ಲಿ ಸ್ವಾತಂತ್ರ್ಯ ದೊರೆತಿದೆ. ಈ ಸಿನಿಮಾ ಮೂಲಕ ನಾನು ಹೊಸ ಉಪಕರಣಗಳನ್ನು ಹಾಗೂ ನಾವಿನ್ಯತೆಯನ್ನು ಕಲಿಯಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. 

ಗಾಯಕರಾಗಿ ಹಲವು ಸವಾಲುಗಳನ್ನು ಎದುರಿಸಿದ್ದ ಋತ್ವಿಕ್, ಬಳಿಕ ಸಂಗೀತ ನಿರ್ದೇಶನದತ್ತ ಗಮನಹರಿಸಿ ಯಶಸ್ಸು ಕಂಡರು. ಈಗ ಬಾಂಗ್ ಮೂಲಕ ನಟನಾಗಿಯೂ ಚಿತ್ರರಂಗ ಪ್ರವೇಶಿಸಿದ್ದಾರೆ. 

ಚಿತ್ರದಲ್ಲಿ ಋತ್ವಿಕ್ ಆರವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಮತ್ತು ಆಕ್ಷನ್ ಚಿತ್ರ ಇದಾಗಿದೆ.

ನಟನೆಗೆ ಪ್ರವೇಶಿಸಲು ತಮಗೆ ಸ್ಪೂರ್ತಿಯಾದ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಋತ್ವಿಕ್, ಪುನೀತ್ ರಾಜ್ ಕುಮಾರ್ ಅವರ ಅಪ್ಪು ಸಿನಿಮಾ ನೋಡುತ್ತಿದ್ದಾಗ ನಟನಾಗಬೇಕೆಂಬ ಕನಸು ಮೂಡಿದ್ದಾಗಿ ಹೇಳಿದ್ದಾರೆ. ಆದರೆ ಅದನ್ನು ಎಲ್ಲಿಯೂ ಹೇಳುಕೊಂಡಿರಲಿಲ್ಲ. ಆದರೆ ಬ್ಯಾಂಗ್ ಅದಕ್ಕೊಂದು ಸೂಕ್ತ ಬುನಾದಿ ಆಯಿತು ಎಂದು ಹೇಳುವ ಋತ್ವಿಕ್, ನಿರ್ದೇಶಕ ಗಣೇಶ್ ಹೊಸ ಕಲಾವಿದರಿಗಾಗಿ ಹುಡುಕುತ್ತಿದ್ದರು ನನ್ನಲ್ಲಿ ನಟನನ್ನು ಕಂಡು ಎಲ್ಲವೂ ಸೂಕ್ತವಾದ ಹಿನ್ನೆಲೆಯಲ್ಲಿ ನಟನೆಯ ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com