ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗದಲ್ಲಿ 26 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸ್ಪೆಷಲ್ ಸಿಡಿಪಿ ಟ್ರೆಂಡ್ ಮಾಡಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದರು. ಇದೇ ಸಂಭ್ರಮದಲ್ಲಿ ಸೂಪರ್ ಹಿಟ್ 'ಮೆಜೆಸ್ಟಿಕ್' ಚಿತ್ರವನ್ನು ಅಭಿಮಾನಿಗಳು ರೀ-ರಿಲೀಸ್ ಮಾಡಿ ಖುಷಿಪಟ್ಟಿದ್ದಾರೆ.
ಇದರ ಮದ್ಯೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಹೆಜ್ಜೆ ಹಾಕಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ದರ್ಶನ್- ವಿಜಯಲಕ್ಷ್ಮಿ ದಂಪತಿ ಡ್ಯಾನ್ಸ್ ಮಾಡಿದ್ದಾರೆ.
'ಆಶಿಕಿ- 2' ಚಿತ್ರದ 'ಹಮ್ ತೇರೆ ಬಿನ್ ಅಬ್ ರೆಹ್ ನಹೀ ಸಕ್ತೆ' ಹಾಡಿಗೆ ರೊಮ್ಯಾಂಟಿಕ್ ಮೂಡ್‌ನಲ್ಲಿ ದರ್ಶನ್- ವಿಜಯಲಕ್ಷ್ಮಿ ಸಿಂಪಲ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಸುತ್ತ ಇದ್ದವರು ಚಪ್ಪಾಳೆ ತಟ್ಟಿ ಚಿಯರ್ ಅಪ್ ಮಾಡಿದ್ದಾರೆ. ದರ್ಶನ್ ಅಂತೂ ಬ್ಲ್ಯಾಕ್ ಟೀ-ಶರ್ಟ್ ಹಾಗೂ ಬ್ಲೂ ಡೆನಿಮ್‌ನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಸದ್ಯ ಈ ಸಣ್ಣ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
Advertisement