
ಹಾಸ್ಯ ನಟ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಉಪಾಧ್ಯಕ್ಷ, ಸಿನಿಮಾವನ್ನು ಡಿಸೆಂಬರ್ ಬಿಡುಗಡೆಗೆ ಯೋಜಿಸಲಾಗಿತ್ತು, ಆದರೆ ಈಗ ಪ್ಲಾನ್ ಬದಲಾಗಿದ್ದು ಗಣರಾಜ್ಯೋತ್ಸವದ ಅದ್ಧೂರಿ ಬಿಡುಗಡೆಗೆ ನಿಗದಿಪಡಿಸಲಾಗಿದೆ.
ಜನವರಿ 26 ರಂದು ಥಿಯೇಟರ್‌ಗೆ ಬರಲಿರುವ ಈ ಚಿತ್ರವು ಚಿಕ್ಕಣ್ಣನಿಗೆ ಭಾರೀ ಮಹತ್ವದ್ದಾಗಿದೆ. 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಿದ್ದ ಚಿಕ್ಕಣ್ಣ, ಉಪಾಧ್ಯಕ್ಷ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಬದಲಾಗುತ್ತಿದ್ದಾರೆ.
ಅನಿಲ್ ಕುಮಾರ್ ನಿರ್ದೇಶನದ, ಉಪಾಧ್ಯಕ್ಷ ಸಿನಿಮಾವನ್ನು ಉಮಾಪತಿ ಫಿಲ್ಮ್ಸ್ ಮತ್ತು ಡಿಎನ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಚಿಕ್ಕಣ್ಣ ಅವರಲ್ಲದೆ, ಮಲೈಕಾ ವಸುಪಾಲ್, ರವಿಶಂಕರ್, ಸಾಧು ಕೋಕಿಲಾ ಮತ್ತು ವೀಣಾ ಸುಂದರ್ ಸಹ ನಟಿಸಿದ್ದಾರೆ. ಉಪಾಧ್ಯಕ್ಷ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದರೆ, ಶೇಖರ್ ಚಂದ್ರ ಛಾಯಾಗ್ರಹಣವಿದೆ.
Advertisement