ಯಶ್ ನಟನೆಯ 'ಟಾಕ್ಸಿಕ್'ಗೆ ಯೂನಿವರ್ಸಲ್ ಸ್ಕ್ರಿಪ್ಟ್‌, ಗ್ಲೋಬಲ್ ಸಿನಿಮಾವಾಗಿ ರಿಲೀಸ್!

ಅಂತೂ ನಟ ಯಶ್ ಅವರ 19 ನೇ ಚಿತ್ರ ಘೋಷಣೆಯಾಗಿದೆ. ಟಾಕ್ಸಿಕ್ (TOXIC) ಎಂದು ಹೆಸರಿಡಲಾಗಿರುವ ಈ ಚಿತ್ರವನ್ನು ಮಲಯಾಳಂನ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ. ಇದೊಂದು ಜಾಗತಿಕ ಸಿನಿಮಾವಾಗಲಿದೆ ಎಂದು ಹೇಳಲಾಗುತ್ತಿದೆ.
ಯಶ್
ಯಶ್

ಬೆಂಗಳೂರು: ಅಂತೂ ನಟ ಯಶ್ ಅವರ 19 ನೇ ಚಿತ್ರ ಘೋಷಣೆಯಾಗಿದೆ. ಟಾಕ್ಸಿಕ್ (TOXIC) ಎಂದು ಹೆಸರಿಡಲಾಗಿರುವ ಈ ಚಿತ್ರವನ್ನು ಮಲಯಾಳಂನ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ. ಇದೊಂದು ಜಾಗತಿಕ ಸಿನಿಮಾವಾಗಲಿದೆ ಎಂದು ಹೇಳಲಾಗುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಗೆ ಯಶ್ 19 ರ ಶೀರ್ಷಿಕೆಯನ್ನು 'ಟಾಕ್ಸಿಕ್ - ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಎಂದು ಅನಾವರಣಗೊಳಿಸಲಾಗಿದೆ. ಯಶ್ ಹುಟ್ಟುಹಬ್ಬದಂದು ಶೀರ್ಷಿಕೆ ಟೀಸರ್ ಅನಾವರಣಗೊಳಿಸಲಾಗಿದೆ.

ನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತಿದೆ ಎಂಬ ರೂಮಿ ವಾಕ್ಯದ ಉಲ್ಲೇಖ ಮಾಡಲಾಗಿದೆ.  ಹಂಟಿಂಗ್ ಬಿಜಿಎಂ, ರ್ಯಾಪ್ ವಾಯ್ಸ್, ಗ್ರಾಫಿಕ್ಸ್ ವಿಷ್ಯುವಲ್ಸ್ ಜೊತೆಗೆ 1 ನಿಮಿಷ 18 ಸೆಕೆಂಡ್‌ಗಳ ಟೀಸರ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ. ಬರೀ ಟೈಟಲ್ ಅನೌನ್ಸ್‌ಮೆಂಟ್ ಟೀಸರ್‌ ಈ ರೀತಿ ಇದ್ದರೆ 'ಟಾಕ್ಸಿಕ್' ಸಿನಿಮಾ ಕ್ವಾಲಿಟಿ ಯಾವ ರೀತಿ ಇರುತ್ತೆ ಎಂದು ಊಹಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗುತ್ತಿದೆ. ಈ ಸಣ್ಣ ಝಲಕ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ಕೌಬಾಯ್ ಗೆಟಪ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ, ಇದೊಂದು ಅಂತರರಾಷ್ಟ್ರೀಯ ಗ್ಯಾಂಗ್‌ಸ್ಟರ್ ಥ್ರಿಲ್ಲರ್ ಎಂದು  ತೋರುತ್ತಿದೆ ಎಂದು ಹೇಳಲಾಗುತ್ತಿದೆ. TOXIC ಸಿನಿಮಾ ಏಪ್ರಿಲ್ 10, 2025 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

KGF ಚಾಪ್ಟರ್ 2 ಬಿಡುಗಡೆಯಾದ ಮೂರು ವರ್ಷಗಳ ನಂತರ ನಿಖರವಾಗಿ ಈ ಸಿನಿಮಾ ಬಿಡುಗಡೆಯಾಗಲಿದೆ. ವಿಶೇಷವಾಗಿ ರಜಾದಿನದ ಪ್ರಾರಂಭ ಏಪ್ರಿಲ್ 10 ರಿಂದ ಏಪ್ರಿಲ್ ರ ವರೆಗೂ ರಜಾದಿನಗಳಿವೆ, ಏಪ್ರಿಲ್ 14 ರಂದು ವಿಷು, ಮತ್ತು ಈಸ್ಟರ್ ವಾರಾಂತ್ಯವು ಏಪ್ರಿಲ್ 17 ಮತ್ತು 18 ರ ರಜಾದಿನಗಳಾಗಿರುತ್ತವೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

ಟಾಕ್ಸಿಕ್, ವಿಶಾಲವಾದ ಕ್ಯಾನ್ವಾಸ್ ಮತ್ತು ಗಮನಾರ್ಹ ಬಜೆಟ್‌ಗಳ ಭರವಸೆ ನೀಡಿದೆ, ಗ್ಲೋಬಲ್ ಸಿನಿಮಾವಾಗಿ ಬಿಡುಗಡೆಗೆ ಅಣಿಯಾಗಿದೆ ಎಂದು ಹೇಳಲಾಗುತ್ತದೆ. ಯಶ್, ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್‌ನ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರು ಟಾಕ್ಸಿಕ್‌ಗಾಗಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದ್ದಾರೆ.

ಪ್ಯಾನ್-ಇಂಡಿಯಾ ಚಲನಚಿತ್ರದ ಜೊತೆಗೆ ಈ ಸಿನಿಮಾ ಮತ್ತಷ್ಟು ವ್ಯಾಪಕವಾಗಿ ವಿಸ್ತಾರಿಸಲಿದೆ. ಇದೊಂದು ಯೂನಿವರ್ಸಲ್ ಸ್ಕ್ರಿಪ್ಟ್‌ನಿಂದಾಗಿ ವಿಶ್ವದಾದ್ಯಂತ ಹಲವಾರು ಭಾಷೆಗಳಲ್ಲಿ ಗ್ಲೋಬಲ್ ರಿಲೀಸ್ ಆಗಲಿದೆ. ಆದರೆ ಈ ಸಂಬಂಧ ಕ್ರಮೇಣವಾಗಿ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಜನವರಿಯಿಂದಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು 2025ರ ಏಪ್ರಿಲ್ 10ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ಯಶ್ ಅಭಿಮಾನಿಗಳಂತೂ ಚಾತಕ ಪಕ್ಷಿಗಳಂತೆ ಚಿತ್ರಕ್ಕಾಗಿ ಕಾಯುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com