'ಭಾಗ್ಯಲಕ್ಷ್ಮಿ' ಸೀರಿಯಲ್ ಗಾಗಿ ಹಲವು ವರ್ಷಗಳ ನಂತರ ಗೆಜ್ಜೆ ಕಟ್ಟಿದ ಸುಷ್ಮಾ ರಾವ್: ಮನಸೂರೆಗೊಂಡ 'ಭಾಗ್ಯ' ಭರತನಾಟ್ಯ!

ಸುಷ್ಮಾ ರಾವ್ ಕಿರುತೆರೆಯ ಲಕ್ಕಿ ಚಾರ್ಮ್ ಎಂದೇ ಪ್ರಸಿದ್ಧರಾದವರು. ಈಕೆ ನಟಿಸಿರೋ ಸೀರಿಯಲ್‌ಗಳು ಟಾಪ್ ರೇಂಜ್‌ನಲ್ಲೇ ಸೌಂಡ್ ಮಾಡಿವೆ. ಸದ್ಯ ಸುಷ್ಮಾ ಭಾಗ್ಯಲಕ್ಷ್ಮಿ ಸೀರಿಯಲ್‌ನ ಭಾಗ್ಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ಸುಷ್ಮಾರಾವ್
ಸುಷ್ಮಾರಾವ್
Updated on

ಸುಷ್ಮಾ ರಾವ್ ಕಿರುತೆರೆಯ ಲಕ್ಕಿ ಚಾರ್ಮ್ ಎಂದೇ ಪ್ರಸಿದ್ಧರಾದವರು. ಈಕೆ ನಟಿಸಿರೋ ಸೀರಿಯಲ್‌ಗಳು ಟಾಪ್ ರೇಂಜ್‌ನಲ್ಲೇ ಸೌಂಡ್ ಮಾಡಿವೆ. ಸದ್ಯ ಸುಷ್ಮಾ ಭಾಗ್ಯಲಕ್ಷ್ಮಿ ಸೀರಿಯಲ್‌ನ ಭಾಗ್ಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಹಾಗೆ ನೋಡಿದರೆ ಮೊದಲು ಭಾಗ್ಯಲಕ್ಷ್ಮಿ ಒಂದೇ ಸೀರಿಯಲ್‌ ಆಗಿತ್ತು. ಅಕ್ಕ ತಂಗಿಯರ ಕಥೆ ಅನ್ನೋ ಸಬ್‌ಟೈಟಲ್ ಇದ್ರೂ ಇದ್ರಲ್ಲಿ ತಂಗಿ ಲಕ್ಷ್ಮಿಯದ್ದೇ ಪ್ರಧಾನ ಪಾತ್ರವಾಗಿ ಆಕೆಯ ಲೈಫು ತೆರೆದುಕೊಳ್ಳಬೇಕಿತ್ತು. ಆದರೆ ಯಾವಾಗ ಈ ಸೀರಿಯಲ್‌ನ ಭಾಗ್ಯ ಪಾತ್ರಕ್ಕೆ ಸುಷ್ಮಾ ಕೆ ರಾವ್ ಬಲಗಾಲಿಟ್ಟು ಎಂಟ್ರಿ ಕೊಟ್ಟರು. ಒಂದಿಷ್ಟು ವರ್ಷಗಳ ಬಳಿಕ ಸೀರಿಯಲ್‌ಗೆ ಮರಳಿದ ಸುಷ್ಮಾಳನ್ನು ಜನ ಅಕ್ಕರೆಯಿಂದ ಒಪ್ಪಿಕೊಂಡರು.

ಮನೆಯ ಕೆಲಸದಲ್ಲೇ ಮುಳುಗಿ ಹೋಗಿದ್ದ ಭಾಗ್ಯಾ ಧೈರ್ಯವಾಗಿ ಭರತನಾಟ್ಯ ಮಾಡಿ, ಎಲ್ಲರಿಂದ ಪ್ರಶಂಸೆ ಪಡೆಯುತ್ತಿದ್ದಾರೆ. ಮಗಳು ಹಾಗೂ ತಾನು ಸ್ಕೂಲ್‌ಗೆ ಹೋಗೋ ಅವಕಾಶವನ್ನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಇದ್ದರೇ ಯಾವುದನ್ನು ಬೇಕಾದರೂ ಸಾಧಿಸುತ್ತಾರೆ ಎಂಬ ಸಂದೇಶವನ್ನು 'ಭಾಗ್ಯಲಕ್ಷ್ಮಿ' ನೀಡುತ್ತಿದೆ. ಭರತನಾಟ್ಯ ಮಾಡುವ ಟಾಸ್ಕ್ ಮೂಲಕ ಎಲ್ಲರ ಮನಗೆಲ್ಲಲು ಪ್ರಯತ್ನ ಪಡುತ್ತಿದ್ದಾರೆ.  ಸೋಮವಾರದಿಂದ ಶನಿವಾರ ಕಲರ್ಸ್ ಕನ್ನಡದಲ್ಲಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿ. ಇದರಲ್ಲಿ ಗಂಡನಿಗೆ ಬೇಡವಾದ ಹೆಂಡತಿಯಾಗಿ, ಅತ್ತೆಯ ಮುದ್ದಿನ ಸೊಸೆಯಾಗಿ ಸುಷ್ಮಾ ಕೆ ರಾವ್ ನಟಿಸುತ್ತಿದ್ದಾರೆ.

ಕೆಲ ವರ್ಷಗಳಿಂದ ನಟನೆಯಿಂದ ವಿರಾಮ ಪಡೆದಿದ್ದ ಸುಷ್ಮಾ ಕೃಷ್ಣಮೂರ್ತಿ ರಾವ್ ಅವರಿಗೆ 'ಭಾಗ್ಯಲಕ್ಷ್ಮೀ' ಧಾರಾವಾಹಿ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿದೆ. ಇದರಲ್ಲಿನ ಭಾಗ್ಯಾ ಪಾತ್ರ, ಭಾವನಾ ಪಾತ್ರವನ್ನು ಮರೆಸುತ್ತಿದೆ. ನಟನೆ ಮತ್ತು ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿರುವ ಅವರು, ಒಬ್ಬ ನಿಪುಣ ಭರತನಾಟ್ಯ ನೃತ್ಯಗಾರ್ತಿ. ನೃತ್ಯಕ್ಕಾಗಿ 1997 ರ ಆರ್ಯಭಟ ಪ್ರಶಸ್ತಿಯನ್ನು ಸುಷ್ಮಾ ಕೆ ರಾವ್ ಪಡೆದಿದ್ದಾರೆ.

ನಿರ್ದೇಶಕ ಎಸ್. ನಾರಾಯಣ್ ಅವರ ಭಾಗೀರಥಿ ಧಾರಾವಾಹಿ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಂತರ , 'ಗುಪ್ತಗಾಮಿನಿ' ಧಾರಾವಾಹಿಯ 'ಭಾವನಾ' ಪಾತ್ರದಿಂದ ಹೆಚ್ಚು ಪ್ರಸಿದ್ಧರಾದರು. ಅವರು ಗುರುತಿಸಿಕೊಂಡರು. 1985 ರ ಫೆಬ್ರವರಿ 23 ರಂದು ಜನಿಸಿದ ಅವರು, ಸಣ್ಣ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ಆಸಕ್ತಿ ಹೊಂದಿದ್ದವರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com