ದರ್ಶನ್
ದರ್ಶನ್

ಇದು ನಮ್‌ ಜಾಗ, ನಮ್ಮ ಕನ್ನಡ ಸಿನಿಮಾ, ಹೆದರಿಕೆ ಯಾಕೆ? ಸಲಾರ್‌ಗೆ ದರ್ಶನ್‌ ಸವಾಲು!

ನಮ್ಮ ನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕು? ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ. ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಯಾವಾಗಲೂ ಕನ್ನಡಿಗರು ಕೈ ಹಿಡಿದೇ ಹಿಡಿಯುತ್ತಾರೆ .

‘ಕಾಟೇರ’ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲಿ ಡಂಕಿ ಸಿನಿಮಾ ಕೂಡ ರಿಲೀಸ್‌ ಆಗುತ್ತಿದೆ. ಈ ಬಗ್ಗೆ ದರ್ಶನ್‌ ಮಾತನಾಡಿದ್ದಾರೆ.

ಡಿಸೆಂಬರ್ 29ಕ್ಕೆ ಯಾಕೆ ರಿಲೀಸ್ ಮಾಡುತ್ತಿದ್ದೇವೆ ಅಂದರೆ, ನಮ್ಮ ಸಿನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕು? ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ. ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಯಾವಾಗಲೂ ಕನ್ನಡಿಗರು ಕೈ ಹಿಡಿದೇ ಹಿಡಿಯುತ್ತಾರೆ ಎಂದು ದರ್ಶನ್‌ ಹೇಳಿದ್ದಾರೆ.

ಕಾಟೇರ ಸಿನಿಮಾ ಸುದ್ದಿಗೋಷ್ಠಿ ಡಿಸೆಂಬರ್ 14 ನಡೆಯಿತು. ನಟ ದರ್ಶನ್, ಸಿನಿಮಾದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ಹುಬ್ಬಳ್ಳಿಯಲ್ಲಿ ಟ್ರೈಲರ್‌ ರಿಲೀಸ್‌ ಆಗುತ್ತಿದೆ. ಈ ಸಿನಿಮಾ ರೈತರ ರಿಲೇಟೆಡ್‌ ಇದೆ. ನಮ್ಮ ಕಾಟೇರ ಸಿನಿಮಾ ತುಂಬ ಭಿನ್ನವಾಗಿದೆ. ದರ್ಶನ್‌ ಮೊದಲೇ ಗ್ರ್ಯಾಂಡ್‌ ಓಪ್‌ನಿಂಗ್‌ ಅಲ್ಲಿ ಸಾಂಗ್ ಅಥವಾ ಫೈಟ್​ನಲ್ಲಿ ಎಂಟ್ರಿ ತೆಗೋತಾರೆ ಎಂದು ಊಹಿಸಿರಬಹುದು. ಆದರೆ ಇಲ್ಲಿ ಹಾಗಿಲ್ಲ. ಈ ಸಿನಿಮಾದಲ್ಲಿ ಮೊದಲ ಹಾಡು ಬರುವುದು 20 ನಿಮಿಷ ಆದಮೇಲೆ, ಮೊದಲ ಫೈಟ್ ನೋಡಲು ಬರೋಬ್ಬರಿ 40 ನಿಮಿಷ ಕಾಯಬೇಕು. ಈ ಮುಂಚೆ ಮಾಡಿದ ಕಮರ್ಶಿಯಲ್‌ ಸಿನಿಮಾಗಿಂತ ಇದು ಬಹಳ ವಿಭಿನ್ನವಾಗಿದೆ ಎಂದರು.

ಅಷ್ಟೇ ಅಲ್ಲದೇ ನಾವು ಯಾವುದೇ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿಲ್ಲ. ಇದು ಅಪ್ಪಟ ಕನ್ನಡಿಗರ ಸಿನಿಮಾ. ರಾಕ್​ಲೈನ್ ಅವರು ಸಹ ಇಂತಹಾ ಭಿನ್ನ ಸಬ್ಜೆಕ್ಟ್ ಅನ್ನು ಒಪ್ಪಿ ಅವರು ಮಾಡಿರುವ ಧೈರ್ಯಕ್ಕೆ ಮೆಚ್ಚುಗೆ ಸಲ್ಲಲೇ ಕು. ಇದು ನನ್ನ ಹಾಗೂ ಅವರ ಎರಡನೇ ಸಿನಿಮಾ. ತರುಣ್ ಕೂಡ ಸಿನಿಮಾ ಕಥೆಯನ್ನು ಒಂದೇ ಸಿಟ್ಟಿಂಗ್ ನಲ್ಲಿ ಎರಡು ಗಂಟೆಯಲ್ಲಿ ಕತೆ ಹೇಳಿ ಓಕೆ ಮಾಡಿಸಿದ್ದಾರೆ ಎಂದರು.

ಮೊದಲು ನಮ್ಮ ಪ್ರೊಡ್ಯೂಸರ್‌ಗೆ ಧನ್ಯವಾದ ಹೇಳುತ್ತೇನೆ. ಕಲಾವಿದರ ಡೇಟ್ಸ್‌ ಸಿಕ್ಕಿಲ್ಲ ಎಂದು ತಡವಾಗಿಲ್ಲ. ಎರಡು ಹಳ್ಳಿಗಳ ಸೆಟ್ ನಿರ್ಮಾಣ ಮಾಡಬೇಕಿತ್ತು. ಒಂದು ಹಳ್ಳಿಯ ಸೆಟ್ ಅನ್ನೇ ಬದಲಾಯಿಸಿ ಚಿತ್ರೀಕರಣ ಮಾಡಿ ಎಂದು ಹೇಳಿದೆ. ಆದರೆ ರಾಕ್​ಲೈನ್ ಒಪ್ಪಲಿಲ್ಲ, ಬದಲಿಗೆ ಸಮಯ ತೆಗೆದುಕೊಂಡು ಎರಡು ಹಳ್ಳಿಗಳ ಸೆಟ್ ನಿರ್ಮಿಸಿದರು.

ಸೆಟ್ ನಿರ್ಮಾಣವಾಗುವವರೆಗೆ ನಾನು ಮನೆಯಲ್ಲಿ ಖಾಲಿ ಕೂರಬೇಕಾಯ್ತು, ಆಗ ಬೇಸರವಾಗಿತ್ತು, ಆದರೆ ಸೆಟ್​ಗೆ ಬಂದು ನಿರ್ಮಾಣ ಮಾಡಿರುವುದನ್ನು ನೋಡಿದಾಗ ದೃಶ್ಯ ನಿಜಕ್ಕೂ ಖುಷಿಯಾಯ್ತು ಎಂದರು.

Related Stories

No stories found.

Advertisement

X
Kannada Prabha
www.kannadaprabha.com