ಶ್ರೀ ಮಹಾದೇವ್ ನಟನೆಯ 'ಜಸ್ಟ್ ಪಾಸ್' ಜನವರಿಯಲ್ಲಿ ರಿಲೀಸ್!

ಕೆಎಂ ರಘುನಾಥ್ ನಿರ್ದೇಶನದ ಶ್ರೀ ಮಹದೇವ್ ನಟನೆಯ ಮುಂದಿನ ಚಿತ್ರ  ಜಸ್ಟ್ ಪಾಸ್ ಬಿಡುಗಡೆಗೆ ಸಜ್ಜಾಗುತ್ತಿದೆ.  ಇತ್ತೀಚೆಗೆ ನಿರ್ದೇಶಕರು ಚಿತ್ರದ ಟೀಸರ್ ಅನಾವರಣಗೊಳಿಸಿದ್ದಾರೆ.
ಜಸ್ಟ್ ಪಾಸ್ ಸಿನಿಮಾ ಸ್ಟಿಲ್
ಜಸ್ಟ್ ಪಾಸ್ ಸಿನಿಮಾ ಸ್ಟಿಲ್

ಕೆಎಂ ರಘುನಾಥ್ ನಿರ್ದೇಶನದ ಶ್ರೀ ಮಹದೇವ್ ನಟನೆಯ ಮುಂದಿನ ಚಿತ್ರ ಜಸ್ಟ್ ಪಾಸ್ ಬಿಡುಗಡೆಗೆ ಸಜ್ಜಾಗುತ್ತಿದೆ.  ಇತ್ತೀಚೆಗೆ ನಿರ್ದೇಶಕರು ಚಿತ್ರದ ಟೀಸರ್ ಅನಾವರಣಗೊಳಿಸಿದ್ದಾರೆ.

ಹಲವಾರು ದೂರದರ್ಶನ ಧಾರಾವಾಹಿಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಶ್ರೀ ಮಹದೇವ್, ಇರುವೆಲ್ಲವ ಬಿಟ್ಟು ಮತ್ತು ಗಜಾನನ ಅಂಡ್ ಗ್ಯಾಂಗ್‌ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಪರದೆಯತ್ತ ತಮ್ಮ ಪಯಣ ಬೆಳೆಸಿದ್ದಾರೆ. ಇದೀಗ, ನಟ ತನ್ನ ಮುಂದಿನ ಚಿತ್ರ ಜಸ್ಟ್ ಪಾಸ್‌ ರಿಲೀಸ್ ಗೆ ಸಜ್ಜಾಗಿದ್ದಾರೆ.

ರೇಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆವಿ ಶಶಿಧರ್ ನಿರ್ಮಿಸಿರುವ ಜಸ್ಟ್ ಪಾಸ್ ನಲ್ಲಿ ರಂಗಾಯಣ ರಘು ಮೊದಲ ಬಾರಿಗೆ ಪ್ರಾಂಶುಪಾಲರಾಗಿ ನಟಿಸುತ್ತಿದ್ದಾರೆ. ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳ ಕಾಲೇಜು, ಈಗಷ್ಟೇ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಕಥೆ ಪ್ರಾರಂಭವಾಗುತ್ತದೆ. ಅಂತಹ ಕಾಲೇಜಿನಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಸಿನಿಮಾ ಬಿಂಬಿಸುತ್ತದೆ. ಬಹುತೇಕ ಚಿತ್ರೀಕರಣ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದಿದೆ ಎನ್ನುತ್ತಾರೆ ನಿರ್ದೇಶಕ ರಘುನಾಥ್.

<strong>ಪ್ರಣತಿ ಮತ್ತು ಶ್ರೀ ಮಹದೇವ್</strong>
ಪ್ರಣತಿ ಮತ್ತು ಶ್ರೀ ಮಹದೇವ್

ಪ್ರಣತಿ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಗೋವಿಂದೇಗೌಡ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಸ್ಟ್ ಪಾಸ್ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಅವರ ಸಂಗೀತ ಮತ್ತು ಸುಜಯ್ ಕುಮಾರ್ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com