'ವರ್ಷಕ್ಕೆ 2 ಕನ್ನಡ ಸಿನಿಮಾ ಮಾಡುವುದು ನನ್ನ ಗುರಿ; ತರುಣ್ ನನ್ನ ಸಹೋದರನಂತೆ, ಒಂದೇ ಸಿಟ್ಟಿಂಗ್ ನಲ್ಲಿ ಕಥೆಗೆ ಗ್ರೀನ್ ಸಿಗ್ನಲ್'

ತಮ್ಮ ಸಿನಿಮಾಗಳಲ್ಲಿ ಮನರಂಜನೆಯ ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಹಿಂದಿನ ಚಲನಚಿತ್ರಗಳಾದ ಯಜಮಾನ- ತೈಲ ಮಾಫಿಯಾ ಮತ್ತು ಕ್ರಾಂತಿ - ಶೈಕ್ಷಣಿಕ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದವು, ಇದು ಅವರ ಸಾಮಾಜಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ.
ದರ್ಶನ್
ದರ್ಶನ್

ದರ್ಶನ್ ಅಭಿನಯದ ಕಾಟೇರ ಸಿನಿಮಾ ದೊಡ್ಡಮಟ್ಟದಲ್ಲಿಯೇ  ಸಿದ್ದವಾಗಿದ್ದು, ದಾಸನ ಅಭಿಮಾನಿಗಳಿಗೆ ಹೊಸ ವರ್ಷಾಚರಣೆ ಸಂಭ್ರಮ ದುಪ್ಪಟ್ಟಾಗಲಿದೆ. ಈಗಾಗಲೇ  ದಾಖಲೆಯ ಟಿಕೆಟ್ ಬುಕ್ಕಿಂಗ್ ಆಗಿರುವ ಕಾಟೇರ ಸಿನಿಮಾ  ಬಾಕ್ಸ್ ಆಫೀಸ್ ದಾಖಲೆಗಳನ್ನು ಛಿದ್ರವಾಗಿಸಲು ರೆಡಿಯಾಗಿದೆ.

ನಾಯಕ ನಟನ ಜೀವನದಲ್ಲಿ ಬಾಕ್ಸ್  ಆಫೀಸ್ ಗೆಲುವು ಸಾಮಾನ್ಯ,  ಆದರೆ ದರ್ಶನ್ ಮಾಸ್ ಸಿನಿಮಾಗಳ ಹೀರೋ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.

ತಮ್ಮ ಸಿನಿಮಾಗಳಲ್ಲಿ ಮನರಂಜನೆಯ ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಹಿಂದಿನ ಚಲನಚಿತ್ರಗಳಾದ ಯಜಮಾನ- ತೈಲ ಮಾಫಿಯಾ ಮತ್ತು ಕ್ರಾಂತಿ - ಶೈಕ್ಷಣಿಕ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದವು, ಇದು ಅವರ ಸಾಮಾಜಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ.

ಸದ್ಯ ರಿಲೀಸ್ ಆಗುತ್ತಿರುವ ಕಾಟೇರ ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಸಿನಿಮಾವಾಗಿದೆ. ತರುಣ್ ಸುದೀರ್ ನಿರ್ದೇಶನದ ಈ ಸಿನಿಮಾದಲ್ಲಿ ದರ್ಶನ್ ಅವರನ್ನು ಕಮರ್ಷಿಯಲ್ ಅಂಶಗಳಿಂದ ದೂರವಿರಿಸಿ ವಿಶಿಷ್ಟ ಪಾತ್ರದಲ್ಲಿ ಚಿತ್ರಿಸಿದ್ದಾರೆ. ರಾಬರ್ಟ್ ಕಮರ್ಷಿಯಲ್  ಸಿನಿಮಾವಾಗಿದ್ದರೂ ಸಂಬಂಧವಿಲ್ಲದ ಮಗುವಿಗೆ ತಂದೆಯಾಗುವ ಕಥೆ ಸಿನಿಮಾವಾಗಿತ್ತು.

ಕಾಟೇರ ಸಿನಿಮಾ ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆಯಾಗಿದೆ.  ಯಾವುದೇ ನಿರ್ದೇಶಕರು ನನ್ನ ಬಳಿ ಬಂದರೂ ಮೊದಲು ನಾನು ಕಥೆ ಕೇಳುತ್ತೇನೆ, ಆನಂತರ ಮುಂದುವರಿಯುತ್ತೇನೆ, ಅಕೆಂದರೆ ಒಬ್ಬ ನಟನಾಗಿ ನಾನು ನನ್ನ ಪಾತ್ರಕ್ಕೆ ನ್ಯಾಯ ಒದಗಿಸಬೇಕಾಗಿದೆ. ಇದರ ಜೊತೆಗೆ ನಾನು ಕ್ಲಾಸ್ ಮತ್ತು ಮಾಸ್ ಸಿನಿಮಾ ಎಂದು ಗೆರೆ ಹಾಕುವುದಿಲ್ಲ.
ಆದರೆ ನನ್ನ ಸಿನಿಮಾಗಳಿಗೆ ಮಾಸ್ ಚಿತ್ರಗಳೆಂದು ವರ್ಗೀಕರಿಸಲ್ಪಟ್ಟಿವೆ. ಆದರೆ ಎಲ್ಲಾ ಸಿನಿಮಾಗಳ ಮುಖ್ಯ ಉದ್ದೇಶ ಮನರಂಜನೆ ಎಂಬುದು ನನ್ನ ನಂಬಿಕೆ ಎಂದು ದರ್ಶನ್ ಹೇಳಿದ್ದಾರೆ.  

ಕಾಟೇರ ಎಂಬ ಟೈಟಲ್ ಕೇಳಿ ದರ್ಶನ್ ಬಹಳ ಖುಷಿಯಾಗಿದ್ದಾರೆ, ಏಕೆಂದರೆ ದರ್ಶನ್ ಮನೆಯ ದೇವರ ಹೆಸರು ಕಾಟೇರ ರಾಮ ಎಂದಂತೆ. ಚೊಚ್ಚಲ ಬಾರಿಗೆ ತರುಣ್ ನಿರ್ದೇಶನದ ಚೌಕ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು.  ಸಿನಮಾ ಕಂಟೆಂಟ್ ರಿಚ್ ಆಗಿರಬೇಕು ಜೊತೆಗೆ ಮನರಂಜನೆಯನ್ನು ನೀಡಬೇಕಾಗಿದೆ.  ದರ್ಶನ್ ತಮ್ಮ ಇತ್ತೀಚಿನ ಸಿನಿಮಾಗಳಲ್ಲಿ ನಿರ್ಲಕ್ಷ್ಯಿತ ಸಮಸ್ಯೆಗಳ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ, ಕಾಟೇರದಲ್ಲಿ ಅವರು ರೈತರ ದುಸ್ಥಿತಿಗಳನ್ನು ಎತ್ತಿ ತೋರಿದ್ದಾರೆ. ಇದು ರಾಷ್ಟ್ರದ ಪ್ರಮುಖ ಸಮಸ್ಯೆಯಾಗಿದ್ದು, ಕಾಳಜಿ ತೋರುವ ಅವಶ್ಯಕತೆಯಿದೆ.

ಚಿತ್ರ ಕಥೆಯು ನೈಜ ಜೀವನದ ಘಟನೆಯನ್ನು ಆಧರಿಸಿದೆ.  ದೇವರಾಜ್ ಅರಸು ಅವರು ಸಚಿವರಾಗಿದ್ದ ಅವಧಿಯಲ್ಲಿ ಆಗಿನ ಪ್ರಧಾನಿಯಿಂದ ಜಾರಿಗೆ ಬಂದ1974 ರ ಭೂಸುಧಾರಣಾ ಕಾಯ್ದೆಬಗ್ಗೆ ಹೇಳುತ್ತದೆ.

ಭೂಮಿಯನ್ನು ಸಾಗುವಳಿ ಮಾಡುವವರು ಅದನ್ನು ನ್ಯಾಯಯುತವಾಗಿ ಹೊಂದುತ್ತಾರೆ ಎಂದು ಷರತ್ತು ವಿಧಿಸಲಾಗಿತ್ತು. ಒಬ್ಬ ಮಾಸ್ ಹೀರೋ ಇಂತಹ ನಿಜ ಜೀವನದ ನಿರೂಪಣೆಗಳನ್ನು ಮಾಡುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ, ನಾನು ಸತ್ಯಾನ್ವೇಷಣೆ ನಡೆಸುತ್ತೇನೆ ಈ ಸಂಬಂಧ ನಿರ್ದೇಶಕರೊಂದಿಗೆ ಆಳವಾದ ಚರ್ಚೆಗಳನ್ನು ನಡೆಸುತ್ತೇನೆ ಎಂದಿದ್ದಾರೆ ದರ್ಶನ್.

ಕಾಟೇರದಲ್ಲಿ ದರ್ಶನ್ ವೃದ್ದ ನೋಟವು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಸಾಮಾನ್ಯವಾಗಿ ದರ್ಶನ್ ಪ್ರತಿ ಸಿನಿಮಾದಲ್ಲಿ ಇಂಟ್ರುಡಕ್ಷನ್ ಸಾಂಗ್ ಇರುತ್ತದೆ, ಆದರೆ ಕಾಟೇರದಲ್ಲಿ ತಮ್ಮ 55 ವರ್ಷದ ವೃತ್ತಿ ಜೀವನಕ್ಕೆ ಸಂಬಂಧಿಸಿ ವಿಭಿನ್ನ ಹಾಡು ಇರಲಿದೆ,.

ಸಿನಿಮಾದ ಪೋಸ್ಟರ್ ಬಗ್ಗೆ ಮಾತನಾಡಿದ ದರ್ಶನ್, ಕುರಿಗಳ ಹಿಂಡನ್ನು ಮುನ್ನಡೆಸುವ ನಾಯಿಯನ್ನು ಒಳಗೊಂಡಿತ್ತು ಮತ್ತು “ಹಿಂದೆ ಹೋಗುವವರಿಗೆ ದಾರಿ ತೋರಿಸುವುದು ಮುನ್ನಡೆಯುವವರ ಜವಾಬ್ದಾರಿ” ಎಂದು ಶೀರ್ಷಿಕೆ ನೀಡಲಾಗಿತ್ತು. ಇದು ನಮ್ಮ ಸಿನಿಮಾ ಕತೆ ಹೇಳುವ ಆರಂಭವಾಗಿತ್ತು. ಆ ಸಾಲು ಮತ್ತು ಚಿತ್ರ ನಾಯಕ ಮತ್ತು ಆತನ ಹಿಂದೆ ಇರುವ  ಬೆಂಬಲಿಗರನ್ನು ಸೂಚಿಸಿತ್ತು ಎಂದು ಹೇಳಿದ್ದಾರೆ.

ತರುಣ್ ಸುಧೀರ್ ನನ್ನ ಸಹೋದರನಂತೆ, 30 ವರ್ಷಗಳಿಂದ ನಾನು ಆತನನ್ನು ಬಲ್ಲೆ, ಆತನ ಮೇಲೆ ನಾನು ಪೂರ್ಣ ನಂಬಿಕೆ ಇಟ್ಟಿದ್ದೇನೆ, ಆತ ನನ್ನ ಬಳಿ ಕತೆ ತಂದಾಗಲೆಲ್ಲಾ ಒಂದೇ ಸಿಟ್ಟಿಂಗ್ ನಲ್ಲಿ ಗ್ರೀನ್ ಸಿಗ್ನಲ್ ನೀಡುತ್ತೇನೆ ಎಂದಿದ್ದಾರೆ ದರ್ಶನ್.

ದರ್ಶನ್ ಅವರು ತಂತ್ರಜ್ಞರಿಗೆ ಮನ್ನಣೆ ನೀಡುತ್ತಾರೆ ಮತ್ತು ವಿಶೇಷವಾಗಿ ಸಂಭಾಷಣೆ ಬರಹಗಾರ ಮಾಸ್ತಿ  ತನ್ನನ್ನು ಹೈಲೈಟ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಈ ಕಥೆಯು ನಮ್ಮ ಭೂಮಿ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ,  ಕಮರ್ಷಿಯಲ್ ಅಂಶಗಳು ಚೆನ್ನಾಗಿ ಮಿಶ್ರಣವಾಗಿದೆ. ಈ ಪ್ರದೇಶದ ಮಾತು ಕಲಿಯಲು ನಾನು ಅನೇಕರನ್ನು ಭೇಟಿಯಾದೆ ಎಂದು ಹೇಳಿದ್ದಾರೆ.

ಕಾಟೇರದಲ್ಲಿ ಹಿರಿಯ ನಟರಾದ ವಿನೋದ್ ಆಳ್ವ, ಕುಮಾರ್ ಗೋವಿಂದ್ ಮತ್ತು ಪದ್ಮಾ ವಾಸಂತಿ ಅಭಿನಯಿಸಿದ್ದಾರೆ.  ಕನ್ನಡ ಚಿತ್ರರಂಗದ ಸುವರ್ಣ ನೆನಪುಗಳನ್ನು ಮರು ಹುಟ್ಟುಹಾಕಿದ್ದಾರೆ.  ಶ್ರುತಿ, ವೈಜನಾಥ್ ಬಿರಾದಾರ್ ಮತ್ತು ರೋಹಿತ್ ಪಿವಿ ಸೇರಿದಂತೆ ಇತರರು ಸಹ  ಸಿನಿಮಾ ಭಾಗವಾಗಿದ್ದಾರೆ. “ಒಬ್ಬ ನಟ ಅವರು ಸಮಾಧಿ ಸೇರುವವರೆಗೂ ನಿವೃತ್ತರಾಗುವುದಿಲ್ಲ. ನಿಷ್ಕ್ರಿಯ ಹಂತಗಳಲ್ಲಿಯೂ ಸಹ, ತಮ್ಮನ್ನು ಕಲಾವಿದರು ಎಂದು ಪರಿಗಣಿಸುವವರು ಎಂದಿಗೂ ನಿಜವಾಗಿಯೂ ನಿವೃತ್ತರಾಗುವುದಿಲ್ಲ. ಈ ನಟರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ. ಬಿರಾದಾರ್ ಅವರ ಪಾತ್ರಕ್ಕೆ ನಾನು ಹೊಂದಿಕೊಳ್ಳಲು ಬಯಸಿದ ಸಂದರ್ಭಗಳಿವೆ, ಅವರ ನಟನೆ ಬಗ್ಗೆ ನನಗೆ ಅಸೂಯೆಯಾಯಿತು. ಕಾಟೇರಾದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಜಾಗವಿದೆ” ಎಂದು ದರ್ಶನ್ ಹಂಚಿಕೊಂಡಿದ್ದಾರೆ.

ಚೊಚ್ಚಲ ನಟಿ ಆರಾಧನಾ ಕುರಿತು ಮಾತನಾಡಿದ ದರ್ಶನ್, ಅವರು ತಮ್ಮ ತಾಯಿ ಮಾಲಾಶ್ರೀ  ಹೆಜ್ಜೆಗಳನ್ನು ಅನುಸರಿಸಿ ಪಾತ್ರಕ್ಕಾಗಿ ಸಿದ್ದರಾಗಿದ್ದಾರೆ  ಆರಾಧನಾ ಉತ್ತಮ ನಟಿಯಾಗಿ ನೆಲೆಗೊಳ್ಳಲಿದ್ದಾರೆ. ಆಕೆ ಚೆನ್ನಾಗಿ ತರಬೇತಿ ಪಡೆದಿದ್ದು  ಚಿತ್ರರಂಗದಲ್ಲಿ ದೀರ್ಘಾವಧಿಯಲ್ಲಿರಲಿದ್ದಾರೆ.

ವಿಷಯದ ಸಾರ್ವತ್ರಿಕ ಸ್ವರೂಪದ ಹೊರತಾಗಿಯೂ ಅದನ್ನು ಶುದ್ಧ ಕನ್ನಡ ಸಿನಿಮಾ ಮಾಡುವ ಬದ್ಧತೆ ಬಗ್ಗೆ ದರ್ಶನ್ ಒತ್ತಿಹೇಳುತ್ತಾರೆ. ಪ್ರತಿಯೊಂದು ಪ್ರದೇಶದ ರೈತರು ವಿಶಿಷ್ಟವಾದ ಸಂಸ್ಕೃತಿಗಳನ್ನು ಹೊಂದಿದ್ದಾರೆ ಮತ್ತು ಅವರ ಉಡುಪಿನಲ್ಲಿ ಸಹ ಬದಲಾಗಿದೆ. ಅವರ ನೆಲದ ಸಂಸ್ಕೃತಿಯಲ್ಲಿ ಬೇರೂರಿರುವ ಅವರ ಭಾಷೆಯಲ್ಲಿ ಅವರನ್ನು ಪ್ರತಿನಿಧಿಸುವುದು ಉತ್ತಮ.

ಬಿಹಾರದಲ್ಲಿ ಇದೇ ರೀತಿಯ ಭೂ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ, ಆದರೆ ಈ ಕಥೆಯನ್ನು ಅಲ್ಲಿ ಹೇಳುವುದು ಆ ಭೂಮಿ ಮತ್ತು ಅದರ ರೈತರಿಗೆ ದೃಢೀಕರಣವನ್ನು ಬೇಡುತ್ತದೆ. ನಿಜ ಜೀವನದ ಘಟನೆಗಳು, ವಿಶೇಷವಾಗಿ ಇಂತಹ ವಿಷಯವನ್ನು ಸ್ಥಳೀಯ ಭಾಷೆಯಲ್ಲಿ ತಿಳಿಸುವುದು ಉತ್ತಮವಾಗಿದೆ ಎಂದಿದ್ದಾರೆ.

ಪ್ಯಾನ್-ಇಂಡಿಯಾ ಚಲನಚಿತ್ರಗಳ ಬಗ್ಗೆ ತಮ್ಮ ಆಳವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ ದರ್ಶನ್, “ಬಹು ಭಾಷೆಗಳಲ್ಲಿ ಚಲನಚಿತ್ರಗಳನ್ನು ರಚಿಸಲು ಸಾಕಷ್ಟು ಸಮಯ ಮತ್ತು ತಾಳ್ಮೆ ಬೇಕಾಗುತ್ತದೆ, ಅದು ನನ್ನಲ್ಲಿಲ್ಲ. ವರ್ಷಕ್ಕೆ ಎರಡು ಕನ್ನಡ ಚಿತ್ರಗಳನ್ನು ನಮ್ಮ ಇಂಡಸ್ಟ್ರಿಗೆ ಕೊಡುಗೆ ನೀಡುವುದು ನನ್ನ ಗುರಿ,'' ಎಂದು ಮಾತು ಮುಗಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com