ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಶಿರಚ್ಛೇದ ಮಾಡಿದವರಿಗೆ 1 ಕೋಟಿ ರು. ಬಹುಮಾನ ಘೋಷಣೆ!

ಟಾಲಿವುಡ್‌ನಲ್ಲಿ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತರಾಗಿರುವ ರಾಮ್‌ ಗೋಪಾಲ್‌ ವರ್ಮಾ (ಆರ್‌ಜಿವಿ) ಅವರು ಇದೀಗ ‘ವ್ಯೂಹಂ’ ಚಿತ್ರದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ

ಹೈದರಾಬಾದ್: ಟಾಲಿವುಡ್‌ನಲ್ಲಿ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತರಾಗಿರುವ ರಾಮ್‌ ಗೋಪಾಲ್‌ ವರ್ಮಾ (ಆರ್‌ಜಿವಿ) ಅವರು ಇದೀಗ ‘ವ್ಯೂಹಂ’ ಚಿತ್ರದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಅಮರಾವತಿ ಚಳವಳಿಯ ನಾಯಕ ಕೊಲಿಕಿ ಪುಡಿ ಶ್ರೀನಿವಾಸರಾವ್ ಅವರು, ರಾಮ್‌ ಗೋಪಾಲ್‌ ವರ್ಮಾ ಅವರ ತಲೆಯನ್ನು ಕತ್ತರಿಸಿ ತಂದವರಿಗೆ 1 ಕೋಟಿ ರು. ಬಹುಮಾನ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.

ರಾಮ ಗೋಪಾಲ್ ವರ್ಮಾ ಅವರು ಸಮಾಜಕ್ಕೆ ಮಾರಕ. ಸಮಾಜಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ಶ್ರೀನಿವಾಸರಾವ್ ಹೇಳಿದ್ದರು. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಶಿರಚ್ಚೇದಕ್ಕೆ ಕರೆ ನೀಡಿರುವ ಕೋಲಿಕಪುಡಿ ಶ್ರೀನಿವಾಸ ರಾವ್ ಅವರ ವಿಡಿಯೋ ಕ್ಲಿಪ್ ಷೇರ್ ಮಾಡಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಅವರು, ಯಾರಾದರೂ ರಾಮ್ ಗೋಪಾಲ್ ವರ್ಮಾ ಅವರ ತಲೆ ಕಡಿದು ತಂದರೆ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಶ್ರೀನಿವಾಸ್ ರಾವ್ ಹೇಳುತ್ತಾರೆ. ಆಗ ಆ್ಯಂಕರ್, ನಿಮ್ಮ ಮಾತುಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಶ್ರೀನಿವಾಸರಾವ್ ನನ್ನನ್ನು ಕೊಲ್ಲಲು 1 ಕೋಟಿಗೆ ಗುತ್ತಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸರಾವ್, ಸುದ್ದಿ ವಾಹಿನಿಯ ಆ್ಯಂಕರ್ ಸಾಂಬಶಿವರಾವ್ ಮತ್ತು ಚಾನೆಲ್ ಮಾಲೀಕ ಬಿ.ಆರ್. ನಾಯ್ಡು ಅವರ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಆರ್‌ಜಿವಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com