ಮಧು ಸೂದನ್ ಗೋವಿಂದ್ ಮತ್ತು ಶೃತಿ ಪ್ರಕಾಶ್
ಮಧು ಸೂದನ್ ಗೋವಿಂದ್ ಮತ್ತು ಶೃತಿ ಪ್ರಕಾಶ್

ಸಸ್ಪೆನ್ಸ್ ಥ್ರಿಲ್ಲರ್ 'ಫ್ರೈಡೆ​' ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್- ಮಧುಸೂದನ್ ಗೋವಿಂದ್!

ಈ ಹಿಂದೆ 'ಹೊಸ ದಿನಚರಿ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತ  ಮತ್ತೆ ಜಂಟಿಯಾಗಿ 'ಫ್ರೈಡೆ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರಿನ ಧರ್ಮಗಿರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ಈ ಸಿನಿಮಾಗೆ ಮುಹೂರ್ತ ನೆರವೇರಿತು.
Published on

ಈ ಹಿಂದೆ 'ಹೊಸ ದಿನಚರಿ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತ  ಮತ್ತೆ ಜಂಟಿಯಾಗಿ 'ಫ್ರೈಡೆ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರಿನ ಧರ್ಮಗಿರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ಈ ಸಿನಿಮಾಗೆ ಮುಹೂರ್ತ ನೆರವೇರಿತು.

ಡೀಸ್‌ ಫಿಲ್ಮ್ಸ್ ಮತ್ತು ಶೂಲಿನ್ ಮೀಡಿಯಾ ಸಂಸ್ಥೆಗಳ ಬ್ಯಾನರ್‌ ಅಡಿಯಲ್ಲಿ ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಡೀಸ್‌ ಫಿಲ್ಮ್ಸ್ ಮತ್ತು ಶೂಲಿನ್ ಮೀಡಿಯಾ ಸಂಸ್ಥೆಗಳ ಬ್ಯಾನರ್‌ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ನಾಲ್ಕನೇ ಚಿತ್ರ "ಫ್ರೈಡೆ".

ಈ ಚಿತ್ರಕ್ಕೆ ಕ್ರಿಯೇಟಿವ್ ನಿರ್ಮಾಪಕರಾಗಿ ಗಂಗಾಧರ್ ಸಾಲಿಮಠ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮಧುಸೂದನ್ ಗೋವಿಂದ್, ಶ್ರುತಿ ಪ್ರಕಾಶ್ ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ‌.

<strong>ಮುಹೂರ್ತದಲ್ಲಿ 'ಫ್ರೈಡೆ​' ಚಿತ್ರ ತಂಡ</strong>
ಮುಹೂರ್ತದಲ್ಲಿ 'ಫ್ರೈಡೆ​' ಚಿತ್ರ ತಂಡ

ಶುಕ್ರವಾರ ಬಿಡುಗಡೆ ಆದ ಹೊಸ ಚಿತ್ರವೊಂದನ್ನು ನೋಡುವುದಕ್ಕೆ ಹೋಗಿದ್ದ ದಂಪತಿಯ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆಯುತ್ತದೆ. ಅದೇ ನಮ್ಮ ಚಿತ್ರದ ಮುಖ್ಯ ಕಥಾಹಂದರ. ಕಥೆಯನ್ನು ನಾನೇ ಬರೆದಿದ್ದೇನೆ, ಚಿತ್ರಕಥೆಯನ್ನು ನಾನು ಹಾಗೂ ಕೀರ್ತಿ ಶೇಖರ್ ಬರೆದಿದ್ದೇವೆ. ಜನವರಿ ಮೊದಲ ವಾರದಲ್ಲಿ ಚಿತ್ರೀಕರಣ ಬೆಂಗಳೂರಿನಲ್ಲಿ ಶುರುವಾಗಲಿದೆ ಎಂದು ನಿರ್ದೇಶಕರು ವಿವರಿಸಿದ್ದಾರೆ.

ಫ್ರೈಡೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಮೂರು ಹಾಡುಗಳಿದೆ. ಅಶ್ವಿನ್ ಹೇಮಂತ್ ಸಂಗೀತ ನಿರ್ದೇಶನ ಹಾಗೂ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.  ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com