'ದಿ ಕಪಿಲ್ ಶರ್ಮಾ ಶೋ'ನಲ್ಲಿ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಭಾಗಿ

ಕಿಚ್ಚ ಸುದೀಪ್ ಅವರು ಈ ಹಿಂದೆ 'ದಬಾಂಗ್ 3' ಸಿನಿಮಾ ಸಮಯದಲ್ಲಿ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಭಾಗವಹಿಸಿದ್ದರು. ಈಗ ಕಪಿಲ್ ಶರ್ಮಾ ಶೋನಲ್ಲಿ  ಗೋಲ್ಡನ್ ಸ್ಟಾರ್ ಗಣೇಶ್ ಭಾಗವಹಿಸಿದ್ದಾರೆ.
ಗಣೇಶ್
ಗಣೇಶ್

ಕಿಚ್ಚ ಸುದೀಪ್ ಅವರು ಈ ಹಿಂದೆ 'ದಬಾಂಗ್ 3' ಸಿನಿಮಾ ಸಮಯದಲ್ಲಿ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಭಾಗವಹಿಸಿದ್ದರು. ಈಗ ಕಪಿಲ್ ಶರ್ಮಾ ಶೋನಲ್ಲಿ  ಗೋಲ್ಡನ್ ಸ್ಟಾರ್ ಗಣೇಶ್ ಭಾಗವಹಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ರಿಲೀಸ್ ಮಾಡಿ ಈ ಮೂಲಕ ಗಣೇಶ್ ಅವರು ಶೀಘ್ರದಲ್ಲಿಯೇ ವಿಶೇಷ ಸುದ್ದಿ ನೀಡುವುದಾಗಿ ಹೇಳಿದ್ದಾರೆ.

ನನ್ನ ಇಷ್ಟದ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿರೋದು ಖುಷಿಯಾಯ್ತು. ಕಪಿಲ್ ಶರ್ಮಾ ಸರ್ ಅವರೇ ನಿಮ್ಮ ಸ್ವಾಗತಕ್ಕೆ ಧನ್ಯವಾದಗಳು. ಎದುರು ನೋಡುತ್ತಿರುವೆ" ಎಂದು 'ಗೋಲ್ಡನ್ ಸ್ಟಾರ್' ಗಣೇಶ್ ಅವರು ಕಪಿಲ್ ಅವರನ್ನು ಭೇಟಿ ಮಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕ್ಯಾಪ್ಶನ್ ನೀಡಿದ್ದಾರೆ.

'ದಿ ಕಪಿಲ್ ಶರ್ಮಾ ಶೋ'ನಲ್ಲಿ ಗೋಲ್ಡನ್ ಸ್ಟಾರ್ ಏನು ಸರ್ಪ್ರೈಸ್ ನೀಡಲಿದ್ದಾರೆ ಎಂಬ ಕುತೂಹಲ ಎದ್ದಿದೆ. ಈ ಬಗ್ಗೆ ಮತ್ತೆ ಗಣೇಶ್ ಅವರೇ ಮಾಹಿತಿ ನೀಡಬೇಕಿದೆ.  ಈಗ 'ಬಾನ ದಾರಿಯಲ್ಲಿ' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಈ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನವಿದೆ. ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಈ ಚಿತ್ರದ ನಾಯಕಿಯರು. ರುಕ್ಮಿಣಿ ವಸಂತ್ ಅವರ ಪಾತ್ರ ತುಂಬ ಡಿಫರೆಂಟ್ ಆಗಿರಲಿದ್ದು ಭಾರೀ ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com