'ಲವ್ ಬರ್ಡ್ಸ್' ಮೂಲಕ ಮತ್ತೆ ರೋಮ್ಯಾಂಟಿಕ್ ಸಿನಿಮಾಗಳತ್ತ ಮುಖ ಮಾಡಿದ ನಿರ್ದೇಶಕ ಪಿ.ಸಿ ಶೇಖರ್

ನಿರ್ದೇಶಕ ಪಿಸಿ ಶೇಖರ್ ಸದಾ ಹೊಸ ಪ್ರಯೋಗಗಳತ್ತ ಮುಖ ಮಾಡಿರುತ್ತಾರೆ, ಲವ್ ಬರ್ಡ್ಸ್ ಸಿನಿಮಾ ಮೂಲಕ ರೋಮ್ಯಾಂಟಿಕ್ ಚಿತ್ರಗಳ ಕಥೆಯೊಂದಿಗೆ ಸಿನಿಮಾ ಮಾಡಲು ಶೇಖರ್ ಉತ್ಸುಕರಾಗಿದ್ದಾರೆ.
ಪಿ ಸಿ ಶೇಖರ್ ನಿರ್ದೇಶನದ ಲವ್ ಬರ್ಡ್ಸ್ ಸಿನಿಮಾ ಸ್ಟಿಲ್
ಪಿ ಸಿ ಶೇಖರ್ ನಿರ್ದೇಶನದ ಲವ್ ಬರ್ಡ್ಸ್ ಸಿನಿಮಾ ಸ್ಟಿಲ್
Updated on

ನಿರ್ದೇಶಕ ಪಿಸಿ ಶೇಖರ್ ಸದಾ ಹೊಸ ಪ್ರಯೋಗಗಳತ್ತ ಮುಖ ಮಾಡಿರುತ್ತಾರೆ, ಲವ್ ಬರ್ಡ್ಸ್ ಸಿನಿಮಾ ಮೂಲಕ ರೋಮ್ಯಾಂಟಿಕ್ ಚಿತ್ರಗಳ ಕಥೆಯೊಂದಿಗೆ ಸಿನಿಮಾ ಮಾಡಲು ಶೇಖರ್ ಉತ್ಸುಕರಾಗಿದ್ದಾರೆ.

ನನ್ನ ಮೊದಲ ಚಿತ್ರ ರೋಮಿಯೋ ತುಂಬಾ ದೊಡ್ಡ ರೀತಿಯಲ್ಲಿ ಯಶಸ್ಸು ಕಂಡಿತು, ಆದಾದ ನಂತರ, ಮುಂದಿನ ಸಿನಿಮಾ ಚಡ್ಡಿ ದೋಸ್ತ್ ನಲ್ಲಿ ಕಾಮಿಡಿಯಿತ್ತು. ಅರ್ಜುನ ಚಿತ್ರದಲ್ಲಿ ಮರ್ಡರ್ ಮಿಸ್ಟರಿಯಿತ್ತು. ದಿ ಟೆರರಿಸ್ಟ್‌ನಂತಹ ಕ್ರೈಮ್ ಸಿನಿಮಾ ಕೂಡ ನಿರ್ದೇಶಸಿದ್ದೆ, ಆದರೆ, ಲವ್ ಬರ್ಡ್ಸ್‌ನೊಂದಿಗೆ, ನಾನು ಸಂಪೂರ್ಣವಾಗಿ ರೊಮ್ಯಾಂಟಿಕ್ ಚಿತ್ರಕ್ಕೆ ಮರಳಿದ್ದೇನೆ ಎಂದು  ಪಿ ಸಿ ಶೇಖರ್ ಹೇಳಿದ್ದಾರೆ.

ಫೆಬ್ರವರಿ 17 ರಂದು ಚಿತ್ರದ ಬಿಡುಗಡೆಗೆ ಮುಂಚಿತವಾಗಿ ಮಾತನಾಡಿದ ನಿರ್ದೇಶಕ ಶೇಖರ್, ನಿಜ ಜೀವನದ ಜೋಡಿ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಬೇರೆ ರೀತಿಯ ಸಿನಿಮಾಗಳಿಗೆ ಹೋಲಿಸಿದರೆ ರೊಮ್ಯಾಂಟಿಕ್ ಕಥೆ ನಿಭಾಯಿಸುವುದು ಸ್ವಲ್ಪ ಸುಲಭ ಎಂದು ನಾನು ಯಾವಾಗಲೂ ಭಾವಿಸುತ್ತೇನೆ ಏಕೆಂದರೆ ಅದು ಎಲ್ಲಾ ಜನರಿಗೆ ಸಾಮಾನ್ಯ ಭಾವನೆಯಾಗಿದೆ.

ಅಪರಾಧ ಅಥವಾ ಥ್ರಿಲ್ಲರ್‌ನಂತಹ ವಿಷಯಗಳಿಗೆ ಕೆಲವು ಸಂಶೋಧನೆಯ ಅಗತ್ಯವಿದೆ, ಆದರೆ ಪ್ರೀತಿಯು ಜನ್ಮಜಾತ ಗುಣವಾಗಿದೆ ಮತ್ತು ನಾವು ಭಾವನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತೇವೆ. ಪ್ರತಿ ಚಿತ್ರದೊಂದಿಗೆ ನಾನು ಪಡೆದ ಅನುಭವವು ನನ್ನ ಬರವಣಿಗೆಯ ಮೇಲೆ ಸಕಾರಾತ್ಮಕ ರೀತಿಯಲ್ಲಿ ಪ್ರಭಾವ ಬೀರಿದೆ ಎಂದು ನಿರ್ದೇಶಕರು ಹೇಳುತ್ತಾರೆ.

ಲವ್ ಬರ್ಡ್ಸ್ ನಗರ ಬದುಕಿನ ಪ್ರಣಯ ಕಥೆಯಾಗಿದೆ, ಇದು ಮದುವೆಯ ನಂತರ ಯಶಸ್ವಿ ಜೀವನವನ್ನು ನಡೆಸುತ್ತಿರುವ ಆಧುನಿಕ ದಂಪತಿಗಳ ಕಥೆ.  ಕೃಷ್ಣ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಮತ್ತು ಮಿಲನಾ ನಾಗರಾಜ್ ಫ್ಯಾಶನ್ ಡಿಸೈನರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಂಯುಕ್ತಾ ಹೊರ್ನಾಡ್ ವಕೀಲೆ ಪಾತ್ರದಲ್ಲಿ ನಟಿಸಿದ್ದಾರೆ.

ಪತಿ-ಪತ್ನಿಯರ ಮನಸ್ಸು ಒಂದಾದರೆ ಮಾತ್ರ ದಾಂಪತ್ಯ ಯಶಸ್ವಿಯಾಗಲು ಸಾಧ್ಯ. ಇದು ಕೇವಲ ಆಕರ್ಷಣೆಗೆ ಮೀರಿದ ಸಂಗತಿಯಲ್ಲ. ಇದು ಸಮಾಜದಲ್ಲಿ ಚರ್ಚೆಯಾಗಬೇಕಾದ ವಿಷಯ ಎಂದು ನಾನು ಭಾವಿಸಿದೆ.

ಮದುವೆಯ ಆರಂಭದಲ್ಲಿ ರೋಸಿಯಂತೆ ಕಾಣಿಸಬಹುದು, ಆದರೆ ಪ್ರಯತ್ನಗಳನ್ನು ತೆಗೆದುಕೊಳ್ಳದಿದ್ದರೆ ಸಮಯ ಕಳೆದಂತೆ ಪ್ರೀತಿಯು ಮರೆಯಾಗುವ ಸಾಧ್ಯತೆಯಿದೆ. ಇದು ಪ್ರತಿ ದಂಪತಿಗಳಿಗೆ ತಿಳಿಯಬೇಕಾದ ಸತ್ಯಸ  ನಾನು ಇದನ್ನು ಮನರಂಜನಾತ್ಮಕವಾಗಿ ಹೇಳಲು ಹೊರಟಿದ್ದೇನೆ ಎಂದಿದ್ದಾರೆ.

ಕಡ್ಡಿಪುಡಿ ಚಂದ್ರು ನಿರ್ಮಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್ ಮತ್ತು ಯೂಟ್ಯೂಬರ್ ಗೌರವ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಲವ್ ಬರ್ಡ್ಸ್ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಮತ್ತು ಶಕ್ತಿ ಶೇಖರ್  ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com