ಪಾತ್ರಗಳಲ್ಲಿ ನಿರಂತರ ಬದಲಾವಣೆ ಬಯಸುತ್ತೇನೆ: ಸಂಯುಕ್ತಾ ಹೊರ್ನಾಡು

ನಾಯಕಿ ಪಾತ್ರವಾಗಲಿ ಅಥವಾ ಪೋಷಕ ಪಾತ್ರದಲ್ಲಾಗಲಿ, ತಮ್ಮ ಪಾತ್ರವು ಚಿತ್ರಕ್ಕೆ ಮೌಲ್ಯವನ್ನು ಸೇರಿಸುವಂತಿರಬೇಕು ಎಂದು ಸಂಯುಕ್ತಾ ಹೊರ್ನಾಡು ನಂಬುತ್ತಾರೆ.
ಸಂಯುಕ್ತಾ ಹೊರ್ನಾಡು
ಸಂಯುಕ್ತಾ ಹೊರ್ನಾಡು

ನಾಯಕಿ ಪಾತ್ರವಾಗಲಿ ಅಥವಾ ಪೋಷಕ ಪಾತ್ರದಲ್ಲಾಗಲಿ, ತಮ್ಮ ಪಾತ್ರವು ಚಿತ್ರಕ್ಕೆ ಮೌಲ್ಯವನ್ನು ಸೇರಿಸುವಂತಿರಬೇಕು ಎಂದು ಸಂಯುಕ್ತಾ ಹೊರ್ನಾಡು ನಂಬುತ್ತಾರೆ.

ಇತ್ತೀಚೆಗೆ ದರ್ಶನ್ ಅಭಿನಯದ ಕ್ರಾಂತಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸಂಯುಕ್ತಾ ಪಿಸಿ ಶೇಖರ್ ಅವರ ಲವ್ ಬರ್ಡ್ಸ್ ಸಿನಿಮಾದಲ್ಲಿ ವಕೀಲೆ ಪಾತ್ರ ನಿರ್ವಹಿಸಿದ್ದಾರೆ.

ಫೆಬ್ರವರಿ 17 ರಂದು ಬಿಡುಗಡೆಗೆ ಸಜ್ಜಾಗಿರುವ ಸಿನಿಮಾದಲ್ಲಿ ಕೃಷ್ಣ ಮತ್ತು ಮಿಲನಾ ನಾಗರಾಜ್ ನಟಿಸಿದ್ದಾರೆ.

“ನಾನು ಮಾಲ್ಡೀವ್ಸ್‌ನಲ್ಲಿದ್ದಾಗ ನನ್ನನ್ನು ಈ ಸಿನಿಮಾಗೆ ಆಯ್ಕೆ ಮಾಡಲಾಯಿತು. ಈ ಕ್ಷಣದಲ್ಲಿ ಬದುಕುವ ಗುರಿಯೊಂದಿಗೆ ಈ ಯೋಜನೆಯು ಪ್ರಾರಂಭವಾಯಿತು. ಲವ್ ಬರ್ಡ್ಸ್‌ನಲ್ಲಿ ನನ್ನದು ಮಾಯಾ ಎಂಬ ಪಾತ್ರ ಸಂಯುಕ್ತಾ ಹೇಳಿದ್ದಾರೆ. ಮಾಯಾ ತನ್ನ ಜೀವನದ ಬಗ್ಗೆ ಎಂದಿಗೂ ಯೋಜಿಸುವುದಿಲ್ಲ ಆ ಕ್ಷಣಕ್ಕಾಗಿಯೇ ಮಾತ್ರ ಬದುಕುತ್ತಾಳೆ ಎಂದು ತಮ್ಮ ಪಾತ್ರದ ಬಗ್ಗೆ ವಿವರ ನೀಡಿದ್ದಾರೆ.

ನಾವು ಯಾವಾಗಲೂ ಭೂತಕಾಲದಲ್ಲಿ ಸಿಲುಕಿಕೊಂಡಿರುತ್ತೇವೆ ಅಥವಾ ಭವಿಷ್ಯಕ್ಕಾಗಿ ಯೋಜಿಸುತ್ತಿರುತ್ತೇವೆ.  ಸಾಮಾಜಿಕ ಮಾಧ್ಯಮದಲ್ಲಿ ಮೌಲ್ಯೀಕರಣಕ್ಕಾಗಿ ಹಾತೊರೆಯುತ್ತಿರುವ ವಯಸ್ಸಿನಲ್ಲಿ, ಮಾಯಾಳಂತೆ ಇರುವುದು ಕಷ್ಟ. ಮಾಯಾ ಪಾತ್ರ ತುಂಬಾ ಭಾವನಾತ್ಮಕವಾದದ್ದು ಎಂದಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ ಸಂಯುಕ್ತಾ ನಟನೆಯ ಬೆರಳೆಣಿಕೆಯಷ್ಟು ಬಿಡುಗಡೆಯಾಗಿವೆ. 2023 ರಲ್ಲಿ ಕ್ರಾಂತಿ, ಹೊಂದಿಸಿ ಬರೆಯಿರಿ ಈಗ ಲವ್ ಬರ್ಡ್ಸ್‌ ರಿಲೀಸ್ ಗೆ ಸಜ್ಜಾಗಿದೆ.

"ನಾನು ನಟಿಸಲು ಪ್ರಾರಂಭಿಸಿ 12 ವರ್ಷಗಳು ಕಳೆದಿವೆ ಮತ್ತು ನಾನು ಎಂದಿಗೂ ನಾಯಕಿಯಾಗಿ ನಟಿಸುವುದಿಲ್ಲ ಎಂದು ಖಚಿತಪಡಿಸಿಕೊಂಡಿದ್ದೇನೆ. 'ನಾಯಕಿ' ಲೇಬಲ್, ನನಗೆ ಬೇಡ, ಏಕೆಂದರೆ ನಾನು ಮೊದಲು ಕಲಾವಿದೆ ಎಂದು ನಾನು ನಂಬುತ್ತೇನೆ.

ನನ್ನ ಅಜ್ಜಿ (ಅಜ್ಜಿ ಭಾರ್ಗವಿ ನಾರಾಯಣ್) ಅವರು 82 ವರ್ಷ ವಯಸ್ಸಿನವರೆಗೂ ಕೆಲಸ ಮಾಡುತ್ತಿದ್ದರು ಮತ್ತು ನಾನು ಅವರ ಹೆಜ್ಜೆಗಳನ್ನು ಅನುಸರಿಸಲು ಬಯಸುತ್ತೇನೆ. ಒಬ್ಬ ನಟಿಯಾಗಿ ನಾನು ಯಾವುದೇ ನಿಯಮಗಳನ್ನು ಹಾಕಿಕೊಂಡಿಲ್ಲ ಎಂದಿದ್ದಾರೆ.

ಕಡ್ಡಿಪುಡಿ ಚಂದ್ರು ನಿರ್ಮಿಸಿರುವ ಲವ್ ಬರ್ಡ್ಸ್ ಫೆಬ್ರವರಿ 17 ರಂದು ಬಿಡುಗಡೆಯಾಗಲಿದೆ ಮತ್ತು ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್ ಮತ್ತು ಖ್ಯಾತ ಯೂಟ್ಯೂಬರ್ ಗೌರವ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಲವ್ ಬರ್ಡ್ಸ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಶಕ್ತಿ ಶೇಖರ್ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com