ಡಾ. ರಾಜ್ ಕುಟುಂಬದ ಮಾದರಿಯಲ್ಲೇ ಹಿರಿಯ ನಿರ್ದೇಶಕ ಭಗವಾನ್ ನೇತ್ರದಾನ
ಬೆಂಗಳೂರು: ಡಾ.ರಾಜ್ ಕುಮಾರ್ ಅವರಂತೆಯೇ ಇಂದು ನಿಧನರಾದ ಹಿರಿಯ ನಿರ್ದೇಶಕ ಭಗವಾನ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದರಿಂದ ಮೂರ್ನಾಲ್ಕು ಜನರಿಗೆ ದೃಷ್ಟಿ ಬರಲಿದೆ.
ಕಳದ ವರ್ಷ ಅಕಾಲಿಕ ಮರಣಕ್ಕೆ ತುತ್ತಾದ ಪುನೀತ್ ರಾಜಕುಮಾರ್ ಕೂಡ ನೇತ್ರದಾನ ಮಾಡಿದ್ದರು. ಈ ಮೂಲಕ ಅವರ ಅಭಿಮಾನಿಗಳಿಗೆ ಮಾದರಿ ಆಗಿದ್ದರು. ಅವರಿಂದ ಸ್ಫೂರ್ತಿ ಪಡೆದ ಅನೇಕರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.
ರಾಜ್ಕುಮಾರ್ ಜೊತೆ ಕೆಲಸ ಮಾಡಿದ್ದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದರಿಂದ ಮೂರ್ನಾಲ್ಕು ಜನರಿಗೆ ದೃಷ್ಟಿ ಬರಲಿದೆ.
ರಾಜ್ಕುಮಾರ್ ಅವರು ನೇತ್ರದಾನ ಮಾಡಲು ನೋಂದಣಿ ಮಾಡಿಸಿದ ಸಂದರ್ಭದಲ್ಲೇ ಎಸ್.ಕೆ ಭಗವಾನ್ ಕೂಡ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಅವರ ಮರಣಾ ನಂತರ ಕಣ್ಣಿನ ಕಾರ್ನಿಯಾವನ್ನು ತೆಗೆಯಲಾಗಿದೆ.
90 ವರ್ಷ ವಯಸ್ಸಾದರೂ ಅವರ ಕಾರ್ನಿಯ ಆರೋಗ್ಯವಾಗಿದೆ. ಅವರ ಕಣ್ಣು ಯಾರಿಗೆ ಸೂಕ್ತವಾಗುತ್ತದೆ ಎಂಬುದನ್ನು ನೋಡಿ ಹಾಕುತ್ತೇವೆ ಎಂದು’ ನಾರಾಯಣ ನೇತ್ರಾಲಯದ ಐ ಬ್ಯಾಂಕ್ ಮ್ಯಾನೇಜರ್ ವೀರೇಶ್ ಹೇಳಿಕೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ