ಕೊಚ್ಚಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಕಿರುತೆರೆ ನಟಿ ಹಾಗೂ ನಿರೂಪಕಿ ಸುಬಿ ಸುರೇಶ್ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು.
ಅವರು ದೀರ್ಘ ಕಾಲದಿಂದ ಯಕೃತ್ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಸುಬಿ ಸುರೇಶ್ ಕಳೆದ ಕೆಲ ಸಮಯದಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದಿದ್ದಾರೆ.
ಡ್ಯಾನ್ಸರ್ ಹಾಗೂ ಕಾಮಿಡಿಯನ್ ಆಗಿ ಕೆರಿಯರ್ ಆರಂಭಿಸಿದ ಸುಬಿ ಸುರೇಶ್, ‘ಮೇಡ್ ಫಾರ್ ಈಚ್ ಅದರ್’ ಹಾಗೂ ʼಕುಟ್ಟಿ ಪಟ್ಟಾಳಂʼ ಎಂಬ ಮಕ್ಕಳ ಕಾರ್ಯಕ್ರಮದ ನಿರೂಪಕಿಯಾಗಿ ಖ್ಯಾತಿಯನ್ನು ಪಡೆದುಕೊಂಡಿದ್ದರು. ‘ಗೃಹನಾಥನ್’, ‘ತಸ್ಕರ ಲಹಲಾ’, ‘ಎಲ್ಸಮ್ಮ ಎನ್ನ ಅಂಕುಟ್ಟಿ’, ʼಡ್ರಾಮಾʼ,ʼಕಾರ್ಯಸ್ಥಾನ್ʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.
Advertisement