ರಾಯರಿಂದ ಈ ತಿರುಕನ ಕನಸು ನನಸಾಗಿದೆ: ಗುರುವೈಭವೋತ್ಸವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಜಗ್ಗೆಶ್ ಮಾತು!

ಶ್ರಮಜೀವಿಗಳಿಗೆ, ಜೀವನ ಅರ್ಥಮಾಡಿಕೊಂಡವರಿಗೆ ರಾಯರು ಎಲ್ಲವನ್ನು ಕೊಡುತ್ತಾರೆ. ಎಂಎಲ್‌ಸಿ ಆಗಬೇಕು ಅಂತ ಕೇಳಿಕೊಂಡಿದ್ದೆ. ಆದರೆ ರಾಜ್ಯಸಭಾ ಸದಸ್ಯ ಸ್ಥಾನ ರಾಯರು ಕೊಟ್ಟಿದ್ದಾರೆ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್  ಹೇಳಿದ್ದಾರೆ.
ಮಂತ್ರಾಲಯದಲ್ಲಿ ನಟ ಜಗ್ಗೇಶ್
ಮಂತ್ರಾಲಯದಲ್ಲಿ ನಟ ಜಗ್ಗೇಶ್
Updated on

ರಾಯಚೂರು: ಶ್ರಮಜೀವಿಗಳಿಗೆ, ಜೀವನ ಅರ್ಥಮಾಡಿಕೊಂಡವರಿಗೆ ರಾಯರು ಎಲ್ಲವನ್ನು ಕೊಡುತ್ತಾರೆ. ಎಂಎಲ್‌ಸಿ ಆಗಬೇಕು ಅಂತ ಕೇಳಿಕೊಂಡಿದ್ದೆ. ಆದರೆ ರಾಜ್ಯಸಭಾ ಸದಸ್ಯ ಸ್ಥಾನ ರಾಯರು ಕೊಟ್ಟಿದ್ದಾರೆ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್  ಹೇಳಿದ್ದಾರೆ.

ಮಂತ್ರಾಲಯದಲ್ಲಿ ಗುರುವೈಭವೋತ್ಸವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಗ್ಗೇಶ್, ಸಿಎಂ ಬೊಮ್ಮಾಯಿ, ಸಚಿವ ಶ್ರೀರಾಮುಲು, ಅಶ್ವಥ್ ನಾರಾಯಣ್ ಎಲ್ಲರಿಗೂ ಕೇಳಿದ್ದೆ. ಆದರೆ ಎಂಎಲ್‌ಸಿ ಆಗಲಿಲ್ಲ. ಅಚ್ಚರಿ ರೂಪದಲ್ಲಿ ವಾಟ್ಸಪ್ ಕಾಲ್ ಬಂತು, ರಾಜ್ಯಸಭಾ ಸದಸ್ಯನಾದೆ. ಪದವಿ ಮುಖ್ಯವಲ್ಲ. ಅದು ಬರುತ್ತದೆ, ಹೋಗುತ್ತದೆ ಆದರೆ ನಂಬಿಕೆ ಮುಖ್ಯ ಎಂದರು.

ಯಾವುದೇ ರಾಷ್ಟ್ರ ಪ್ರಶಸ್ತಿಗಿಂತಲೂ ದೊಡ್ಡ ಪ್ರಶಸ್ತಿಯನ್ನು ಮಂತ್ರಾಲಯದಲ್ಲಿ ಪಡೆದ ಅನುಭವವಾಗಿದೆ. ಇದು ಪ್ರಶಸ್ತಿಯಲ್ಲ, ರಾಯರ ಆಶಿರ್ವಾದ. ಈ ತಿರುಕನ ಕನಸನ್ನು ರಾಯರು ನನಸು ಮಾಡಿದ್ದಾರೆ. ನಾನು ನನ್ನ ಪತ್ನಿಯನ್ನು ಪಡೆಯಲು ರಾಯರ ಆಶಿರ್ವಾದವೇ ಕಾರಣ ಎಂದು ಹೇಳಿದ ಜಗ್ಗೇಶ್ ತಮ್ಮ ಲವ್ ಸ್ಟೋರಿ ಹಾಗೂ ಪಟ್ಟ ಕಷ್ಟಗಳನ್ನು ಮೆಲುಕು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com