ರಾಜಕಾರಣಿಗಳು ಹಣ ಹೇಗೆ ಸಂಪಾದಿಸ್ತಾರೆ? ದೂರು ನೀಡಿದ ಬಿಜೆಪಿ ನಾಯಕಿ ವಿರುದ್ಧ ಕೆರಳಿ ಕೆಂಡವಾದ ಉರ್ಫಿ ಜಾವೇದ್!

ಸಾರ್ವಜನಿಕ ಸ್ಥಳಗಳಲ್ಲಿ ಓರ್ವ ಮಹಿಳೆ ತನ್ನ ದೇಹವನ್ನು ಕೀಳಾಗಿ, ಅಸಹ್ಯಕರವಾಗಿ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಗೆ ಅವಮಾನ ಎಂದು ನಟಿ ಉರ್ಫಿ ಜಾವೇದ್ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉರ್ಫಿ ಜಾವೇದ್
ಉರ್ಫಿ ಜಾವೇದ್

ಮುಂಬಯಿ: ಮುಂಬೈನ ಸಾರ್ವಜನಿಕ ಸ್ಥಳಗಳಲ್ಲಿ ಓರ್ವ ಮಹಿಳೆ ತನ್ನ ದೇಹವನ್ನು ಕೀಳಾಗಿ, ಅಸಹ್ಯಕರವಾಗಿ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಗೆ ಅವಮಾನ ಎಂದು ನಟಿ ಉರ್ಫಿ ಜಾವೇದ್ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಭೇಟಿ ಮಾಡಿ ದೂರು ದಾಖಲಿಸಿರುವ ಅವರು, ದೇಹದ ಅಂಗಾಂಗಗಳನ್ನ ಪ್ರದರ್ಶಿಸಿ ಮುಂಬೈನ ಬೀದಿಗಳಲ್ಲಿ ತಿರುಗಾಡುತ್ತಿರುವ ಈ ನಟಿ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂವಿಧಾನ ನೀಡಿರುವ ನಡವಳಿಕೆಯ ಹಕ್ಕು ಹೀಗೆ ಉಪಯೋಗವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ನಟಿ ತನ್ನ ಖಾಸಗಿ ಜೀವನದಲ್ಲಿ ಮಾಡುವ ಕೆಲಸಕ್ಕೂ ಸಮಾಜಕ್ಕೂ ಸಂಬಂಧವಿಲ್ಲ. ಆದರೆ, ಕೇವಲ ಖ್ಯಾತಿ ಗಳಿಸಲು ಈ ನಟಿ ತನ್ನ ದೇಹವನ್ನು ಮಾರ್ಕೆಟಿಂಗ್ ಮಾಡಿರುವುದು ಬೇಸರ ತರಿಸಿದೆ.

ತನ್ನ ದೇಹವನ್ನು ಪ್ರದರ್ಶಿಸಲು ಬಯಸಿದರೆ, ಅದನ್ನು ನಾಲ್ಕು ಗೋಡೆಗಳ ಹಿಂದೆ ಮಾಡಬೇಕು. ಈಕೆ ನಡೆಯಿಂದ ಸಮಾಜದಲ್ಲಿ ಕೆರಳಿಸುವ ಮನೋಭಾವ ಹೆಚ್ಚಾಗುತ್ತಿದೆ. ಈ ನಟಿಗೆ ಇದರ ಅರಿವೇ ಇಲ್ಲ. ಹಾಗಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿತ್ರಾ ವಾಘ್ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.

ಅತ್ತ ಬಿಜೆಪಿ ನಾಯಕಿ ದೂರು ನೀಡ್ತಿದ್ದಂತೆ, ಉರ್ಫಿ ಜಾವೇದ್ ಕೆರಳಿ ಕೆಂಡವಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಕೋಪದ ಪೋಸ್ಟ್​  ಹಾಕಿ ಕೌಂಟರ್ ಅಟ್ಯಾಕ್ ಮಾಡಿದ್ದಾರೆ. ಕೆಲವು ರಾಜಕಾರಣಿಗಳಿಗೆ ಮಾಡೋದಕ್ಕೆ ಬೇರೆ ಕೆಲಸನೇ ಇಲ್ಲ. ನಾನು ಮುಂಬೈನಲ್ಲಿ ಮಾನವ ಕಳ್ಳಸಾಗಣೆ ಮತ್ತು ಅಕ್ರಮವಾಗಿ ಲೈಂಗಿಕ ಬಳಕೆಯನ್ನ ವಿರೋಧಿಸಿದ್ದೆ. ಮುಂಬೈನಲ್ಲಿ ಅಕ್ರಮ ಡ್ಯಾನ್ಸ್ ಬಾರ್‌ಗಳು ಮತ್ತು ವೇಶ್ಯಾವಾಟಿಕೆ ನಿಲ್ಲಿಸಬೇಕಿದೆ.

ಈ ಬಗ್ಗೆ ಯಾರೂ ಮಾತನಾಡಲ್ಲ. ಕೇವಲ ಮೀಡಿಯಾ ಅಟೆನ್ಷನ್​ಗಾಗಿ ಮಾತ್ರ ನನ್ನ ವಿರುದ್ಧ ದೂರು ನೀಡ್ತಾರೆ ಎಂದು ಉರ್ಫಿ ಕಿಡಿಕಾರಿದ್ದಾರೆ. ರಾಜಕಾರಣಿಗಳು ಹಣ ಹೇಗೆ ಸಂಪಾದಿಸ್ತಾರೆ? ನಿಮ್ಮದೇ ಪಕ್ಷದ ನಾಯಕರ ವಿರುದ್ಧ ದೌರ್ಜನ್ಯದ ಕೇಸ್​ಗಳಿವೆಯಲ್ಲಾ? ಇದಕ್ಕೆ ನಿಮ್ಮ ಉತ್ತರವೇನು ಅಂತಾ ನಟಿ ಜಾವೇದ್ ಪ್ರಶ್ನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com