ಹಾರರ್ ಕಾಮಿಡಿ 'ಛೂ ಮಂತರ್‌' ಸಿನಿಮಾದಲ್ಲಿ ನಟ ಶರಣ್

ಶರಣ್‌ ನಟನೆಯ “ಗುರು ಶಿಷ್ಯರು’ ಒಂದು ವಿಭಿನ್ನ ಕಥಾಹಂದರದ ಸಿನಿಮಾವಾಗಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದು ನಿಮಗೆ ಗೊತ್ತೇ ಇದೆ. ಅಲ್ಲಿ ಪಿಟಿ ಟೀಚರ್‌ ಆಗಿ ರಂಜಿಸಿದ್ದ ಶರಣ್‌ ಈಗ ಹಾರರ್‌ ಮೂಲಕ ಪ್ರೇಕ್ಷಕರನ್ನು ಭಯಬೀಳಿಸಲು ಬರುತ್ತಿದ್ದಾರೆ.
ಛೂ ಮಂತರ್ ಸಿನಿಮಾ ಸ್ಟಿಲ್
ಛೂ ಮಂತರ್ ಸಿನಿಮಾ ಸ್ಟಿಲ್

ಶರಣ್‌ ನಟನೆಯ “ಗುರು ಶಿಷ್ಯರು’ ಒಂದು ವಿಭಿನ್ನ ಕಥಾಹಂದರದ ಸಿನಿಮಾವಾಗಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದು ನಿಮಗೆ ಗೊತ್ತೇ ಇದೆ. ಅಲ್ಲಿ ಪಿಟಿ ಟೀಚರ್‌ ಆಗಿ ರಂಜಿಸಿದ್ದ ಶರಣ್‌ ಈಗ ಹಾರರ್‌ ಮೂಲಕ ಪ್ರೇಕ್ಷಕರನ್ನು ಭಯಬೀಳಿಸಲು ಬರುತ್ತಿದ್ದಾರೆ.

ಶರಣ್‌ “ಛೂ ಮಂತರ್‌’ ಎಂಬ ಹಾರರ್‌ ಸಿನಿಮಾದಲ್ಲಿ ನಟಿಸಿದ್ದು, ಸದ್ದಿಲ್ಲದೇ ಚಿತ್ರೀಕರಣ ಕೂಡಾ ಮುಗಿದಿದೆ. ಚಿತ್ರದಲ್ಲಿ ಮೇಘನಾ ಗಾಂವ್ಕರ್‌, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್‌ ಪ್ರಮುಖ ಪಾತ್ರ ಮಾಡಿದ್ದಾರೆ.  ಸದ್ಯ ಚಿತ್ರದ ಫಸ್ಟ್‌ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಛೂ ಮಂತರ್‌ನಲ್ಲಿ ಶರಣ್ ಒಬ್ಬ ಮಂತ್ರವಾದಿಯ ಪಾತ್ರದಲ್ಲಿ ನಟಿಸಿದ್ದಾರೆ, ಆಧುನಿಕ ನೋಟವನ್ನು ಹೊಂದಿರುವ ಹೊಸ-ಯುಗದ ಭೂತೋಚ್ಛಾಟಕನಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಚಿಕ್ಕಣ್ಣ ಮತ್ತು ಅದಿತಿ ಪ್ರಭುದೇವ ಕೂಡ ಸೇರಲಿದ್ದಾರೆ. ಚಿತ್ರದ ತಾರಾಗಣದಲ್ಲಿ ಮೇಘನಾ ಗಾಂವ್ಕರ್, ಪ್ರಭು ಮುಂಡ್ಕೂರ್, ರಜಿನಿ ಭಾರದ್ವಾಜ್, ಧರ್ಮ ಮತ್ತು ಓಂ ಪ್ರಕಾಶ್ ರಾವ್ ಇದ್ದಾರೆ.

ತರುಣ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಮಾನಸ ತರುಣ್‌ ಹಾಗೂ ತರುಣ್‌ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಈ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಚಿತ್ರ.

“ಕರ್ವ’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ನವನೀತ್‌, ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಾರರ್‌ ಕಾಮಿಡಿ ಕಥಾಹಂದರ ಹೊಂದಿ ರುವ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. ಬೆಂಗಳೂರು, ಮೈಸೂರು, ಉತ್ತರಖಂಡ ಹಾಗೂ ಲಂಡನ್‌ನಲ್ಲಿ ಚಿತ್ರೀಕರಣ ನಡೆದಿದೆ.

ಅನೂಪ್‌ ಕಟ್ಟುಕರನ್‌ ಮೊದಲ ಬಾರಿಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕ ರಾಗಿದ್ದಾರೆ. ವೆಂಕಿ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್‌ ಹಾಗೂ ಮೋಹನ್‌ ಬಿ.ಕೆರೆ ಅವರ ಕಲಾ ನಿರ್ದೇಶನ ‘ಛೂ ಮಂತರ್‌’ ಚಿತ್ರಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com