ಹೆಣ್ಣು ಮಕ್ಕಳನ್ನು ಹೀಗೆ ತೋರಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಲ್ಲ: ಪಠಾಣ್ ಹಾಡಿನ ಬಗ್ಗೆ ಅನಂತ್ ನಾಗ್ ಅಸಮಾಧಾನ
ನಾಲ್ಕು ವರ್ಷಗಳ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಸಿನಿಮಾ ಪಠಾಣ್ ಬಿಡುಗಡೆಗೆ ಸಿದ್ಧವಾಗಿದೆ. ಪಠಾಣ್ ಸಿನಿಮಾದ ಚೊಚ್ಚಲ ಹಾಡು ಬೇಷರಂ ರಂಗ್ ಬಿಡುಗಡೆಯಾದಾಗಿನಿಂದ ವಿವಾದಕ್ಕೆ ಕಾರಣವಾಗಿದೆ.
ಬೇಷರಂ ರಂಗ್ ಹಾಡಿನ ವಿರುದ್ಧ ಆಕ್ರೋಶ ಕೇಳಿ ಬರೋಕೆ ಕಾರಣ ಬಿಕಿನಿ ಮತ್ತು ಕೇಸರಿ ಬಣ್ಣ. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡ ರೀತಿ. ಇದಕ್ಕೆ ಹಿಂದೂ ಸಂಘಟನೆಗಳು, ನಾಯಕರು ಹಾಡಿನ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದರು. ಅಷ್ಟೇ ಅಲ್ಲ ಸಿನಿಮಾವನ್ನ ಬಹಿಷ್ಕಾರ ಮಾಡುವಂತೆ ಕೂಡ ಆಗ್ರಹಿಸಿದ್ದರು.
ಇನ್ನು, ಈ ವಿರೋಧದ ಬೆನ್ನಲ್ಲೇ, ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡನ್ನು ಕುರಿತು ಮಾತನಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಹೆಣ್ಣನ್ನು ಹೀಗೆ ತೋರಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಲ್ಲ. ಸೆನ್ಸಾರ್ ತಂಡ ತಮ್ಮ ಕೆಲಸ ಮಾಡಿದ್ದರೆ ಈ ರೀತಿ ಆಗುತ್ತಿರಲಿಲ್ಲ.
ಚಲನಚಿತ್ರಗಳ ಬಗ್ಗೆ ಬಿಡಿ. ಒಟಿಟಿ ನೋಡಿ, ಅವರು ಎಲ್ಲಾ ರೀತಿಯ ಅಸಹ್ಯ ಮತ್ತು ಆಕ್ಷೇಪಾರ್ಹ ಸಂಗತಿಗಳನ್ನು ತೋರಿಸುತ್ತಾರೆ. ಎಲ್ಲವನ್ನೂ ಬಹಿರಂಗವಾಗಿ ತೋರಿಸಲಾಗುತ್ತಿದೆ. ಅವರನ್ನು ತಡೆಯಲು ಯಾರೂ ಇಲ್ಲ. ಭಾರತೀಯ ಸಿನಿಮಾ ದೊಡ್ಡ ಮತ್ತು ಸಣ್ಣ ಪರದೆಗಳಲ್ಲಿ ಇಂತಹ ನಗ್ನತೆಯನ್ನು ನಿಲ್ಲಿಸಬೇಕು. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ವಿರುದ್ಧವಾದ ವಿಷಯಗಳನ್ನು ತೋರಿಸುವುದು ಖಂಡಿತವಾಗಿಯೂ ಜನರ ನಡುವೆ ಸಂಘರ್ಷಗಳನ್ನು ಉಂಟುಮಾಡುತ್ತದೆ ಎಂದು ಅನಂತ್ ನಾಗ್ ಬೇಸರ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ