ನಾಯಿ ಕೊಟ್ಟು ದೇವ್ರಾಣೆ ಪಟಾಯಿಸಿಲ್ಲ, ಹರಿಪ್ರಿಯಾ ತಂದೆ ಶ್ರಾದ್ಧದ ದಿನ ನನ್ನ ಪ್ರೇಮ ನಿವೇದಿಸಿದೆ: ಸಿಂಹ-ಪ್ರಿಯಾ ಪ್ರೀತಿಯ ಬಗ್ಗೆ 'ವಸಿಷ್ಠ' ಸ್ಪಷ್ಟನೆ

ಹೊಸ ಬಾಳಿಗೆ ಕಾಲಿಡುವ ಸಂಭ್ರಮದಲ್ಲಿರುವ ಸ್ಯಾಂಡಲ್​​ವುಡ್​​ನ ಸ್ಟಾರ್ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು. ಈ ವೇಳೆ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪ್ರದರ್ಶಿಸಿದ್ದಾರೆ.
ವಸಿಷ್ಠ ಸಿಂಹ ಮತ್ತು ಹರಿ ಪ್ರಿಯಾ
ವಸಿಷ್ಠ ಸಿಂಹ ಮತ್ತು ಹರಿ ಪ್ರಿಯಾ

ಬೆಂಗಳೂರು: ಹೊಸ ಬಾಳಿಗೆ ಕಾಲಿಡುವ ಸಂಭ್ರಮದಲ್ಲಿರುವ ಸ್ಯಾಂಡಲ್​​ವುಡ್​​ನ ಸ್ಟಾರ್ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು. ಈ ವೇಳೆ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪ್ರದರ್ಶಿಸಿದ್ದಾರೆ.

ಮದುವೆ ಆಮಂತ್ರಣ ಕಾರ್ಡಿನಲ್ಲಿ ‘ಸಿಂಹಪ್ರಿಯಾ’ ಎಂಬ ಟ್ಯಾಗ್​​ಲೈನ್ ಇದೆ. ಅದು, ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿರೋದು. ಅವರನ್ನು ಬಿಡಬಾರದು ಎಂದು ಎಲ್ಲಾ ಕಡೆ ಹಾಕಿಸಿದ್ದೇವೆ. ಮದುವೆಗಾಗಿ ತುಂಬಾ ದಿನಗಳಿಂದ ಕಷ್ಟಪಡುತ್ತಿದ್ದೇನೆ. ಹೀಗಾಗಿ ನಮ್ಮಿಬ್ಬರ ಮದುವೆ ಅದ್ದೂರಿಯಾಗಿ ನಡೆಯಲಿದೆ ಎಂದರು.

ಜನವರಿ 26ರಂದು ಮೈಸೂರಿನಲ್ಲಿ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರುತ್ತಿದೆ. ಜನವರಿ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ವಸಿಷ್ಠ ಸಿಂಹ ಅವರು ನಾಯಿ ಕೊಟ್ಟು ಹರಿಪ್ರಿಯಾಗೆ ಪ್ರೀತಿ ಹುಟ್ಟುವಂತೆ ಮಾಡಿದರು ಎಂಬಿತ್ಯಾದಿ ಸುದ್ದಿ ಹರಡಿತ್ತು. ಆದರೆ, ಇದನ್ನು ಈ ಜೋಡಿ ಅಲ್ಲಗಳೆದಿದೆ.

ಇಬ್ಬರೂ ಕಷ್ಟಪಟ್ಟಿದ್ದೇವೆ. ಗೆಳೆತನದಿಂದ ಪರಸ್ಪರ ಇಬ್ಬರ ಕಷ್ಟಗಳು ಗೊತ್ತಾದವು. ಪರಸ್ಪರ ನಾವು ಹೆಗಲುಕೊಟ್ಟೆವು. ನಾನು ಚಿಕ್ಕವಯಸ್ಸಿನಲ್ಲಿ ತಾಯಿ ಕಳೆದುಕೊಂಡೆ. ಅವರು ತಂದೆಯನ್ನು ಕಳೆದುಕೊಂಡಿದ್ದರು. ನಾನು ನನ್ನ ತಾಯಿಯನ್ನು ಇವರಲ್ಲಿ ಕಂಡೆ’ ಎಂದಿದ್ದಾರೆ ವಸಿಷ್ಠ ಸಿಂಹ. ‘ನಾನು ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡೆ. ನನ್ನ ತಂದೆಯಲ್ಲಿರುವ ಅನೇಕ ಗುಣಗಳು ಸಿಂಹನಲ್ಲಿದೆ’ ಎಂದರು ಹರಿಪ್ರಿಯಾ.

ಹಾಗಾದರೆ ವಸಿಷ್ಠ ಸಿಂಹ ಪ್ರಪೋಸ್ ಮಾಡಿದ್ದು ಯಾವಾಗ? ಈ ಪ್ರಶ್ನೆಗೆ ವಸಿಷ್ಠ ಸಿಂಹ ಅವರೇ ಉತ್ತರ ಕೊಟ್ಟಿದ್ದಾರೆ. ‘ಅದು ಹರಿಪ್ರಿಯಾ ಅವರ ತಂದೆಯ ಕಾರ್ಯದ ದಿನ. ಆದಿನ ನಾನು ಹರಿಪ್ರಿಯಾಗೆ ಪ್ರಪೋಸ್ ಮಾಡಲೇಬೇಕು ಎಂದು ನಿರ್ಧರಿಸಿದ್ದೆ. ತಡೆಯಲಾರದೇ ಪ್ರಪೋಸ್ ಮಾಡಿದ್ದೆ. ಅದು ಮಧ್ಯರಾತ್ರಿ ಆಗಿತ್ತು. ಮುಂಜಾನೆ ಕಾರ್ಯ ಇದ್ದಿದ್ದರಿಂದ ಅವರು ನಿದ್ದೆ ಮಾಡಬೇಕಿತ್ತು. ನೀವು ಏನೂ ಉತ್ತರಿಸಬಾರದು ಎಂದು ಪ್ರಪೋಸ್ ಮಾಡಿದ್ದೆ, ‘ದೇವ್ರಾಣೆ ನಾಯಿ ಕೊಟ್ಟಿ ಪಟಾಯಿಸಿಕೊಂಡಿಲ್ಲ’ ಎಂದು ಹೇಳಿದ್ದಾರೆ ವಸಿಷ್ಠ ಸಿಂಹ.

‘ವಸಿಷ್ಠ ಸಿಂಹ ಅವರನ್ನು ಕಂಡರೆ ನನಗೂ ಇಷ್ಟ ಇತ್ತು. ಅದನ್ನು ಹೇಳಿಕೊಳ್ಳಬೇಕು ಎನ್ನುವ ಆಸೆ ನನಗೂ ಇತ್ತು. ನನನ್ನು ವಿಶೇಷವಾಗಿ ನೋಡಿಕೊಂಡರು. ನನ್ನ ತಂದೆ ತೀರಿಕೊಂಡ ದಿನವೇ ಇವರು ನನಗೆ ಸಿಕ್ಕರು. ನನ್ನ ತಂದೆಯೇ ನನಗೆ ಇವರನ್ನು ನೀಡಿದರು ಅನಿಸಿತು’ ಎಂದಿದ್ದಾರೆ ಹರಿಪ್ರಿಯಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com