'ವೀರಸಿಂಹ ರೆಡ್ಡಿ' ಸೂಪರ್ ಸ್ಟಾರ್ ಬಾಲಕೃಷ್ಣ ವಿರುದ್ಧ ದುನಿಯಾ ವಿಜಯ್ ಅಭಿನಯಕ್ಕೆ ಅಭಿಮಾನಿಗಳು ಫಿದಾ!
ಬೆಂಗಳೂರು: ಕನ್ನಡದ ದುನಿಯಾ ವಿಜಯ್ ತೆಲುಗಿನ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ವಿರುದ್ಧ ವಿಲನ್ ಆಗಿ ಅಭಿನಯಿಸಿರುವ ತೆಲುಗು ಚಿತ್ರ 'ವೀರ ಸಿಂಹ ರೆಡ್ಡಿ' ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದಲ್ಲಿ ತನ್ನ ಖಳನಾಯಕನ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದಾಗಿ ದುನಿಯಾ ವಿಜಯ್ ಹರ್ಷ ವ್ಯಕ್ತಪಡಿಸಿದ್ದಾರೆ.
ಬಾಲಕೃಷ್ಣ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿಗಳಿದ್ದಾರೆ, ದುನಿಯಾ ವಿಜಯ್ ರಾಜ್ಯದಲ್ಲಿ ಜನಪ್ರಿಯ ಆಕ್ಷನ್ ಹೀರೋ ಆಗಿದ್ದಾರೆ. ಆದಾಗ್ಯೂ, ದುನಿಯಾ ವಿಜಯ್, ವಿಲನ್ ಪಾತ್ರದಲ್ಲಿ ಅಭಿನಯಿಸುವುದಕ್ಕೆ ಅಭಿಮಾನಿಗಳಿಂದ ಅಸಮಾಧಾನ ಕೇಳಿಬಂದಿತ್ತು. ಚಿತ್ರ ಬಿಡುಗಡೆಯಾದ ನಂತರ, ದುನಿಯಾ ವಿಜಯ್ ಅವರ ಪಾತ್ರವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ ಮತ್ತು ಬಾಲಕೃಷ್ಣ ವಿರುದ್ಧ ಅವರ ನಟನೆಯನ್ನು ಶ್ಲಾಘಿಸಿದ್ದಾರೆ.
ಅಭಿಮಾನಿಗಳು ವಿಶೇಷ ಕಾರ್ಯಕ್ರಮ ಆಯೋಜನೆ ಮೂಲಕ ತಮ್ಮೊಂದಿಗೆ ಚಿತ್ರ ವೀಕ್ಷಿಸಲು ದುನಿಯಾ ವಿಜಯ್ ಅವರನ್ನು ಆಹ್ವಾನಿಸುತ್ತಿದ್ದಾರೆ. ಬಾಲಕೃಷ್ಣ ಅವರ ನಟನೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪ್ರತಿಕ್ರಿಯೆಯಿಂದ ಪಿಧಾ ಆಗರುವ ದುನಿಯಾ ವಿಜಯ್, ಪ್ರಮುಖ ಪಾತ್ರ ಸಿಕ್ಕರೆ ತೆಲುಗು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಲು ಸಿದ್ಧ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ