ತೆಲುಗು ನಿರ್ಮಾಪಕ ದಿಲ್ ರಾಜು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ: ಪ್ರಶಾಂತ್ ನೀಲ್ ಡೈರೆಕ್ಷನ್!
ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಅವರು ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿ ಆಗಿದ್ದಾರೆ. ಅವರ ಮುಂದಿನ ಸಿನಿಮಾ 'ಸಲಾರ್'ನ ಕೆಲಸಗಳು ಬಿರುಸಿನಿಂದ ಸಾಗಿವೆ. ಸೆ. 28ರಂದು ಆ ಸಿನಿಮಾ ತೆರೆಗೆ ಬರಲಿದ್ದು'ಸಲಾರ್'ಗಾಗಿ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಮೊದಲ ಬಾರಿಗೆ ಒಂದಾಗಿದ್ದಾರೆ.
ಸದ್ಯ ಕೇಳಿಬಂದಿರುವ ಹೊಸ ನ್ಯೂಸ್ ಏನೆಂದರೆ, ಪ್ರಶಾಂತ್ ನೀಲ್ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬುದು. ಅಲ್ಲಿಗೆ ಇದು ಅವರ ಮೂರನೇ ತೆಲುಗು ಸಿನಿಮಾವಾಗಲಿದೆ.
'ವಾರಿಸು' ಸಿನಿಮಾದ ಮೂಲಕ ದೊಡ್ಡಮಟ್ಟದಲ್ಲಿ ಸದ್ದು ಮಾಡಿರುವ ತೆಲುಗು ನಿರ್ಮಾಪಕ 'ದಿಲ್' ರಾಜು ಸಾಲು ಸಾಲು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ಅದರಲ್ಲಿ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಕೂಡ ಇದೆ. ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತ, 'ಪ್ರಶಾಂತ್ ನೀಲ್ ಜೊತೆಗೆ 'ರಾವಣಂ' ಎಂಬ ಸಿನಿಮಾ ಮಾಡಲಿದ್ದೇನೆ. ಅದು ದೊಡ್ಡಮಟ್ಟದ ಸಿನಿಮಾ ಆಗಿರಲಿದೆ..' ಎಂದು 'ದಿಲ್' ರಾಜು ಹೇಳಿಕೊಂಡಿದ್ದಾರೆ.
ಆ ಬಗ್ಗೆ ಸದ್ಯಕ್ಕಂತೂ ಮಾಹಿತಿ ಇಲ್ಲ. 'ದಿಲ್' ರಾಜು ಬಳಿ ನಟ ಪ್ರಭಾಸ್ ಅವರ ಕಾಲ್‌ಶೀಟ್ ಇದೆ. ಹಾಗಾಗಿ, ಪ್ರಶಾಂತ್ ನೀಲ್ ಮಾಡಲಿರುವ 'ರಾವಣಂ' ಸಿನಿಮಾಗೆ ಅವರೇ ಹೀರೋ ಆಗುವ ಸಾಧ್ಯತೆಗಳಿವೆ. ಆದರೆ ಈ ಸಿನಿಮಾ ಸದ್ಯಕ್ಕಂತೂ ಶುರುವಾಗುವ ಲಕ್ಷಣಗಳಿಲ್ಲ. ಕಾರಣ, ಪ್ರಭಾಸ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅತ್ತ ಪ್ರಶಾಂತ್ ನೀಲ್ ಕೂಡ 'ಸಲಾರ್' ಮುಗಿಸಿದ ಮೇಲೆ ಎನ್‌ಟಿಆರ್ ಜೊತೆಗೆ ಸಿನಿಮಾ ಮಾಡಬೇಕಿದೆ.
ಬಹುಶಃ 'ದಿಲ್' ರಾಜು ಅವರ ಈ ಕನಸಿನ 'ರಾವಣಂ' ಸಿನಿಮಾ 2024ರ ಅಂತ್ಯದಲ್ಲಿ ಆರಂಭವಾಗಬಹುದು ಎನ್ನಲಾಗಿದೆ. ಮತ್ತೊಂದು ಮೂಲಗಳ ಪ್ರಕಾರ, ರಾಮ್ ಚರಣ್ ಈ ಸಿನಿಮಾದಲ್ಲಿ ಹೀರೋ ಆಗಲಿದ್ದಾರೆ ಎಂಬ ಟಾಕ್ ಕೂಡ ಇದೆ. ಯಾರೇ ಹೀರೋ ಆದರೂ, ಈ ಸಿನಿಮಾವಂತೂ ಸದ್ಯಕ್ಕೆ ಟೇಕ್‌ಆಫ್ ಆಗುವುದಿಲ್ಲ. ಏತನ್ಮಧ್ಯೆ, ದಿಲ್ ರಾಜು ನಿರ್ಮಾಣದಲ್ಲಿ ಶಂಕರ್ ಅವರ ಆರ್‌ಸಿ 15, ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ